ಮೊಬೈಲ್​ ಕೊಡಿಸಿಲ್ಲ ಎಂದು ಅಜ್ಜಿಯ ರುಂಡ ಕತ್ತರಿಸಿ ಟೇಬಲ್​ ಮೇಲಿಟ್ಟ!

murder1
Published on

ಮುಂಬೈ: ಇತ್ತೀಚೆಗೆ ವಿಕೃತಿ ಹೆಚ್ಚುತ್ತಲೇ ಸಾಗಿದೆ. ಅತ್ಯಾಚಾರ, ಅನಾಚಾರ, ಭೀಕರ ಕೊಲೆ ಪ್ರಕರಣಗಳೇ ಹೆಚ್ಚುತ್ತಿರುವ ಈ ದಿನಗಳಲ್ಲಿ ಅತ್ಯಂತ ಭಯಾನಕ ಎನ್ನಿಸುವ ಕೊಲೆ ಪ್ರಕರಣವೊಮದು ಮುಂಬೈನ ಬಾಂದ್ರಾದಲ್ಲಿ ನಡೆದಿದೆ.

ಅಜ್ಜಿ ಮೊಬೈಲ್​ಫೋನ್​ ಗಿಫ್ಟ್ ಕೊಡಲಿಲ್ಲ ಎಂಬ ಕಾರಣಕ್ಕೆ 24 ವರ್ಷದ ಯುವಕ ಆಕೆಯ ರುಂಡವನ್ನೇ ಕತ್ತರಿಸಿ, ತಲೆಯನ್ನು ಡೈನಿಂಗ್ ಟೇಬಲ್ ಮೇಲಿಟ್ಟಿದ್ದಾನೆ!

ಕ್ರಿಸ್ಟೋಫರ್ ಡಯಾಸ್ ಎಂಬಾತ ಇಂಥ ಭೀಕರ ಕೃತ್ಯ ಎಸಗಿದ್ದಾನೆ. ಅಜ್ಜಿ ರೋಜಿ ಮೊಮ್ಮಗನ ಭೀಕರ ಕೃತ್ಯಕ್ಕೆ ಬಲಿಯಾಗಿದ್ದಾಲೆ. ಕ್ರಿಸ್ಟೋಫರ್​ ಮಾದಕ ದ್ರವ್ಯ ವ್ಯಸನಿಯಾಗಿದ್ದು, ಅಲ್ಲದೆ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ. ಆದರೆ ಮುಂದಿನ ಚಿಕಿತ್ಸೆಗೆ ಹಣ ಇಲ್ಲದ ಕಾರಣ, ಪಾಲಕರು ಚಿಕಿತ್ಸೆಯನ್ನು ಅರ್ಧಕ್ಕೇ ನಿಲ್ಲಿಸಿ ಮನೆಗೆ ಕರೆತಂದಿದ್ದರು.

ಡಯಾಸ್‍ನ ಪೋಷಕರು ಮನೆಯ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರೆ, ಕುಟುಂಬದ ಇತರ ಸದಸ್ಯರು ನೆಲ ಮಹಡಿಯಲ್ಲಿದ್ದರು. ರಾತ್ರಿ ಊಟದ ಬಳಿಕ ಆರೋಪಿ ಅಜ್ಜಿಯ ಬಳಿ ತೆರಳಿದ್ದು, ಈ ವೇಳೆ ಮೊಬೈಲ್ ಗಿಫ್ಟ್ ನೀಡುವಂತೆ ಅಜ್ಜಿಯನ್ನು ಕೇಳಿದ್ದಾನೆ. ಆದರೆ ಅಜ್ಜಿ ಕೊಡಲು ಆಗಲ್ಲ ಎಂದಿದ್ದಾರೆ.

ಇದರಿಂದ ಸಿಟ್ಟುಗೊಂಡ ಈತ ಅಲ್ಲಿಯೇ ಇದ್ದ ಚಾಕುವಿನಿಂದ ಅಜ್ಜಿ ಮಲಗಿದ ನಂತರ ತಲೆಯನ್ನೇ ಕತ್ತರಿಸಿ ಕೊಲೆ ಮಾಡಿದ್ದಾನೆ. ಅಲ್ಲದೆ ಕತ್ತರಿಸಿದ ತಲೆಯನ್ನು ಡೈನಿಂಗ್ ಟೇಬಲ್ ಮೇಲೆ ಇಟ್ಟು ಮನೆಯವರಿಗೆ ತೋರಿಸಿದ್ದಾನೆ.

ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಲೆ ಪ್ರಕರಣ ದಾಖಲಿಸಿದ್ದಾರೆ. ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಅಕ್ಟೋಬರ್ 17ರ ವರೆಗೆ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net