ಲಕ್ಷ್ಮಿಬಾಂಬ್​ ಬದಲು ಸಲ್ಮಾಬಾಂಬ್​ ಎಂದು ಹೆಸರಿಡುವ ಧೈರ್ಯ ಇದೆಯೆ- ಚಿತ್ರದ ವಿರುದ್ಧ ಅಭಿಯಾನ ಶುರು

lakshmibomb
Published on

ಮುಂಬೈ; ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಲಕ್ಷ್ಮಿ ಬಾಂಬ್ ಟ್ರೈಲರ್ ರಿಲೀಸ್ ಆಗಿದ್ದು ಇದೀಗ ಭಾರಿ ಸದ್ದು ಮಾಡುತ್ತಿದೆ.

ಇದನ್ನು ಮೆಚ್ಚಿ ಹಲವಾರು ಮಂದಿ ಕಮೆಂಟ್​ ಮಾಡುತ್ತಿರುವ ಬೆನ್ನಲ್ಲೇ ಈ ಚಿತ್ರವನ್ನು ವಿರೋಧಿಸಿ ಇದೀಗ ಹ್ಯಾಷ್​ಟ್ಯಾಗ್​ ಅಭಿಯಾನ ಶುರುವಾಗಿದೆ. ಟ್ರೈಲರ್ ಬಿಡುಗಡೆಯಾಗಿ 20ಗಂಟೆಯಲ್ಲಿ 7 ದಶಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿರುವ ಈ ಟ್ರೇಲರ್​ಗೆ ಸಂಬಂಧಿಸಿದಂತೆ ಇದೀಗ ಆಕ್ರೋಶವೂ ವ್ಯಕ್ತವಾಗುತ್ತಿದೆ. #BoycottLaxmmiBomb ಹೆಸರಿನಲ್ಲಿ ಇದೀಗ ಚಿತ್ರವನ್ನು ನೋಡದಂತೆ ಅಭಿಯಾನ ಶುರುವಾಗಿದೆ.

ಇದಕ್ಕೆ ಕೆಲವು ಪ್ರಮುಖ ಕಾರಣಗಳು ಇವೆ. ಅದೇನೆಂದರೆ. ಮೊದಲನೆಯದ್ದಾಗಿ ಇದು ಹಿಂದೂವಿರೋಧಿ ಎಂಬುದು. ಈ ಚಿತ್ರದಲ್ಲಿ ಅವರದ್ದು ಮುಸ್ಲಿಂ ಪಾತ್ರವಾಗಿದ್ದು, ಲವ್​ ಜಿಹಾದ್​ ಬಗ್ಗೆ ಮಾತನಾಡಿದ್ದಾರೆ ಎನ್ನುವುದು ನೆಟ್ಟಿಗರ ಆಕ್ರೋಶ. ಮಾತ್ರವಲ್ಲದೇ, ಹಿಂದೂ ಧರ್ಮಕ್ಕೆ ಅವಹೇಳನವಾಗುವ ರೀತಿಯಲ್ಲಿ ಇದನ್ನು ಚಿತ್ರಿಸಲಾಗಿದೆ ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ.

ಹಿಂದೂಗಳು ಈ ಚಿತ್ರವನ್ನು ಬಹಿಷ್ಕಾರ ಮಾಡಿ. ಈ ಚಿತ್ರದ ನಿರ್ಮಾಪಕರು ಶಬಿನಾ ಖಾನ್​. ಅವರು ಕಾಶ್ಮೀರದ ಪ್ರತ್ಯೇಕತಾವಾದಿಗಳು. ಒಂದು ವೇಳೆ ಅಷ್ಟು ಧೈರ್ಯ ಇದ್ದಿದ್ದರೆ ಅಕ್ಷಯ್​ಕುಮಾರ್​ ಅವರು ಲಕ್ಷ್ಮಿಬಾಂಬ್​ ಎನ್ನುವ ಬದಲು ಆಸಿಯಾಬಾಂಬ್​ ಎಂದು ಹೇಳಬೇಕಿತ್ತು. ಹಿಂದೂಗಳಿಗೆ ನೋವಾಗುವಂತೆ ಏಕೆ ಹೆಸರು ಇಡಬೇಕು ಎಂದು ಭಾರಿ ಆಕ್ರೋಶ ವ್ಯಕ್ತವಾಗಿದೆ.

ಅಕ್ಷಯ್​ ಕುಮಾರ್​ ಅವರು ಕೆನಡಾ ಪೌರತ್ವ ಹೊಂದಿರುವ ಕಾರಣ, ಹಿಂದೂಗಳ ಬಗ್ಗೆ ಅವರಿಗೆ ಅಭಿಮಾನ ಇಲ್ಲ ಎಂದು ಕೆಲವರು ಹೇಳಿದ್ದಾರೆ. ಸಿನಿಮಾ ಬಿಟ್ಟಮೇಲೆ ಕೆನಡಾಕ್ಕೆ ಹೋಗುವೆ ಎಂದು ಹೇಳಿರುವ ನಟನಿಂದ ಇನ್ನೇನು ಬಯಸಲು ಸಾಧ್ಯ ಎಂದು ಕೇಳಿದ್ದಾರೆ.

ಇದರ ಜತೆಗೆ, ಸಿನಿರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ಡ್ರಗ್ಸ್​ ವಿಚಾರಕ್ಕೆ ಸಂಬಂಧಿಸಿದಂತೆ ನಟ ಅಕ್ಷಯ್​ ಕುಮಾರ್​ ನೀಡಿರುವ ಪ್ರತಿಕ್ರಿಯೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ಅಕ್ಷಯ್ ಚಿತ್ರರಂಗವನ್ನು ಸಮರ್ಥಿಸಿಕೊಂಡಿದ್ದಾರೆ ಎನ್ನುವ ಆರೋಪ ವ್ಯಕ್ತವಾಗುತ್ತಿದೆ. ಸುಶಾಂತ್​ಸಿಂಗ್​ ರಜಪೂತ್​ ವಿಷಯದಲ್ಲಿಯೂ ಇವರು ಏನೂ ಮಾತನಾಡಿಲ್ಲ ಎನ್ನುವುದೂ ಆಕ್ರೋಶಕ್ಕೆ ಸೇರ್ಪಡೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net