More

    ನಟ, ಬರಹಗಾರ ಕೃಷ್ಣ ನಾಡಿಗ್​ ಇನ್ನಿಲ್ಲ- ಶೂಟಿಂಗ್​ ವೇಳೆ ಹೃದಯಾಘಾತ

    ಬೆಂಗಳೂರು: ಕನ್ನಡದ ಹಲವಾರು ಧಾರಾವಾಹಿಯಲ್ಲಿ ನಟಿಸಿದ್ದ ಪ್ರಸಿದ್ಧ ನಟ, ಬರಹಗಾರ ಕೃಷ್ಣ ನಾಡಿಗ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
    ನಿನ್ನೆ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಅವರಿಗೆ ಹೃದಯಾಘಾತವಾಗಿದೆ. ಮೊದಲಿಗೆ ಎದೆನೋವು ಕಾಣಿಸಿಕೊಂಡಿತ್ತು. ನಂತರ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

    ‘ಮಿಲನ’, ‘ದೇವಿ’, ‘ಪಾರು’ ಮುಂತಾದ ಧಾರಾವಾಹಿಗಳಲ್ಲಿ ಇವರು ನಟಿಸಿದ್ದರು. ಸುಮಾರು ನಾಲ್ಕುದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಟ, ಬರಹಗಾರರಾಗಿ ಗುರುತಿಸಿಕೊಂಡಿದ್ದರು.

    ಚಿತ್ರರಂಗದಲ್ಲಿನ ಇವರ ಸಾಧನೆಗೆ ಕೆಂಪೇಗೌಡ ಪ್ರಶಸ್ತಿ ಕೂಡ ಸಂದಿತ್ತು. ಇವರು ಪತ್ನಿ ಗೀತಾ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

    ಚಿಕ್ಕಮಗಳೂರಿನ ಕಡೂರಿನ ಕೃಷ್ಣ ಅವರ ತಾಯಿ ವೀಣಾವಾದಕಿಯಾಗಿದ್ದರು. ತಂದೆ ಕೊಳಲುವಾದಕ ಹಾಗೂ ಸಂಗೀತ ನಿರ್ದೇಶಕ. ಆದ್ದರಿಂದ ಹುಟ್ಟಿನಿಂದಲೇ ಸಂಗೀತ, ಸಾಹಿತ್ಯದ ಒಡನಾಟ ಹೊಂದಿದ್ದ ಕೃಷ್ಣ ಅವರಿಗೆ ಚಿತ್ರ ನಿರ್ದೇಶಕರಾಗಬೇಕು ಎಂದು ಬಹು ವರ್ಷಗಳಿಂದ ಅವರು ಅಂದುಕೊಂಡಿದ್ದರು. ಆದರೆ ಆ ಕನಸು ನನಸಾಗಲೇ ಇಲ್ಲ ಎನ್ನಲಾಗಿದೆ.

    ಇದನ್ನೂ ಓದಿ: ಆಗಸದಲ್ಲಿ ವಿಚಿತ್ರ ವಸ್ತು ನೋಡಿ ಬೆಚ್ಚಿಬಿದ್ದ ಉತ್ತರ ಪ್ರದೇಶ ಜನ: ಏಲಿಯನ್​ ಅಂದುಕೊಂಡವರಿಗೆ ಕಾದಿತ್ತು ಶಾಕ್​!

    ‘ನಿಮ್ಮ ವಿದಾಯ ಸೃಷ್ಟಸಿದ ಶೂನ್ಯ ಅಗಾಧವಾದದ್ದು….ನಿಮ್ಮ ಮಮತೆ ತುಂಬಿದ ಹೃದಯ, ಜ್ಞಾನ ತುಂಬಿದ ಮಾತುಗಳು,ಮರೆಯಲಾಗದ ನಟನೆ…..ಅಂಥಾ ಹೃದಯವೇ ನಿಮ್ಮನ್ನು ಬಿಟ್ಟಿತೇ..’ ಎಂದು ಟಿ ಎನ್ ಸೀತಾರಾಮ್ ಅವರು ಕೃಷ್ಣ ನಾಡಿಗ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

    ಇಡೀ ಇಂಡಸ್ಟ್ರಿಯಲ್ಲಿ ಇವತ್ತಿನ ತನಕ, ಪರಿಪೂರ್ಣ ಮನಸಿನಿಂದ, ಅಪ್ಪಟ ಪ್ರೀತಿಯಿಂದ, ನನ್ನನ್ನು ಹಾರೈಸಿದ, ಗದರಿದ, ಮಗುವಂತೆ ಮುನಿಸಿಕೊಂಡ, ನಾನು ಗೆದ್ದಾಗ ಮಕ್ಕಳಂತೆ ಖುಶಿಪಟ್ಟ, ತಪ್ಪು ಮಾಡಿದಾಗ ಉಗಿದು ಉಪ್ಪಿನಕಾಯಿ ಹಾಕಿದ, ಅಷ್ಟೇ ಬೇಗ ಕರಗಿ ಮುದ್ದು ಮಾತಾಡುತ್ತಿದ್ದ. ನೀನು ಬೆಳಿತಿಯಾ ಮಗೂ, ನಾನು ಮಾಡಲು ಆಗದಿದ್ದನ್ನು ನೀನು ಮಾಡಬೇಕು ಕಣೋ ಅಂತ ತುಂಬು ಹೃದಯದಿಂದ ಹರಸುತ್ತಿದ್ದ, ಲೇ ಅಕ್ಷರ ರಾಕ್ಷಸಾ!! ಅಂತ ಕರೆಯುತ್ತಿದ್ದ, ಜೋಗಿಜಂಗಮನಂಥಾ ನನ್ನಿಂದ ಡುಮ್ಮಣ್ಣಾ ದೊಡ್ಡಪ್ಪಾ ಅಂತ ಕರೆಸಿಕೊಳ್ಳುತ್ತಿದ್ದ ಏಕೈಕ ಜೀವ. ಇನ್ಯಾರನ್ನು ದೊಡ್ಡಪ್ಪಾ ಅಂತ ಕರೆಯಲಿ..? ಯಾರ ಪಾದಕ್ಕೆ ಬಿದ್ದು ಗುರುಗಳೇ ಎನ್ನಲಿ ? ಈ ಸಲ ನವರಾತ್ರಿಯ ಪೂಜೆಗಾದರೂ ಮನೆಗೆ ಎಳ್ಕೊಂಡು ಬರಲೇಬೇಕು, ನಾನು ಪೂಜಿಸುವ ಅಮ್ಮನನ್ನು ತೋರಿಸಬೇಕು ಅಂತ ಬೆಳಿಗ್ಗೆ ತಾನೆ ಅಂದುಕೊಂಡೆ. ನೇರವಾಗೇ ಅಮ್ಮನನ್ನು ನೋಡಲು ಹೋಗಿಬಿಟ್ಟಿರಾ ಗುರುಗಳೇ….ಯಾಕೋ ಅನಾಥಭಾವ ಆವರಿಸಿದೆ. ಇಷ್ಟು ದುಃಖ ಕೊಟ್ಟು ಯಾಕ್ ಹೋದಿರಿ’ ಎಂದು ನಿರ್ದೇಶಕ ರಘುಚರಣ್ ತಿಪಟೂರು  ಕಂಬನಿ ಮಿಡಿದಿದ್ದಾರೆ.

    ಇಂದು ಬೆಳಗ್ಗೆ 10.30ರವರೆಗೆ ಬೆಂಗಳೂರಿನ ಗಿರಿನಗರದಲ್ಲಿ ಇರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಗಂಡನಿಂದ ದೂರವಾದರೂ ಅಲ್ಲಿಯೇ ಉಳಿಯುವ ಅಧಿಕಾರ ಹೆಣ್ಣಿಗಿದೆ- ಸುಪ್ರೀಂನಿಂದ ಮಹತ್ವದ ತೀರ್ಪು

    ಇನ್ನುಮುಂದೆ ಒಟಿಪಿ ಇದ್ದರಷ್ಟೇ ಮನೆಬಾಗಿಲಿಗೆ ಸಿಲಿಂಡರ್​: ವಂಚನೆ ತಡೆಗೆ ನೂತನ ಯೋಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts