More

    ಗದಗ ಶೂಟಿಂಗ್​ ಅಕಾಡೆಮಿಗೆ 3 ಚಿನ್ನ, 2 ಕಂಚು

    ಗದಗ: ಬೆಂಗಳೂರಿನ ಸಾಯಿ ಶೂಟಿಂಗ್​ ರೇಂಜ್​ನಲ್ಲಿ ಇತ್ತೀಚಿಗೆ ನಡೆದ 11ನೇ ರಾಜ್ಯಮಟ್ಟದ ಶೂಟಿಂಗ್​ ಕ್ರೀಡಾಕೂಟದಲ್ಲಿ ಗದಗ ಸ್ಪೋರ್ಟ್ಸ ಶೂಟಿಂಗ್​ ಅಕಾಡೆಮಿಯ ಶೂಟರ್​ಗಳು 3 ಚಿನ್ನ, 2 ಕಂಚು ಪದಕ ಗೆದ್ದುಕೊಂಡಿದ್ದಾರೆ. ಅಕಾಡೆಮಿಯ ಮನ್ವಿತಾ ಎಂ. ಬಡ್ನಿ, ಅಮೃತಾ ಕಬಾಡಿ, ಸಂಜನಾ ಚಿಕ್ಕನಗೌಡರ 10 ಮೀಟರ್​ ಏರ್​ರೈಲ್​ನ ಚಿನ್ನದ ಪದಕ ಪಡೆದಿದ್ದಾರೆ. ಸಿದ್ಧಾರ್ಥ ಎಂ. ಬಡ್ನಿ 10 ಮೀಟರ್​ ಏರ್​ಪಿಸ್ತೂಲ್​ ಪುರುಷ ವಿಭಾಗದಲ್ಲಿ ವೈಯಕ್ತಿ ಹಾಗೂ ಗುಂಪು ಸ್ಪರ್ಧೆಯಲ್ಲಿ ತಲಾ ಒಂದು ಕಂಚಿನ ಪದಕ ಪಡೆದಿದ್ದಾರೆ. ಸಾಧನೆಗೈದ ಶೂಟರ್​ಗಳಿಗೆ ಗದಗ ಸ್ಪೋರ್ಟ್ಸ ಶೂಟಿಂಗ್​ ಅಕಾಡೆಮಿಯಲ್ಲಿ ಶುಕ್ರವಾರ ಸನ್ಮಾನಿಸಲಾಯಿತು. ಈ ಸಂದರ್ಬದಲ್ಲಿ ರಾಜರಾಜೇಶ್ವರಿ, ಮಂಜುಳಾ ದಾನಿನ್​, ಕಲ್ಪನಾ ಚಚಡಿ, ಮೀತು ದತ್ತಾ, ಶ್ರೀನಿವಾಸ ಹುಯಿಲಗೋಳ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts