More

    ಲೋಕಸಮರ 2024: ಎಲ್ಲಿ ಹೋದರು ಮಾಯಾವತಿ? ಚುನಾವಣಾ ಕಣದಿಂದ ಮಿಸ್ಸಿಂಗ್​!

    ಲಖನೌ: ದೇಶಾದ್ಯಂತ ಲೋಕಸಭಾ ಚುನಾವಣಾ ಕಣ ರಂಗೇರಿದೆ. ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಉತ್ತರ ಪ್ರದೇಶ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ, ಇಲ್ಲಿ ಬರೋಬ್ಬರಿ 80 ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಹೀಗಾಗಿಯೇ ಎಲ್ಲ ರಾಜಕೀಯ ಪಕ್ಷಗಳು ಉತ್ತರ ಪ್ರದೇಶವನ್ನು ವಿಶೇಷವಾಗಿ ಪರಿಗಣಿಸುತ್ತವೆ. ಉತ್ತರ ಪ್ರದೇಶದಲ್ಲಿ ಏಪ್ರಿಲ್​ 19ರಿಂದ ಮತದಾನ ಆರಂಭವಾಗಲಿದೆ. ಆ ದಿನ ಬಹಳ ಹತ್ತಿರದಲ್ಲೇ ಇದೆ. ಹೀಗಾಗಿ ಎಲ್ಲ ಪಕ್ಷಗಳು ಪ್ರಚಾರದಲ್ಲಿ ಮುಳುಗಿವೆ. ಆದರೆ, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಮಾತ್ರ ಮಿಸ್ಸಿಂಗ್​ ಆಗಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ.

    ಚುನಾವಣಾ ಘೋಷಣೆಯಾಗಿದ್ದರೂ ಕಳೆದ ಎರಡು ವಾರಗಳಿಂದ ಮಾಯಾವತಿ ಅವರು ಉತ್ತರ ಪ್ರದೇಶದಲ್ಲಿ ರ್ಯಾಲಿಗಳನ್ನು ನಡೆಸುವುದನ್ನು ತಪ್ಪಿಸಿರುವುದು ಅವರ ಚುನಾವಣಾ ಕಾರ್ಯತಂತ್ರದ ಬಗ್ಗೆ ಊಹಾಪೋಹಗಳು ಮತ್ತು ಪ್ರಶ್ನೆಗಳಿಗೆ ಕಾರಣವಾಗಿದೆ. ಇದಕ್ಕೆ ವಿರುದ್ಧವಾಗಿ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್​ ಅವರು ಮತದಾರರನ್ನು ಸೆಳೆಯುವಲ್ಲಿ ಬಿಜಿಯಾಗಿದ್ದು, ನಿರಂತರವಾಗಿ ಮತಬೇಟೆ ಮಾಡುತ್ತಿದ್ದಾರೆ. ರಾಜ್ಯದ ಎಲ್ಲೆಡೆ ಅನೇಕ ಸಮಾವೇಶಗಳನ್ನು ನಡೆಸುತ್ತಿದ್ದಾರೆ. ಅದೇ ರೀತಿ ಸಮಾಜವಾದಿ ಪಕ್ಷದ ಅಖಿಲೇಶ್​ ಯಾದವ್​ ಕೂಡ ಚುನಾವಣಾ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಆದರೆ, ಮಾಯಾವತಿಯವರ ಸ್ಪಷ್ಟ ಹಿಂಜರಿಕೆ ಮಾತ್ರ ಇಲ್ಲಿ ಗೋಚರವಾಗುತ್ತಿದೆ.

    ಅಂದಹಾಗೆ ಮಾಯಾವತಿಯವರಿಗೆ ಈ ಟ್ರೆಂಡ್ ಹೊಸದೇನಲ್ಲ. 2022ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮತದಾನ ಪ್ರಾರಂಭವಾಗುವ ಕೇವಲ ಎಂಟು ದಿನಗಳ ಮೊದಲು ಮಾಯಾವತಿಯವರು ತಮ್ಮ ರ್ಯಾಲಿಗಳನ್ನು ಪ್ರಾರಂಭಿಸಿದರು. ಇದು ಬಿಎಸ್​ಪಿಯ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಿ, ಕೇವಲ ಒಂದು ಸ್ಥಾನವನ್ನು ಮಾತ್ರ ಪಡೆದುಕೊಂಡಿತು.

    ಹಿಂದಿನ ಚುನಾವಣೆಗಳ ರೀತಿಯೇ ಈ ಬಾರಿಯೂ ತಡವಾಗಿ ಪ್ರಚಾರ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತದಲ್ಲಿ ಮಾಯಾವತಿ ಅವರ ಮೊದಲ ಸಮಾವೇಶ ಏಪ್ರಿಲ್ 11ರಂದು ನಾಗ್ಪುರದಲ್ಲಿ ನಡೆಯಿತು. ಉತ್ತರ ಪ್ರದೇಶದಲ್ಲಿ ಅವರ ಮೊದಲ ಸಮಾವೇಶ ಏಪ್ರಿಲ್ 14 ರಂದು ನಡೆಯಲಿದೆ. ಆದರೆ ಮೊದಲ ಹಂತದ ಚುನಾವಣೆಯ ಮತದಾನ ಏಪ್ರಿಲ್ 19ಕ್ಕೆ ನಡೆಯಲಿರುವುದರಿಂದ ಬಹಿರಂಗ ಪ್ರಚಾರ ಏಪ್ರಿಲ್ 17 ರಂದು ಕೊನೆಗೊಳ್ಳಲಿದೆ.

    ಚುನಾವಣಾ ಅವಧಿಯಲ್ಲಿ ಸುಮಾರು 40 ಸಮಾವೇಶಗಳನ್ನು ಒಳಗೊಂಡಂತೆ ವ್ಯಾಪಕ ಪ್ರಚಾರವನ್ನು ನಡೆಸಲು ಮಾಯಾವತಿ ಅವರು ಯೋಜಿಸಿದ್ದಾರೆ ಎಂದು ಬಿಎಸ್ಪಿ ನಾಯಕರು ತಮ್ಮ ವಿಧಾನವನ್ನು ಸಮರ್ಥಿಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ಆಕೆಯ ಸೋದರಳಿಯ ಆಕಾಶ್ ಆನಂದ್ ಅವರನ್ನು ರಾಷ್ಟ್ರೀಯ ಸಂಯೋಜಕರಾಗಿ ವಹಿಸಲಾಗಿದ್ದರೂ ಅವರು ಕೂಡ ಇತ್ತೇಚೆಗಷ್ಟೇ ಪ್ರಚಾರ ಚಟುವಟಿಕೆಗಳನ್ನು ಆರಂಭಿಸಿದ್ದಾರೆ.

    ಕಳೆದ ಬಾರಿ ಗೆದ್ದಿದ್ದ 10 ಸಂಸದರ ಪೈಕಿ ಗಿರೀಶ್‌ಚಂದ್ರ ಎಂಬುವರು ಮಾತ್ರ ಮತ್ತೆ ನಾಮನಿರ್ದೇಶನಗೊಂಡಿರುವುದು ಪಕ್ಷದಲ್ಲಿ ಭಿನ್ನಾಭಿಪ್ರಾಯ ಮೂಡಿರುವ ಲಕ್ಷಣ ಗೋಚರಿಸಿದೆ. ಗಮನಾರ್ಹವೆಂದರೆ, ಚಂದ್ರ ಅವರ ಕ್ಷೇತ್ರವು ಸಹ ನಗೀನಾದಿಂದ ಬುಲಂದ್‌ಶಹರ್‌ಗೆ ಬದಲಾಗಿದೆ. ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರ (CSDS) ಸೂಚಿಸಿದಂತೆ ಬಿಎಸ್​ಪಿಯ ಚುನಾವಣಾ ಭವಿಷ್ಯವು ಕೆಳಮುಖ ಹಾದಿಯಲ್ಲಿದೆ. ಜಾತವ್ ಮತದಾರರ ಮೂಲವು 15 ವರ್ಷಗಳಲ್ಲಿ 35% ರಷ್ಟು ಕ್ಷೀಣಿಸಿದ್ದು, ಇದು ಪಕ್ಷದ ಒಟ್ಟಾರೆ ಮತಗಳಲ್ಲಿ ಗಮನಾರ್ಹ ಕುಸಿತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಅಂದರೆ, ಬಿಎಸ್​ಪಿ ಖ್ಯಾತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. (ಏಜೆನ್ಸೀಸ್​)

    ಡಿಕೆ ಆರ್ಭಟ ಕಂಡು ಕೀಟಲೆ ಮಾಡಿದ ರೋಹಿತ್! ಸ್ಟಂಪ್​ ಮೈಕ್‌ನಲ್ಲಿ ಸೆರೆಯಾದ ಮಾತುಗಳು ವೈರಲ್​

    ಮೊಬೈಲ್​​ ರಿಪೇರಿ ಮಾಡಿಸಿಕೊಡಲಿಲ್ಲ ಅಂತ ಬದುಕನ್ನೇ ಕೊನೆಗೊಳಿಸಿದ ಯುವತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts