ನೀನು ಬೇಡ, ಮಗುವನ್ನು ಕರೆದುಕೊಂಡು ಹೋಗುತ್ತಿದ್ದೇನೆ ಎನ್ನುತ್ತಿದ್ದಾರೆ ಪತಿ- ನನ್ನ ಗತಿಯೇನು ಮೇಡಂ?

nyayadevate
ಸಾಂದರ್ಭಿಕ ಚಿತ್ರ
Published on
ನನ್ನ ಪತಿ ನಮ್ಮ ನಾಲ್ಕು ವರ್ಷದ ಮಗುವನ್ನು ಕರೆದುಕೊಂಡು ಹೋಗುತ್ತೇನೆ. ನಮ್ಮ ತಂದೆ ತಾಯಿಯೇ ಸಾಕುತ್ತಾರೆ. ನೀನು ನನಗೆ ಬೇಡ. ನಮ್ಮ ಮನೆಗೆ ಬರಬೇಡ ಎನ್ನುತ್ತಿದ್ದಾರೆ. ನಾನು ಮಗುವನ್ನು ಕೊಡಲೇ ಬೇಕೇ?

ಉತ್ತರ: ನೀವು ಹೆದರ ಬೇಕಾಗಿಲ್ಲ. ಸಾಮಾನ್ಯವಾಗಿ ಐದು ವರ್ಷಕ್ಕೆ ಒಳಗಿನ ವಯಸ್ಸಿನ ಮಗುವನ್ನು ತಾಯಿಯ ಅಭಿರಕ್ಷಣೆ/ಕಸ್ಟಡಿಯಲ್ಲಿಯೇ ಇರಲು ನ್ಯಾಯಾಲಯ ಅವಕಾಶ ಮಾಡಿಕೊಡುತ್ತದೆ.

ನಿಮಗೆ ಹೆದರಿಕೆ ಇದ್ದರೆ ನ್ಯಾಯಾಲಯದಲ್ಲಿ ನೀವು ಪ್ರಕರಣ ದಾಖಲಿಸಿ, ಮಗುವನ್ನು ನಿಮ್ಮ ಪತಿ ನಿಮ್ಮಿಂದ ಬೇರ್ಪಡಿಸ ಬಾರದು ಎನ್ನುವ ತಾತ್ಕಾಲಿಕ ನಿರ್ಬಂಧಕ ಆದೇಶವನ್ನೂ /ಟೆಂಪೊರರಿ ಇಂಜಂಕ್ಷನ್‌ ಆರ್ಡರನ್ನೂ ಪಡೆಯಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net