More

    VIDEO: ಆಗಸದಲ್ಲಿ ವಿಚಿತ್ರ ವಿದ್ಯಮಾನ- ಒಂದೇ ಬಾರಿ ಮೂರು ಸೂರ್ಯನ ಉದಯ!

    ಬೀಜಿಂಗ್‌: ಇಡೀ ವಿಶ್ವಕ್ಕೆ ಕರೊನಾ ವೈರಸ್​ ಹಚ್ಚಿಸಿ, ನೆರೆ ರಾಷ್ಟ್ರಗಳೊಂದಿಗ ಸಂಘರ್ಷಕ್ಕೆ ಇಳಿಯುವ ಮೂಲಕ ಕುಖ್ಯಾತಿ ಗಳಿಸಿರುವ ಚೀನಾದಲ್ಲೊಂದು ಅದ್ಭುತ ನಡೆದಿದೆ. ಅದೇ ಒಂದೇ ದಿನ ಒಂದೇ ಬಾರಿಗೆ ಮೂರು ಸೂರ್ಯ ಉದಯಿಸಿದೆ!

    ಅಪರೂಪದ ವಿಸ್ಮಯಕ್ಕೆ ಸಾಕ್ಷಿಯಾಗಿರುವ ಚೀನಾದತ್ತ ಇದೀಗ ಬಾಹ್ಯಾಕಾಶ ಸಂಶೋಧಕರ ಚಿತ್ತ ಹರಿದಿದೆ. ‘ಮಿಥ್ಯ ಸೂರ್ಯ’, ‘ಸನ್‌ ಡಾಗ್ಸ್‌’ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಈ ವಿಚಿತ್ರ ವಿದ್ಯಮಾನ ಇದೀಗ ಇಡೀ ವಿಶ್ವದ ಗಮನ ಸೆಳೆದಿದ್ದು, ಅದಕ್ಕೆ ಉತ್ತರವನ್ನೂ ಕಂಡುಕೊಂಡಿದ್ದಾರೆ.

    ರಷ್ಯಾದ ಗಡಿಗೆ ಹೊಂದಿಕೊಂಡ ಚೀನದ ಮೊಹೆ ನಗರದಲ್ಲಿ ಇಂಥದ್ದೊಂದು ವಿದ್ಯಮಾನ ನಡೆದಿದೆ. ಬೆಳಗ್ಗೆ 6.30ರಿಂದ 9.30ರವರೆಗೆ ಈ ವಿಚಿತ್ರ ನಡೆದಿದ್ದು, ಆಗಸ ನೋಡಿದ ಜನರು ತಮ್ಮ ಕಣ್ಣುಗಳನ್ನೇ ನಂಬದೆ ಉಜ್ಜಿ ಉಜ್ಜಿ ನೋಡಿಕೊಂಡಿರುವುದಾಗಿ ವರದಿಯಾಗಿದೆ.

    ಹಾಗಿದ್ದರೆ ನಿಜಕ್ಕೂ ಮೂರು ಸೂರ್ಯ ಹುಟ್ಟಿದನೆ? ಒಂದು ಸೂರ್ಯನ ತಾಪಮಾನವನ್ನೇ ತಡೆದುಕೊಳ್ಳುವ ಶಕ್ತಿ ಇಲ್ಲದಾಗ ಮೂರು ಮೂರು ಸೂರ್ಯ ಹುಟ್ಟಿದರೆ ಪರಿಸ್ಥಿತಿ ಹೇಗಿರುತ್ತದೆ? ಇತ್ಯಾದಿಗಳಿಗೆ ಸಂಶೋಧಕರು ನೀಡಿರುವ ಉತ್ತರ ಹೀಗಿದೆ…

    ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಮುಖದಂತಿರುವ ತಿರುಮಲ ಬೆಟ್ಟ: ಮತ್ತೆ ವೈರಲ್​ ಆಯ್ತು ಅದ್ಭುತ ಫೋಟೋ!

    ಆಗಸದಲ್ಲಿ ಕಾಣಿಸಿರುವುದು ಸೂರ್ಯನ ಪ್ರತಿರೂಪವೇ. ಥೇಟ್​ ನೋಡಿದರೆ ಅದು ಸೂರ್ಯನ ರೀತಿಯೇ ಕಾಣಿಸುತ್ತದೆ. ಅದರಲ್ಲಿಯೇ ಸಂದೇಹವೇ ಬೇಡ. ಆದರೆ ಅಸಲಿಗೆ ಇದು ಸೂರ್ಯನಲ್ಲ, ಬದಲಿಗೆ ಮಿಥ್ಯಸೂರ್ಯ. ಅಂದರೆ ಇದೊಂದು ಬೆಳಕಿನ ಮಾಯೆ. ಸೂರ್ಯನ ಬೆಳಕು ಅತ್ಯುನ್ನತ ಮಂಜಿನ ಗಡ್ಡೆಗಳ ಮೇಲೆ ಬಿದ್ದು ಪ್ರತಿಫ‌ಲನ ಹೊಂದುತ್ತವೆ. ಈ ಪ್ರತಿಫ‌ಲಿತ ಬೆಳಕು ಆಕಾಶದ ಶುಭ್ರ ಮೋಡದ ನಡುವೆ ಪ್ರಜ್ವಲಿಸುತ್ತದೆ. ಡಾಕ್ಸಿ ಯಾಂಗ್ಲಿಂಗ್‌ ಪ್ರಾಂತ್ಯದ ಮೊಹೆ, ಮಂಜಿನ ಬೆಟ್ಟಗಳಿಂದ ಕೂಡಿದೆ. ಆದ್ದರಿಂದ ಇಂಥದ್ದೊಂದು ದೃಶ್ಯ ಕಂಡುಬಂದಿದೆ ಎಂದಿದ್ದಾರೆ ವಿಜ್ಞಾನಿಗಳು.

    ಮೊಹೆ ಆಗಸದಲ್ಲಿ ಮೂಡಿದ್ದ ನೈಜ ಸೂರ್ಯನ ಎಡ, ಬಲಗಳಲ್ಲಿ 2 ಪ್ರಕಾಶಮಾನ ಮಿಥ್ಯ ಸೂರ್ಯಗಳು ಮೂಡಿದ್ದವು. “ಇಂಥ ವಿದ್ಯಮಾನದಲ್ಲಿ ಮಿಥ್ಯ ಸೂರ್ಯ ಪ್ರಕಾಶಮಾನವಾಗಿಯೂ ಹೊಳೆಯ ಬಹುದು. ಕೆಲವು ಬಾರಿ ಕಾಮನಬಿಲ್ಲಿನ ಬಣ್ಣಗಳನ್ನೂ ಹೊಮ್ಮಿಸಬಹುದು. ವಿರಳಾತೀವಿರಳವೆಂಬಂತೆ ಹಿಮಬೆಟ್ಟಗಳ ಪ್ರದೇಶಗಳಲ್ಲಿ ಹುಣ್ಣಿಮೆ ದಿನಗಳಲ್ಲೂ ರಾತ್ರಿ ವೇಳೆ ಮಿಥ್ಯ ಚಂದ್ರನ ದರ್ಶನವಾಗುತ್ತದೆ’ ಎಂದು ಹವಾಮಾನ ತಜ್ಞ ಗ್ರಹಾಂ ಮಾಗ್ಡೆ ತಿಳಿಸಿದ್ದಾರೆ. ಚೀನ ಹವಾಮಾನ ಇಲಾಖೆ ಮಿಥ್ಯ ಸೂರ್ಯನ ಚಿತ್ರಗಳನ್ನು, ವಿಡಿಯೊ ರೂಪದಲ್ಲಿ ಬಿಡುಗಡೆ ಮಾಡಿದೆ.

    ಭಾರತದ ಸೇನೆ ಯುದ್ಧಕ್ಕೆ ಸದಾ ರೆಡಿ- ಚೀನಾಕ್ಕೆ ತಿವಿದ ಅಮಿತ್​ ಷಾ

    ನಟ, ಬರಹಗಾರ ಕೃಷ್ಣ ನಾಡಿಗ್​ ಇನ್ನಿಲ್ಲ- ಶೂಟಿಂಗ್​ ವೇಳೆ ಹೃದಯಾಘಾತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts