

ಒಂದು ವೇಳೆ ಆಕೆಯ ವಿಳಾಸವೇ ಸಿಗದೇ ಹೋದರೆ, ಆಕೆಯ ಕಡೆಯಬಾರಿಯ ವಾಸದ ಸ್ಥಳಕ್ಕೆ ನೋಟೀಸು ತೆಗೆದುಕೊಳ್ಳ ಬೇಕಾಗುತ್ತದೆ. ಆಗಲೂ ಆಕೆ ನ್ಯಾಯಾಲಯಕ್ಕೆ ಬರದೇ ಹೋದರೆ, ಪೇಪರ್ ಪಬ್ಲಿಕೇಷನ್ ಮೂಲಕ ನೋಟೀಸು ಕೊಡಲಾಗುತ್ತದೆ. ಆಗಲೂ ಆಕೆ ಬರದೇ ಹೋದರೆ, ನಿಮ್ಮ ವಿಚಾರಣೆ ಮಾಡಿ, ನೀವು ಹೇಳಿರುವ ಅಂಶಗಳು ಸತ್ಯ ಎನ್ನುವದನ್ನು ನೀವು ಸಾಬೀತು ಮಾಡಿದರೆ, ನ್ಯಾಯಾಲಯ ನಿಮ್ಮ ಪರವಾಗಿ ವಿಚ್ಛೇದನದ ಆದೇಶವನ್ನು ಏಕಪಕ್ಷೀಯವಾಗಿ ನಿಮಗೆ ಕೊಡಬಹುದು.