More

    ಇನ್ನುಮುಂದೆ ಒಟಿಪಿ ಇದ್ದರಷ್ಟೇ ಮನೆಬಾಗಿಲಿಗೆ ಸಿಲಿಂಡರ್​: ವಂಚನೆ ತಡೆಗೆ ನೂತನ ಯೋಜನೆ

    ನವದೆಹಲಿ : ಮನೆಗೆ ಬಳಸುವ ಸಿಲಿಂಡರ್​ಗಳ ಪೂರೈಕೆಗೆ ಇನ್ನುಮುಂದೆ ಒಂದು-ಬಾರಿ ಪಾಸ್‌ವರ್ಡ್ (ಒಟಿಪಿ) ಅಗತ್ಯವಿದೆ. ಈ ಪಾಸ್​ವರ್ಡ್​ ಹೇಳಿದರಷ್ಟೇ ಮನೆಗೆ ಸಿಲಿಂಡರ್​ ವಿತರಣೆ ಮಾಡಲಾಗುತ್ತದೆ.

    ಇದಾಗಲೇ ಈ ಯೋಜನೆಯನ್ನು ಹಲವು ಕಡೆಗಳಲ್ಲಿ ಜಾರಿಗೆ ತರಲಾಗಿದ್ದರೂ, ನವೆಂಬರ್​ 1ರಿಂದ ಒಟಿಪಿಯನ್ನು ಕಡ್ಡಾಯ ಮಾಡಲಾಗಿದೆ. ಈಗಲೂ ಹಲವರಿಗೆ ಸಿಲಿಂಡರ್​ ಬುಕ್​ ಮಾಡಿದಾಗ ಒಟಿಪಿ ಬರುತ್ತಿದೆ. ಆದರೆ ಅದನ್ನು ಅಷ್ಟಾಗಿ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಗ್ಯಾಸ್​ ಸಿಲಿಂಡರ್​ ಪೂರೈಕೆ ಮಾಡುವವರೂ ಅದನ್ನು ಅಷ್ಟಾಗಿ ಕೇಳುತ್ತಿರಲಿಲ್ಲ. ಅದರೆ ಇದೀಗ ಒಟಿಪಿ ಇದ್ದರಷ್ಟೇ ಸಿಲಿಂಡರ್​ ನೀಡಲಾಗುತ್ತದೆ.

    ತೈಲ ಮಧ್ಯವರ್ತಿಗಳು ಸಿಲಿಂಡರ್‌ಗಳ ಕಳ್ಳತನವನ್ನು ತಡೆಗಟ್ಟಲು ಮತ್ತು ಸರಿಯಾದ ಗ್ರಾಹಕರನ್ನು ಗುರುತಿಸಲು ಡೆಲಿವರಿ ದೃಢೀಕರಣ ಕೋಡ್ (ಡಿಎಸಿ) ಎಂಬ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕಳ್ಳತನ ತಡೆಯುವಲ್ಲಿ ಒಟಿಪಿ ಕಾರ್ಯ ನಿರ್ವಹಿಸಲಿದೆ.

    ಒಟಿಪಿ ಎಂದರೆ ಒನ್​ ಟೈಂ ಪಾಸ್​ವರ್ಡ್​ ಎಂದರೆ ಒಮ್ಮೆ ಬಳಕೆಮಾಡುವ ಪಾಸ್​ವರ್ಡ್​. ಗ್ಯಾಸ್​ ಬಳಕೆದಾರರು ಸಿಲಿಂಡರ್ ಅನ್ನು ಬುಕ್ ಮಾಡಿದಾಗ, ಅವರು ಗ್ಯಾಸ್​ ಏಜೆನ್ಸಿಗೆ ನೀಡಿರುವ ಮೊಬೈಲ್​ ಸಂಖ್ಯೆಗೆ ಒಂದು ಸಂಖ್ಯೆ ಬರುತ್ತದೆ. ಅದೇ ಒಟಿಪಿ. ಅದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು, ಇಲ್ಲವೇ ಒಂದು ಕಡೆ ಬರೆದಿಟ್ಟುಕೊಳ್ಳಬೇಕು.

    ಇದನ್ನೂ ಓದಿ: ಭದ್ರತೆ ಹಿಂದಕ್ಕೆ ಪಡೆದ ಪಂಜಾಬ್​: ಕೆಚ್ಚೆದೆಯ ಯೋಧ ಬಲ್ವಿಂದರ್​ ಗುಂಡಿಗೆ ಬಲಿ

    ಗ್ಯಾಸ್​ ವಿತರಣೆ ಮಾಡಲು ಗ್ಯಾಸ್​ಬಾಯ್​ ಬಂದಾಗ ಆ ಸಂಖ್ಯೆಯನ್ನು ಹೇಳಿದರೆ ಆಯಿತು. ಇದರಿಂದಾಗಿ ಗ್ಯಾಸ್​ ಅನ್ನು ಬೇರೆ ವ್ಯಕ್ತಿಗಳಿಗೆ ಆತ ನೀಡುವುದು ತಪ್ಪುತ್ತದೆ,. ಜತೆಗೆ ಒಂದು ವೇಳೆ ನೀವು ಮನೆಯಲ್ಲಿ ಇಲ್ಲದೇ ಹೋದರೆ, ಪುನಃ ನಿಮಗೇ ಆ ಸಿಲಿಂಡರ್​ ಇನ್ನೊಂದು ದಿನ ಸಿಗುತ್ತದೆ.

    ಈಗ ಸದ್ಯ ಸಿಲಿಂಡರ್​ ವಿತರಣೆಯಲ್ಲಿ ಭಾರಿ ಮೋಸ ಆಗುತ್ತಿದೆ. ಕೆಲವರು ಗ್ಯಾಸ್​ ಬುಕ್​ ಮಾಡಿದ ಮನೆಗಳಿಗೆ ಗ್ಯಾಸ್​ ನೀಡದೇ ಬೇರೆಯವರಿಗೆ ಮಾರಿಕೊಳ್ಳುತ್ತಿದ್ದಾರೆ. ತಮಗೆ ಬೇಕಾದ ಹೋಟೆಲ್​ ಅಥವಾ ಇತರರಿಗೆ ಸಿಲಿಂಡರ್​ ನೀಡುವುದು, ಆ ಬಗ್ಗೆ ವಿಚಾರಿಸಿದರೆ, ನಿಮ್ಮ ಮನೆಯ ಬಾಗಿಲು ಹಾಕಲಾಗಿತ್ತು ಎಂದೋ ಅಥವಾ ನಾವು ಬಂದಾಗ ನೀವು ಇರಲಿಲ್ಲ ಎಂದೋ ಸುಳ್ಳು ಹೇಳುವುದು ಸಾಮಾನ್ಯವಾಗಿದೆ. ಒಟಿಪಿಯಿಂದಾಗಿ ಗ್ರಾಹಕರಿಗೆ ಇಂಥ ತಲೆನೋವಿನ ಸಮಸ್ಯೆ ಇರುವುದಿಲ್ಲ. ಅಷ್ಟೇ ಅಲ್ಲದೇ ಬೇರೆ ಬೇರೆ ವಿಧಾನದಲ್ಲಿ ಸಿಲಿಂಡರ್​ ಮೋಸದ ವ್ಯವಹಾರ ಆಗುವುದೂ ತಪ್ಪಲಿದೆ.

    ಒಂದು ವೇಳೆ ನಿಮ್ಮ ಮೊಬೈಲ್​ ಸಂಖ್ಯೆಯನ್ನು ಏಜೆನ್ಸಿಗೆ ನೋಂದಣಿ ಮಾಡಿಕೊಳ್ಳದೇ ಹೋದರೆ ಕೂಡಲೇ ಮಾಡಿಕೊಳ್ಳಬೇಕು. ಅಥವಾ ಮೊಬೈಲ್​ ಸಂಖ್ಯೆಯಲ್ಲಿ ಬದಲಾವಣೆಯಾಗಿದ್ದರೆ ತಿಳಿಸಬೇಕು. ನಿಮಗೆ ಒಟಿಪಿ ಯಾವ ಸಂಖ್ಯೆಗೆ ಬೇಕೋ ಆ ಸಂಖ್ಯೆಯನ್ನು ನಿಮ್ಮ ಏಜೆನ್ಸಿಗೆ ನೀಡಬೇಕು. ಇಲ್ಲದಿದ್ದರೆ ಸಿಲಿಂಡರ್​ ಪೂರೈಕೆ ಆಗುವುದು ಕಷ್ಟವಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

    10ನೇ ಟೆಸ್ಟ್​ನಲ್ಲಿ ಪಾಸಿಟಿವ್​ ಬಂತು: ತಟ್ಟೆ-ಲೋಟ ಇಟ್ಕೊಂಡು ಜೀವನ ಮಾಡ್ದೆ- ರೇಣುಕಾಚಾರ್ಯ

    ಮೊಬೈಲ್​ ಕೊಡಿಸಿಲ್ಲ ಎಂದು ಅಜ್ಜಿಯ ರುಂಡ ಕತ್ತರಿಸಿ ಟೇಬಲ್​ ಮೇಲಿಟ್ಟ!

    ಲಕ್ಷ್ಮಿಬಾಂಬ್​ ಬದಲು ಸಲ್ಮಾಬಾಂಬ್​ ಎಂದು ಹೆಸರಿಡುವ ಧೈರ್ಯ ಇದೆಯೆ- ಚಿತ್ರದ ವಿರುದ್ಧ ಅಭಿಯಾನ ಶುರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts