

ಉತ್ತರ: ಈಗ ಬೇನಾಮಿ ಕಾಯ್ದೆ ಅಸ್ತಿತ್ವದಲ್ಲಿ ಇಲ್ಲ. ಹೀಗಾಗಿ ನಿಮ್ಮ ತಂದೆ ಸ್ವತ್ತನ್ನು ತಾಯಿಯ ಹೆಸರಿಗೆ ಮಾಡಿದ್ದರೆ ಅದು ಆಕೆಯದೇ ಸ್ವತ್ತು ಆಗುತ್ತದೆ. ನಿಮ್ಮ ತಂದೆ ಕೋರ್ಟಿಗೆ ಹೋದರೆ ಅರ್ಧ ಆಸ್ತಿ ಬರುವುದಿಲ್ಲ.
ನೀವು ಹೇಳಿದಂತೆ ಪಿತ್ರಾರ್ಜಿತ ಆಸ್ತಿಯಿಂದ ಬಂದ ಹಣದಲ್ಲಿ ಆಸ್ತಿ ಖರೀದಿ ಮಾಡಲಾಯಿತು, ಅದನ್ನು ತಾಯಿಯ ಹೆಸರಿಗೆ ಮಾಡಲಾಯಿತು ಎನ್ನುವುದನ್ನು ನೀವು ಮಗನಾಗಿ ಪ್ರತ್ಯೇಕವಾಗಿ ದಾವೆ ಹೂಡಿ ಸಾಬೀತು ಪಡಿಸಿದರೆ ಏನಾದರೂ ಸ್ವಲ್ಪ ಪ್ರಯೋಜನ ಆಗಬಹುದು. ನಿಮ್ಮ ತಂದೆಗೆ ಅವರ ತಂದೆಯಿಂದ ಬಂದ ಆಸ್ತಿಯನ್ನು ಅವರು ಮಾರಿ ನಿಮ್ಮ ತಾಯಿಯ ಹೆಸರಿನಲ್ಲಿ ಆಸ್ತಿ ಕೊಂಡಿದ್ದರೆ ಈಗ ನಿಮ್ಮ ತಂದೆ ಅದನ್ನು ಪ್ರಶ್ನಿಸಲು ಆಗುವುದಿಲ್ಲ. ಏಕೆಂದರೆ ನಿಮ್ಮ ತಂದೆ ಮಾರಿದ ಆಸ್ತಿ ನಿಮ್ಮ ತಂದೆಯ ಪ್ರತ್ಯೇಕ ಆಸ್ತಿ ಆಗುತ್ತದೆ. ನಿಮ್ಮ ತಂದೆಯ ಹಿಂದಿನ ಆಸ್ತಿಗಳ ದಾಖಲೆಗಳ ಸಂಪೂರ್ಣ ವಿವರ ನೋಡಿದಾಗ ಮಾತ್ರ ಆಸ್ತಿಯು ಪಿತ್ರಾರ್ಜಿತವಾಗಿ ನಿಮ್ಮ ತಂದೆಗೆ ಬಂದಿತ್ತೇ ಇಲ್ಲವೇ ಎನ್ನುವುದನ್ನು ವಕೀಲರು ಹೇಳಬಹುದು.
ನಿಮ್ಮ ತಂದೆಗೆ ಜೀವನಾಂಶಕ್ಕೆ ಗತಿಯೇ ಇಲ್ಲದಿದ್ದರೆ , ನಿಮ್ಮ ತಾಯಿಯ ವಿರುದ್ಧವೇ ಜೀವನಾಂಶದ ದಾವೆಯನ್ನು ಹಾಕಬಹುದು. ಆದರೆ ಆ ದಾವೆಯಲ್ಲಿ ನೋಟೀಸು ಹೋದ ಮೇಲೆ ನಿಮ್ಮ ತಾಯಿ ನ್ಯಾಯಾಲಯಕ್ಕೆ ಹಾಜರಾದಾಗ ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ಕೇಳಿಕೊಳ್ಳಲಿ. ಆಗ ಏನಾದರೂ ಒಪ್ಪಂದಕ್ಕೆ ನಿಮ್ಮ ತಾಯಿ ಬರಬಹುದು. ಈ ವಯಸ್ಸಿನಲ್ಲಿ ಕೋರ್ಟು ಕಛೇರಿ ಅಲೆಯುವ ಬದಲು ಕೂತು ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳುವುದು ಒಳ್ಳೆಯದು.
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್ ಕ್ಲಿಕ್ಕಿಸಿ https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/