More

    ಆಗಸದಲ್ಲಿ ವಿಚಿತ್ರ ವಸ್ತು ನೋಡಿ ಬೆಚ್ಚಿಬಿದ್ದ ಉತ್ತರ ಪ್ರದೇಶ ಜನ: ಏಲಿಯನ್​ ಅಂದುಕೊಂಡವರಿಗೆ ಕಾದಿತ್ತು ಶಾಕ್​!

    ಲಖನೌ: ಹಾಲಿವುಡ್​ ಚಿತ್ರಗಳಲ್ಲಿ ಕಂಡುಬರುವ ಐರನ್​ ಮ್ಯಾನ್​ನಂತಹ ಕಾಲ್ಪನಿಕ ಪಾತ್ರದ ಆಕಾರವುಳ್ಳ ಬಲೂನ್​ ಒಂದು ಆಕಾಶದಲ್ಲಿ ಹಾರಾಡುವ ಮೂಲಕ ಜನರನ್ನು ಭಯಭೀತಗೊಳಿಸಿದ ಘಟನೆ ಉತ್ತರ ಪ್ರದೇಶದ ಗ್ರೇಟರ್​ ನೊಯ್ಡಾ ಜಿಲ್ಲೆಯ ಡಂಕೌರ್​ ಪಟ್ಟಣದಲ್ಲಿ ಶನಿವಾರ ನಡೆದಿದೆ.

    ಗ್ಯಾಸ್​ನಿಂದ ತುಂಬಿದ್ದ ಬಲೂನ್​ ಐರನ್​ ಮ್ಯಾನ್​ ಆಕಾರದಲ್ಲಿತ್ತು. ಶನಿವಾರ ಬೆಳಗ್ಗೆಯೇ ಡಂಕೌರ್​ ಪಟ್ಟಣದಲ್ಲಿ ಕಾಣಿಸಿಕೊಂಡಿದೆ. ಬಳಿಕ ಬಲೂನ್​ ಭಟ್ಟ ಪರ್ಸುಲಾ ಗ್ರಾಮದಲ್ಲಿರುವ ಕಾಲುವೆಯಲ್ಲಿ ಲ್ಯಾಂಡ್​ ಆಗಿತ್ತು. ಅದನ್ನು ನೋಡಲು ಅನೇಕ ಮಂದಿ ಕಾಲವೆ ಬಳಿ ಜಮಾಯಿಸಿದ್ದರು. ಬಹುತೇಕರು ಬಲೂನ್​ ಅನ್ನು ತಪ್ಪಾಗಿ ಅರ್ಥೈಸಿಕೊಂಡು ಅದೊಂದು ಏಲಿಯನ್​ ಇರಬೇಕೆಂದು ಹತ್ತಿರ ಹೋಗಲು ಹಿಂಜರಿಯುತ್ತಿದ್ದರು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ದಲಿತರ ಬೀದಿಗೆ ದೇವರು ಬರಲಿ ಎಂದಿದ್ದಕ್ಕೆ 50 ಸಾವಿರ ರೂ. ದಂಡ!

    ಗ್ಯಾಸ್​ನಿಂದ ಗಾಳಿಯಲ್ಲಿ ಹಾರಾಡಿದ್ದ ಬಲೂನ್​ ಗ್ಯಾಸ್​ ಖಾಲಿಯಾಗುತ್ತಿದ್ದಂತೆ ಕಾಲುವೆ ಬಿದ್ದು, ಅಲ್ಲಿ ಬೆಳೆದಿದ್ದ ಪೊದೆಗಳು ನಡುವೆ ಸಿಲುಕಿತ್ತು. ಹರಿಯುವ ನೀರು ಬಲೂನ್​ನ ಒಂದು ಭಾಗವನ್ನು ಸ್ಪರ್ಶಿಸುತ್ತಿದ್ದರಿಂದ ಅದು ಅಲುಗಾಡುತ್ತಿತ್ತು. ಹೀಗಾಗಿ ಜನರು ಏಲಿಯನ್​ ಅಂದುಕೊಂಡು ಕಲ್ಪಿಸಿಕೊಂಡು ಹತ್ತಿರ ಹೋಗಲು ಹೆದರುತ್ತಿದ್ದರು ಎಂದು ಡಂಕೌರ್​ ಪಟ್ಟಣದ ಪೊಲೀಸ್​ ಅಧಿಕಾರಿ ಅನಿಲ್​ ಕುಮಾರ್​ ಪಾಂಡೆ ಹೇಳಿದ್ದಾರೆ.

    ಪತ್ತೆಯಾದ ಬಲೂನ್​ ವಸ್ತುವಿನಲ್ಲಿ ಯಾವುದೇ ಹಾನಿಕಾರಕ ಅಂಶಗಳು ಇರಲಿಲ್ಲ. ಆದರೆ ಅದನ್ನು ಗಾಳಿಯಲ್ಲಿ ಹಾರಿ ಬಿಟ್ಟವರು ಯಾರೆಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದರು. (ಏಜೆನ್ಸೀಸ್​)

    ಒಂದೂವರೆ ವರ್ಷದ ಬಳಿಕ ಕೋಮಾದಿಂದೆದ್ದು ಇಬ್ಬರ ಜೈಲಿಗಟ್ಟಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts