ಪತಿ ಮೃತಪಟ್ಟಿದ್ದು, ಮತ್ತೊಂದು ವಿವಾಹವಾಗಿದ್ದೇನೆ- ಮೊದಲ ಗಂಡನ ಆಸ್ತಿ ನನಗೆ ಸಿಗುತ್ತಾ?

nyayadevate
Published on
ನನ್ನ ತಮ್ಮ ತೀರಿಕೊಂಡು ಎರಡು ವರ್ಷಗಳಾಗಿದೆ. ಅವನ ಆಸ್ತಿಗಳೆಲ್ಲ ನಮ್ಮ ತಾಯಿಯ ಹೆಸರಿಗೆ ಬದಲಾಯಿಸಿಕೊಂಡೆವು. ಆ ಮೇಲೆ ನಮ್ಮ ತಾಯಿ ಕೆಲವು ಆಸ್ತಿಗಳನ್ನು ನನಗೆ ಮತ್ತು ನನ್ನ ಮಕ್ಕಳಿಗೆ ದಾನ ಪತ್ರ ರಿಜಿಸ್ಟರ್‌ ಮಾಡಿಕೊಟ್ಟಿದ್ದಾರೆ. ನನ್ನ ತಮ್ಮನ ಹೆಂಡತಿ ಮತ್ತೊಂದು ಮದುವೆಯನ್ನೂ ಆಗಿದ್ದಾಳೆ. ಗ ನನ್ನ ತಮ್ಮನ ಆಸ್ತಿಯಲ್ಲಿ ಭಾಗ ಬೇಕು ಎಂದು ಗಲಾಟೆ ಮಾಡುತ್ತಿದ್ದಾಳೆ. ಆಕೆಗೆ ಆಸ್ತಿಯಲ್ಲಿ ಪಾಲು ಬರುತ್ತದೆಯೇ? ಇನ್ನೊಂದು ಮದುವೆ ಆದ ಮೇಲೆ , ಮೊದಲ ಗಂಡನ ಆಸ್ತಿ ಕೇಳುವುದು ತಪ್ಪಲ್ಲವೇ?

ಉತ್ತರ: ಮೃತ ಹಿಂದೂ ಪುರುಷನ ಆಸ್ತಿ, ಆತನ ತಾಯಿಗೆ, ಆತನ ಹೆಂಡತಿಗೆ ಮತ್ತು ಮಕ್ಕ್ಳು ಇದ್ದರೆ, ಅವರಿಗೆ ಸಮಭಾಗವಾಗಿ ವಿಭಾಗವಾಗುತ್ತದೆ. ನಿಮ್ಮ ತಮ್ಮ ತೀರಿಕೊಂಡ ತಕ್ಷಣವೇ ಅವನ ಆಸ್ತಿಯಲ್ಲಿ ನಿಮ್ಮ ತಾಯಿಗೆ ಮತ್ತು ನಿಮ್ಮ ತಮ್ಮನ ಹೆಂಡತಿಗೆ ಸಮಭಾಗ ಇರುತ್ತದೆ. ಆಕೆ ಇನ್ನೊಂದು ಮದುವೆ ಆದ ಮಾತ್ರಕ್ಕೆ, ಮೊದಲ ಪತಿಯ ಮರಣದಿಂದ ಬಂದ ವಾರಸಾ ಹಕ್ಕು ಕುಂಠಿತವಾಗುವುದಿಲ್ಲ. ನಿಮ್ಮ ತಾಯಿ ತಮ್ಮ ಅರ್ಧ ಬಾಗವನ್ನು ನಿಮಗೋ ಅಥವಾ ಯಾರಿಗೆ ಬೇಕಾದರೆ ಅವರಿಗೆ ಪರಭಾರೆ ಮಾಡಬಹುದು.

ನಿಮ್ಮ ತಮ್ಮನ ಹೆಂಡತಿಯ ಭಾಗವನ್ನು ಅವರು ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ದಾನ ಮಾಡಲು ಅಧಿಕಾರ ಇಲ್ಲ. ನೀವು ನಿಮ್ಮ ತಮ್ಮನ ಹೆಂಡತಿಯನ್ನು ಕರೆಯಿಸಿ ಕೂತು ಮಾತಾಡಿ ನೋಂದಾಯಿತ ಪತ್ರ ಆಕೆಯಿಂದ ಮಾಡಿಸಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಆಕೆ ವಿಭಾಗದ ಕೇಸು ಹಾಕಿದರೆ ಅರ್ಧ ಭಾಗ ಕೊಡಲೇಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net