More

    ತಹಸೀಲ್ದಾರ್ ಕಚೇರಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಭೇಟಿ ; ದಾಖಲಾತಿ ಪರಿಶೀಲಿಸಿ


    ಕಂದಾಯ, ಸಚಿವ, ಕೃಷ್ಣ, ತಹಸೀಲ್ದಾರ್, ಕಚೇರಿಗೆ, ಭೇಟಿ, revenue, minister, krishna, tehsildar, to office, visit
    ರಾಣೆಬೆನ್ನೂರ: ಇಲ್ಲಿಯ ಮಿನಿ ವಿಧಾನಸೌಧಕ್ಕೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಗುರುವಾರ ಭೇಟಿ ನೀಡಿ ತಹಸೀಲ್ದಾರ್ ಕಚೇರಿಯ ದಾಖಲಾತಿ ಪರಿಶೀಲಿಸಿದರು.
    ಪಡಸಾಲೆ ಕೊಠಡಿ ಮುಚ್ಚಿರುವ ಬಗ್ಗೆ ಮಾಹಿತಿ ಪಡೆದುಕೊಂಡು ಕೊಠಡಿಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳುವಂತೆ ಸಂಬಂಧ ಪಟ್ಟ ಸಿಬ್ಬಂದಿ ಸೂಚಿಸಿದರು. ಕಾಗದ ರಹಿತ ಆಡಳಿತ ಕೊಠಡಿಗೆ ತೆರಳಿ ದಾಖಲೆಗಳನ್ನು ಪರಿಶೀಲಿಸಿದರು. ನಂತರ ಲೆಕ್ಕ ಪತ್ರ ಶಾಖೆ, ಭೂ ದಾಖಲೆಗಳ ಕೊಠಡಿ ವಿಭಾಗಕ್ಕೆ ತೆರಳಿ ದಾಖಲೆಗಳನ್ನು ಪರಿಶೀಲನೆ ಮಾಡಿ ಸಾರ್ವಜನಿಕರು ನೀಡುವ ಅರ್ಜಿಗಳಿಗೆ ಶೀಘ್ರ ಕ್ರಮ ತೆಗೆದುಕೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿದರು.
    ಡಿಜಿಟಲ್ ರೆಕಾರ್ಡ ವಿಭಾಗಕ್ಕೆ ಭೇಟಿ ನೀಡಿ ಆಕಾರ ಬಂದು ಬಗ್ಗೆ ಮಾಹಿತಿ ಪಡೆದುಕೊಂಡರು. ಅಭಿಲೇಕಾಲಯದ ರೆಕಾರ್ಡ್ ರೂಮ್ ಅಲ್ಲಿ ದಾಖಲೆಗಳ ಇಂಡೆಕ್ಸ್ ಪರಿಶೀಲನೆಗೆ ಇರಿಸಲಾಗಿದ್ದ ಯಂತ್ರವನ್ನು ಈವರೆಗೂ ಉಪಯೋಗಿಸದೆ ಇರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿ ಅವರು, ಕೂಡಲೇ ಅದನ್ನು ಉಪಯೋಗಿಸಬೇಕು ಎಂದು ಸೂಚಿಸಿದರು.
    ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ತಹಸೀಲ್ದಾರ್ ಕಚೇರಿಯಲ್ಲಿ ನೂರಾರು ವರ್ಷಗಳ ಕಾಗದದ ದಾಖಲೆಗಳು ಇವೆ. ಅವುಗಳು ಈಗಾಗಲೇ ಶಿಥೀಲಾವಸ್ಥೆಯಲ್ಲಿವೆ. ಆದ್ದರಿಂದ ಅವುಗಳನ್ನು ಉಳಿಸಿಕೊಳ್ಳುವ ಬಗ್ಗೆ ತಹಸೀಲ್ದಾರ್ ಜತೆ ಮಾತನಾಡಿದ್ದೇನೆ ಎಂದರು.
    ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರತಿ ಇಲಾಖೆಯ ಅಧಿಕಾರಿಗಳು ಎಚ್ಚರವಹಿಸಬೇಕು. ಈಗಾಗಲೇ ಶಿಥಿಲಾವ್ಯವಸ್ಥೆಯಲ್ಲಿರುವ ದಾಖಲೆಗಳು ಕಳೆದುಹೋದರೆ ಜನರಿಗೆ ಬಹಳ ಸಮಸ್ಯೆಯಾಗುತ್ತದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಎಲ್ಲ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ, ಡಿಜಿಟಲ್ ರೂಪದಲ್ಲಿ ಮುಂದಿನ ಪೀಳಿಗೆಗೂ ಉಳಿಸುವಂತಹ ಕಾರ್ಯ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ.
    ಸಾರ್ವಜನಿಕರಿಗೆ ಸುಲಭವಾಗಿ ದಾಖಲೆಗಳು ಲಭ್ಯವಾಗುವಂತೆ ಮಾಡುವುದು. ರೆಕಾರ್ಡ್ ರೂಪಗಳಲ್ಲಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಅವುಗಳನ್ನು ಉಳಿಸುವಂತಹ ಕೆಲಸ ಮಾಡಬೇಕು. ಅದಕ್ಕಾಗಿ ಸರ್ವೇ ರೂಮ್ ಹಾಗೂ ರೆಕಾರ್ಡ್ ರೂಮ್ ಗಳನ್ನು ವೀಕ್ಷಣೆ ಮಾಡಿದ್ದೇನೆ. ಒಟ್ಟಾರೆ ಕಂದಾಯ ಇಲಾಖೆ ಜನಗಳಿಗೆ ಅನುಕೂಲವಾಗುವ ಹಾಗೆ ಪ್ರಾಮಾಣಿಕ ಕೆಲಸ ಮಾಡಬೇಕು. ಜನರಿಗೆ ನಮ್ಮಿಂದ ತೊಂದರೆಯಾಗಬಾರದು. ಜನರ ಜೀವನಕ್ಕೆ ಶಕ್ತಿ ತುಂಬುವ ರೀತಿಯಲ್ಲಿ ನಾವು ಕೆಲಸ ಮಾಡಬೇಕು ಎಂದರು.
    ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ತಹಸೀಲ್ದಾರ್ ಎಚ್.ಎನ್. ಶಿರಹಟ್ಟಿ ಹಾಗೂ ಇತರ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts