More

    10ನೇ ಟೆಸ್ಟ್​ನಲ್ಲಿ ಪಾಸಿಟಿವ್​ ಬಂತು: ತಟ್ಟೆ-ಲೋಟ ಇಟ್ಕೊಂಡು ಜೀವನ ಮಾಡ್ದೆ- ರೇಣುಕಾಚಾರ್ಯ

    ಬೆಂಗಳೂರು: ಅಧಿವೇಶನದಲ್ಲಿ ಪಾಲ್ಗೊಂಡಾಗ ನನಗೆ ಪಾಸಿಟಿವ್ ಬಂದಿರಬೇಕು. ನನ್ನ ಕ್ಷೇತ್ರದಲ್ಲಿ ಇದ್ದಾಗ ಬಂದಿರಲಿಲ್ಲ. ನನಗಿದು ಪಾಠ ಕಲಿಸಿದೆ. ನಾನು ಮನೆಯವರಿಂದ ದೂರ ಇದ್ದೆ. ಸಂಪೂರ್ಣವಾಗಿ ಪ್ರತ್ಯೇಕವಾಗಿ ಇದ್ದೆ. ನನ್ನ ಕೋಣೆ ನಾನೇ ಕ್ಲೀನ್ ಮಾಡಿಕೊಳ್ಳುತ್ತಿದ್ದೆ. ಬಟ್ಟೆ ನಾನೇ ತೊಳೆದುಕೊಳ್ಳುತ್ತಿದ್ದೆ. ತಟ್ಟೆ, ಲೋಟ ಇಟ್ಟುಕೊಂಡು ಜೀವನ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದರು.

    ಕರೊನಾ ಸೋಂಕಿನಿಂದ ಗುಣಮುಖರಾಗಿರುವ ಅವರು, ಕರೊನಾ ಸಮಯದ ಅನಿಸಿಕೆಗಳನ್ನು ಪತ್ರಕರ್ತರ ಮುಂದೆ ಬಿಚ್ಚಿಟ್ಟಿದ್ದಾರೆ.

    ನಾನು 9 ಬಾರಿ ಪರೀಕ್ಷೆ ಮಾಡಿಸಿಕೊಂಡಾಗ ನೆಗೆಟಿವ್ ಬಂದಿತ್ತು. 10ನೇ ಬಾರಿ ಪಾಸಿಟಿವ್ ತೋರಿಸಿತು. ಪ್ರಧಾನಿಗಳು, ಸಿಎಂ ಯಡಿಯೂರಪ್ಪರವರು ಜನರಿಗೆ ಮಾರ್ಗಸೂಚಿ ಫಾಲೋ ಮಾಡಿ ಅಂತ ಹೇಳಿದರೂ ಕೇಳುವುದಿಲ್ಲ. ನಿರ್ಲಕ್ಷ್ಯದಿಂದ ಕರೊನಾ ಕೇಸ್ ಜಾಸ್ತಿ ಆಗುತ್ತಿದೆ ಎಂದರು.

    ಇದನ್ನೂ ಓದಿ: 22 ತಿಂಗಳ ಬಳಿಕ ಭಕ್ತರಿಗೆ ಸುಳವಾಡಿ ಕಿಚ್ಚುಗುತ್ತಿ ಮಾರಮ್ಮನ ದರ್ಶನ!

    ಕರೊನಾ ನನಗೆ ಪಾಠ ಕಲಿಸಿದೆ. ಕರೊನಾದ ಬಗ್ಗೆ ವದಂತಿ ಹರಡುತ್ತಿದೆ. ಅದೆಲ್ಲಾ ನಂಬಬೇಡಿ. ಪಾಸಿಟಿವ್ ಬರದೇ ಇದ್ದರೂ ಪಾಸಿಟಿವ್ ಇದೆ ಎಂದು ಹೇಳಿ ಹಣ ಮಾಡ್ತಾರೆ ಎನ್ನುವವರಿದ್ದಾರೆ. ಇಂಥದ್ದಕ್ಕೆ ಕಿವಿಗೊಡಬೇಡಿ. ಪ್ರತಿಯೊಬ್ಬರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ನನ್ನ ಹೆಂಡತಿ, ಸಹೋದರಿ, ಅತ್ತಿಗೆಗೂ ಪಾಸಿಟಿವ್​ ಆಗಿದೆ. ಇದೇನು ಅವಮಾನ ಅಲ್ಲ. ಸ್ವಯಂ ಪ್ರೇರಿತರಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ರೇಣುಕಾಚಾರ್ಯ ಹೇಳಿದರು.

    ಚುನಾವಣೆ ಸಮಯದಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಕಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಚುನಾವಣೆ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಹೀಗಾಗಿ ಚುನಾವಣೆ ಮಾಡಬೇಕಾಗುತ್ತೆ. ಉಪ ಚುನಾವಣೆ ಕೆಲ ಕ್ಷೇತ್ರದಲ್ಲಿ ನಡೆಯುತ್ತೆ. ಆದರೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಜನ ಜಿದ್ದಿಗೆ ಬೀಳ್ತಾರೆ. ಹೀಗಾಗಿ ಗ್ರಾಮ ಪಂಚಾಯತ್ ಚುನಾವಣೆ ಬಗ್ಗೆ ಯೋಚನೆ ಮಾಡಲೇಬೇಕು. ಸರ್ಕಾರ, ವಿಪಕ್ಷದ ನಾಯಕರು ಈ ಬಗ್ಗೆ ನಿರ್ಧಾರ ಮಾಡಲಿ. ಈ ಬಗ್ಗೆ ನಾನು ಮಾತಾಡೋದು ಸರಿಯಲ್ಲ ಎಂದು ಎಚ್ಚರಿಸಿದರು.

    ಲಕ್ಷ್ಮಿಬಾಂಬ್​ ಬದಲು ಸಲ್ಮಾಬಾಂಬ್​ ಎಂದು ಹೆಸರಿಡುವ ಧೈರ್ಯ ಇದೆಯೆ- ಚಿತ್ರದ ವಿರುದ್ಧ ಅಭಿಯಾನ ಶುರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts