More

    ಗಂಡನಿಂದ ದೂರವಾದರೂ ಅಲ್ಲಿಯೇ ಉಳಿಯುವ ಅಧಿಕಾರ ಹೆಣ್ಣಿಗಿದೆ- ಸುಪ್ರೀಂನಿಂದ ಮಹತ್ವದ ತೀರ್ಪು

    ನವದೆಹಲಿ: ಒಂದು ವೇಳೆ ದಂಪತಿ ನಡುವೆ ವಿರಸವಾಗಿ, ಮಹಿಳೆ ತನ್ನ ಗಂಡನಿಂದ ದೂರವಾಗಿದ್ದರೂ ಆಕೆಯನ್ನು ಮನೆಯಿಂದ ಹೊರಹಾಕುವ ಅಧಿಕಾರ ಗಂಡನ ಮನೆಯವರಿಗೆ ಇಲ್ಲ. ಆ ಮನೆಯಲ್ಲಿ ಉಳಿದುಕೊಳ್ಳುವ ಅಧಿಕಾರ ಮಹಿಳೆಗೆ ಇದೆ ಎಂದು ಸುಪ್ರೀಂಕೋರ್ಟ್​ ಮಹತ್ವದ ತೀರ್ಪು ನೀಡಿದೆ.

    ದಾಂಪತ್ಯದಲ್ಲಿ ಬಿರುಕು ಉಂಟಾಗಿ, ವಿಚ್ಛೇದನ ಹಂತಕ್ಕೆ ಬಂದ ಸಮಯದಲ್ಲಿ, ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಮಹಿಳೆಯನ್ನು ಹೊರಹಾಕುವಂತಿಲ್ಲ. ಗಂಡನ ಮನೆಯಲ್ಲಿ ಉಳಿಯುವ ಅಧಿಕಾರ ಹೆಣ್ಣಿಗೆ ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಅಡಿ ನೀಡಲಾಗಿದೆ ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ.ಆರ್.ಶಾ ಅವರ ನ್ಯಾಯಪೀಠ ಹೇಳಿದೆ.

    ಸತೀಶ್ ಚಂದರ್ ಅಹುಜಾ ಎನ್ನುವವರು ತಮ್ಮ ಸೊಸೆಯ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡಿರುವ ಕೋರ್ಟ್​ ಈ ರೀತಿ ಹೇಳಿದೆ.

    ಅಹುಜಾ ದಂಪತಿ ನಡುವೆ ಜಗಳವಾಗಿ, ಇಬ್ಬರ ವಿಚ್ಛೇದನ ಅರ್ಜಿ ಕೋರ್ಟ್​ನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ. ಆದರೂ ತಮ್ಮ ಸೊಸೆ ಮನೆಯಲ್ಲಿಯೇ ವಾಸವಾಗಿದ್ದಾಳೆ ಎನ್ನುವುದು ಸತೀಶ್​ ಅವರ ದೂರಾಗಿತ್ತು. ಆಕೆಯನ್ನು ಮನೆಯಿಂದ ಹೊರಕ್ಕೆ ಆದೇಶಿಸುವಮತೆ ಕೋರಿ ಅವರು ಈ ಮೊದಲು ಮುಂಬೈ ಹೈಕೋರ್ಟ್​ ಮೊರೆ ಹೋಗಿದ್ದರು. ಆದರೆ ಅಲ್ಲಿ ಅವರ ಅರ್ಜಿ ವಜಾ ಆಗಿತ್ತು.

    ಇದನ್ನೂ ಓದಿ: ಭದ್ರತೆ ಹಿಂದಕ್ಕೆ ಪಡೆದ ಪಂಜಾಬ್​: ಕೆಚ್ಚೆದೆಯ ಯೋಧ ಬಲ್ವಿಂದರ್​ ಗುಂಡಿಗೆ ಬಲಿ

    ಅದನ್ನು ಪ್ರಶ್ನಿಸಿ ಅವರು ಇದೀಗ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ಅದಕ್ಕೆ ಉತ್ತರವಾಗಿ ನ್ಯಾಯಮುರ್ತಿಗಳು, ಮನೆ ಸೊಸೆಯನ್ನು ಪತಿ ಅಥವಾ ಕುಟುಂಬ ಸದಸ್ಯರು ಹೊರಹಾಕಲು ಸಾಧ್ಯವಿಲ್ಲ, ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ ಅಲ್ಲಿಯೇ ಇರಲು ಆಕೆಗೆ ಹಕ್ಕಿದೆ ಎಂದು ಹೇಳಿದ್ದಾರೆ.

    ದೇಶದಲ್ಲಿ ಕೌಟುಂಬಿಕ ಹಿಂಸಾಚಾರ ವಿಪರೀತವಾಗಿದೆ. ಪ್ರತಿದಿನ ಕೆಲವು ಮಹಿಳೆಯರು ಯಾವುದಾದರೂ ರೂಪದಲ್ಲಿ ಹಿಂಸಾಚಾರವನ್ನು ಎದುರಿಸುತ್ತಿದ್ದಾರೆ. ಅಂತಹ ಸಂದರ್ಭಗಳಲ್ಲಿ, ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಮಗಳು, ಸಹೋದರಿ, ಹೆಂಡತಿ, ತಾಯಿಯಾಗಿ ಇಲ್ಲವೇ ಒಂಟಿಯಾಗಿ ಹಿಂಸೆ ಮತ್ತು ತಾರತಮ್ಯವನ್ನು ಸಹಿಸಿಕೊಳ್ಳುವ ಪರಿಸ್ಥಿತಿ ತಲೆದೋರಿದೆ. ಇದು ಎಂದಿಗೂ ಮುಗಿಯದ ಚಕ್ರವಾಗಿದೆ. ಇಂಥ ಸಮಯದಲ್ಲಿ ಆಕೆಯನ್ನು ಮನೆಯಿಂದ ಹೊರಕ್ಕೆ ಹಾಕುವುದು ಅಪರಾಧವಾಗಿದೆ ಎಂದು ಕೋರ್ಟ್​ ಹೇಳಿದೆ.

    ಆಸ್ತಿ ತಮ್ಮ ಸ್ವಯಾರ್ಜಿತವಾಗಿದ್ದು, ಅದರಲ್ಲಿ ತಮ್ಮ ಮಗನಿಗೆ ಯಾವುದೇ ಹಕ್ಕು ಇಲ್ಲ, ಆದ್ದರಿಂದ ಸೊಸೆಗೂ ಅದರಲ್ಲಿ ಹಕ್ಕು ಇಲ್ಲ. ಇಂಥ ಪರಿಸ್ಥಿತಿಯಲ್ಲಿ, ಆಕೆ ನಮ್ಮ ಮನೆಯಲ್ಲಿ ಇರುವ ಹಕ್ಕು ಇಲ್ಲ ಎಂದು ಮಾವ ದೂರಿದ್ದರು. ಆದರೆ ಈ ವಾದವನ್ನು ಕೋರ್ಟ್​ ಮಾನ್ಯ ಮಾಡಲಿಲ್ಲ.

    ಇನ್ನುಮುಂದೆ ಒಟಿಪಿ ಇದ್ದರಷ್ಟೇ ಮನೆಬಾಗಿಲಿಗೆ ಸಿಲಿಂಡರ್​: ವಂಚನೆ ತಡೆಗೆ ನೂತನ ಯೋಜನೆ

    ಲಕ್ಷ್ಮಿಬಾಂಬ್​ ಬದಲು ಸಲ್ಮಾಬಾಂಬ್​ ಎಂದು ಹೆಸರಿಡುವ ಧೈರ್ಯ ಇದೆಯೆ- ಚಿತ್ರದ ವಿರುದ್ಧ ಅಭಿಯಾನ ಶುರು

    ಮತಾಂತರಗೊಂಡು ಹೆಣವಾದ ಯುವತಿ! ನ್ಯಾಯಕ್ಕಾಗಿ ಸಿಎಂ ಯೋಗಿ ಮೊರೆ ಹೋಗಿ ಬೆಂಕಿಹಚ್ಚಿಕೊಂಡಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts