More

    ಕಮರ್ಷಿಯಲ್​ ಎಲ್​ಪಿಜಿ ಸಿಲಿಂಡರ್​ ಬೆಲೆ ಇಳಿಕೆ: 39.50 ರೂಪಾಯಿ ಕಡಿತ ಆಗಿದ್ದೇಕೆ?

    ನವದೆಹಲಿ: ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಬೆಲೆಯನ್ನು ಪ್ರತಿ 19 ಕೆಜಿ ಸಿಲಿಂಡರ್‌ಗೆ 39.50 ರಷ್ಟು ಕಡಿತಗೊಳಿಸಲಾಗಿದೆ.

    ಈಗ ಇಂಡಿಯನ್ ಆಯಿಲ್‌ ಕಾರ್ಪೊರೇಷನ್ (IOC)ನ ಇತ್ತೀಚಿನ ಬೆಲೆ ಮಾಹಿತಿಯ ಪ್ರಕಾರ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕೈಗಾರಿಕಾ ಅಪ್ಲಿಕೇಶನ್‌ಗಳಲ್ಲಿ ಬಳಸಲಾಗುವ ಸಬ್ಸಿಡಿ ರಹಿತ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ 1,757 ರೂ, ಕೋಲ್ಕತ್ತಾದಲ್ಲಿ 1,868.50 ರೂ, ಮುಂಬೈನಲ್ಲಿ 1,710 ರೂ. ಮತ್ತು ಚೆನ್ನೈನಲ್ಲಿ 1,929 ರೂ. ಆಗಲಿದೆ. ಸ್ಥಳೀಯ ಸುಂಕಗಳಲ್ಲಿನ ವ್ಯತ್ಯಾಸಗಳಿಂದಾಗಿ ಇಂಧನದ ಬೆಲೆಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತವೆ.

    ಕಮರ್ಷಿಯಲ್​ ಸಿಲಿಂಡರ್ ಬೆಲೆ ಕುಸಿತಕ್ಕೆ ಅನುಗುಣವಾಗಿ ಹೋಟೆಲ್​ಗಳಲ್ಲಿ ತಿಂಡಿಗಳ ಬೆಲೆ ಕೂಡ ಕಡಿಮೆಯಾಗುವುದೇ ಎಂಬ ನಿರೀಕ್ಷೆ ಸಾರ್ವಜನಿಕರದ್ದಾಗಿದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರಗಳು ಕುಸಿದ ಹಿನ್ನೆಲೆಯಲ್ಲಿ ಸಿಲಿಂಡರ್ ಬೆಲೆ ಇಳಿಸಲಾಗಿದೆ. ಇಂಧನದ ಬೆಲೆಯಲ್ಲಿನ ಅಂತಾರಾಷ್ಟ್ರೀಯ ಕುಸಿತವು ಸರ್ಕಾರದ ಸಬ್ಸಿಡಿ ಹೊರೆಯನ್ನು ಕಡಿಮೆ ಮಾಡುತ್ತದೆ. ಹೀಗಿದ್ದರೂ ಸಬ್ಸಿಡಿ ಸಹಿತ 14.2-ಕೆಜಿಯ ಎಲ್‌ಪಿಜಿ ಸಿಲಿಂಡರ್‌ಗಳ (ಮನೆಯವರು ಅಡುಗೆಗೆ ಬಳಸುವುದು) ಬೆಲೆಗಳಲ್ಲಿ ಯಾವುದೇ ಬದಲಾಣೆಯಾಗಿಲ್ಲ.

    ಮನೆಗಳಲ್ಲಿ ಬಳಸಲಾಗುವ 14.2-ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ನವದೆಹಲಿಯಲ್ಲಿ 903 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿಯಲ್ಲಿ ಬರುವ ಬಡ ಕುಟುಂಬಗಳಿಗೆ 603 ರೂಪಾಯಿ ಈ ಸಿಲಿಂಡರ್​ಗಳನ್ನು ನೀಡಲಾಗುತ್ತದೆ.

    ಕಳೆದ ಆಗಸ್ಟ್ 29 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಎಲ್ಲ 31.64 ಕೋಟಿ ಗ್ರಾಹಕರಿಗೆ ಪ್ರತಿ 14.2 ಕೆಜಿ ಸಿಲಿಂಡರ್‌ಗೆ 200 ರೂಪಾಯಿ ಬೆಲೆಯನ್ನು ಕಡಿತಗೊಳಿಸಲಾಗಿತ್ತು. ಇದಲ್ಲದೆ, ಉಜ್ವಲ ಯೋಜನೆ ಅಡಿಯಲ್ಲಿ 9.6 ಕೋಟಿ ಬಡವರಿಗೆ ಪ್ರತಿ ಸಿಲಿಂಡರ್ಗೆ 200 ರೂಪಾಯಿಯ ಸಬ್ಸಿಡಿ ಮುಂದುವರಿಸಲಾಗಿದೆ.

    ಭಾರತವು ತನ್ನ ದೇಶೀಯ ಎಲ್​ಪಿಜಿ ಬಳಕೆಯ ಶೇ. 60 ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತದೆ. ದೇಶದಲ್ಲಿನ ಎಲ್‌ಪಿಜಿ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಅದರ ಬೆಲೆಯೊಂದಿಗೆ ಸಂಬಂಧ ಹೊಂದಿದೆ. ಗೃಹಬಳಕೆಯ ಎಲ್‌ಪಿಜಿಯನ್ನು ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡುವುದನ್ನು ಸರ್ಕಾರ ಮುಂದುವರಿಸಿದೆ ಎಂದು ಪೆಟ್ರೋಲಿಯಂ ರಾಜ್ಯ ಸಚಿವ ರಾಮೇಶ್ವರ್ ತೇಲಿ ಅವರು ಡಿಸೆಂಬರ್ 14 ರಂದು ಲೋಕಸಭೆಗೆ ತಿಳಿಸಿದ್ದರು.

    ಸಂಸದರ ಅಮಾತನು ವಿರೋಧಿಸಿ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ: ಪ್ರತಿಪಕ್ಷಗಳ ನಾಯಕರು ಹೇಳಿದ್ದೇನು?

    ಪಡೆದ ಡಿಗ್ರಿಗಳ ಸಂಖ್ಯೆ 20; ಐಪಿಎಸ್​, ಐಎಎಸ್​ ಪಾಸಾದರೂ ರಾಜೀನಾಮೆ ನೀಡಿ ರಾಜಕೀಯ ಪ್ರವೇಶ; ಯಾರೂ ಈ ಭಾರತೀಯ ಪ್ರತಿಭಾವಂತ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts