More

    ಭಾರತದ ಸೇನೆ ಯುದ್ಧಕ್ಕೆ ಸದಾ ರೆಡಿ- ಚೀನಾಕ್ಕೆ ತಿವಿದ ಅಮಿತ್​ ಷಾ

    ನವದೆಹಲಿ: ಬಹುತೇಕ ದೇಶಗಳಿಂದ ಛೀಮಾರಿ ಹಾಕಿಸಿಕೊಳ್ಳುತ್ತಿರುವ ಚೀನಾಕ್ಕೆ ಇನ್ನೂ ಬುದ್ಧಿಬಂದಿಲ್ಲ. ಭಾರತದ ಗಡಿಯಲ್ಲಿ ಜಗಳಕ್ಕೆ ನಿಂತಿರುವ ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್, ನಿಮ್ಮ ಮನಸ್ಸು ಹಾಗೂ ಶಕ್ತಿಯನ್ನು ಯುದ್ಧಕ್ಕೆ ಸಿದ್ಧಪಡಿಸಿ ಎಂದು ಈಚೆಗಷ್ಟೇ ಹೇಳಿಕೆ ನೀಡಿದ್ದರು.

    ಇದಕ್ಕೆ ಪ್ರತ್ಯುತ್ತರವಾಗಿ ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ ನೀಡಿದ್ದು, ಭಾರತೀಯ ರಕ್ಷಣಾ ಪಡೆ ಯುದ್ಧಕ್ಕೆ ಯಾವಾಗಲೂ ಸಿದ್ಧವಾಗಿದೆ. ಭಾರತದ ಸಾರ್ವಭೌತ್ವ ಹಾಗೂ ಗಡಿಯನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ತಿರುಗೇಟು ನೀಡಿದ್ದಾರೆ.

    ಪೂರ್ವ ಲಡಾಖ್‍ನಲ್ಲಿ ಪರಿಸ್ಥಿತಿ ಬಿಗಡಾಯಿಸಿದ ಬೆನ್ನಲ್ಲೇ ಇಂಥದ್ದೊಂದು ಹೇಳಿಕೆ ಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಗುವಾಂಗ್‍ಡಾಂಗ್ ಗೆ ಭೇಟಿ ನೀಡಿದ ವೇಳೆ ಜಿನ್‍ಪಿಂಗ್, ಚೀನಾದ ಜತೆ ಯುದ್ಧಕ್ಕೆ ಭಾರತ ರೆಡಿಯಾಗಬೇಕು ಎಂದಿದ್ದರು. ಈ ಹೇಳಿಕೆಗೆ ಈಗ ಷಾ ತೀಕ್ಷ್ಮ ಪ್ರತಿಕ್ರಿಯೆ ನೀಡಿದ್ದಾರೆ.

    ಇದನ್ನೂ ಓದಿ: ನಟ, ಬರಹಗಾರ ಕೃಷ್ಣ ನಾಡಿಗ್​ ಇನ್ನಿಲ್ಲ- ಶೂಟಿಂಗ್​ ವೇಳೆ ಹೃದಯಾಘಾತ

    ಈ ಹಿಂದೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜಿನ್‍ಪಿಂಗ್ ಯಾವುದೇ ದೇಶದೊಂದಿಗೆ ಚೀನಾ ಕೋಲ್ಡ್, ಹಾಟ್ ಯಾವುದೇ ಯುದ್ಧದ ಉದ್ದೇಶ ಹೊಂದಿಲ್ಲ ಎಂದಿದ್ದರು. ಆದರೆ ಇದೀಗ ತಮ್ಮ ಸೇನೆ ಯುದ್ಧಕ್ಕೆ ಸಿದ್ಧವಾಗಲು ಸೂಚಿಸಿದೆ.

    ಭಾರತೀಯ ಸೇನೆ ಯಾವುದೇ ಅಂತಿಮ ನಿರ್ಧಾರಕ್ಕೆ ಯಾವಾಗಲೂ ಸಿದ್ಧವಾಗಿರುತ್ತದೆ. ಪ್ರತಿ ದೇಶಗಳೂ ಸಿದ್ಧವಾಗಿರುತ್ತವೆ. ಯಾವುದೇ ನಿರ್ದಿಷ್ಟ ಹೇಳಿಕೆಯನ್ನಾಧರಿಸಿ ನಾನು ಈ ಮಾತನ್ನು ಹೇಳುತ್ತಿಲ್ಲ. ಆದರೆ ಭಾರತದ ರಕ್ಷಣಾ ಪಡೆ ಯಾವುದೇ ಸಮಯದಲ್ಲಿ ಯುದ್ಧಕ್ಕೆ ಸಿದ್ಧವಾಗಿದೆ ಎಂದು ಖಾಸಗಿ ವಾಹಿನಿ ನಡೆಸಿದ ಸಂದರ್ಶನದಲ್ಲಿ ಅಮಿತ್​ ಷಾ ಹೇಳಿದರು.

    ಗಲ್ವಾನ್ ಘರ್ಷಣೆಯಲ್ಲಿ ಕರ್ನಲ್ ಸಂತೋಷ್ ಬಾಬು ಸೇರಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅಲ್ಲದೆ ಭಾರತೀಯ ಸೈನಿಕರು ನಡೆಸಿದ ಪ್ರತಿ ದಾಳಿಗೆ ಚೀನಾದ ಹಲವು ಸೈನಿಕರು ಸಹ ಮೃತಪಟ್ಟಿದ್ದರು. ಆದರೆ ಚೀನಾ ಈ ಕುರಿತು ಬಾಯ್ಬಿಟ್ಟಿರಲಿಲ್ಲ. ಈ ಘಟನೆ ನಡೆದ ಬಳಿಕ ಹಲವು ಬಾರಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದೇ ರೀತಿ ಎರಡೂ ದೇಶಗಳ ಪ್ರಮುಖರ ನಡುವೆ ಸಭೆಗಳು ಸಹ ನಡೆದಿವೆ. ಇದೀಗ ಯುದ್ಧದ ಮಾತು ಶುರುವಾಗಿದೆ.

    ಗಂಡನಿಂದ ದೂರವಾದರೂ ಅಲ್ಲಿಯೇ ಉಳಿಯುವ ಅಧಿಕಾರ ಹೆಣ್ಣಿಗಿದೆ- ಸುಪ್ರೀಂನಿಂದ ಮಹತ್ವದ ತೀರ್ಪು

    ಲಕ್ಷ್ಮಿಬಾಂಬ್​ ಬದಲು ಸಲ್ಮಾಬಾಂಬ್​ ಎಂದು ಹೆಸರಿಡುವ ಧೈರ್ಯ ಇದೆಯೆ- ಚಿತ್ರದ ವಿರುದ್ಧ ಅಭಿಯಾನ ಶುರು

    ಇನ್ನುಮುಂದೆ ಒಟಿಪಿ ಇದ್ದರಷ್ಟೇ ಮನೆಬಾಗಿಲಿಗೆ ಸಿಲಿಂಡರ್​: ವಂಚನೆ ತಡೆಗೆ ನೂತನ ಯೋಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts