ಕಾಶ್ಮೀರವನ್ನು ಭಯೋತ್ಪಾದನಾ ಕಾರ್ಖಾನೆ ಮಾಡುತ್ತಿರುವುದೇ ಮದರಸಾಗಳು ಎಂದ ಸಚಿವೆ!

madarasa
Published on

ಇಂದೋರ್​: ಮದರಸಾಗಳು ಭಯೋತ್ಪಾದಕರನ್ನು ಬೆಳಸುತ್ತಿದೆ. ಹೀಗಾಗಿ ಮದರಸಾಗಳಿಗೆ ಸರ್ಕಾರದ ಹಣವನ್ನು ಸ್ಥಗಿತಗೊಳಿಸಬೇಕು ಎಂದು ಮಧ್ಯಪ್ರದೇಶದ ಸಚಿವೆ ಉಷಾ ಠಾಕೂರ್ ಹೇಳಿಕೆ ನೀಡಿದ್ದಾರೆ.

ಮದರಸಾಗಳನ್ನು ಮುಚ್ಚುವ ಅಸ್ಸಾಂ ಸರ್ಕಾರದ ಇತ್ತೀಚಿನ ಪ್ರಕಟಣೆಗೆ ಬೆಂಬಲವಾಗಿ ಉಷಾ ಠಾಕೂರ್ ಈ  ವಿವಾದಾತ್ಮಕ ತುಗಳನ್ನಾಡಿದ್ದಾರೆ. ಈ ಹೇಳಿಕೆ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಹಲವರು ಈ ಮಾತಿಗೆ ಕಿಡಿಕಾರಿದ್ದಾರೆ.

ಎಲ್ಲಾ ಭಯೋತ್ಪಾದಕರನ್ನು ಮದರಸಾಗಳಲ್ಲಿ ಬೆಳೆಸಲಾಗುತ್ತದೆ. ಜಮ್ಮು ಕಾಶ್ಮೀರವನ್ನು ಭಯೋತ್ಪಾದನಾ ಕಾರ್ಖಾನೆ ಮಾಡಲಾಗುತ್ತಿದೆ. ರಾಷ್ಟ್ರೀಯತೆಯನ್ನು ಅನುಸರಿಸಲು ಸಾಧ್ಯವಾಗದ ಮದರಸಾಗಳು, ಸಮಾಜದ ಸಂಪೂರ್ಣ ಪ್ರಗತಿಗಾಗಿ ಮದರಸಾಗಳನ್ನು ದೇಶದಲ್ಲಿ ಅಸ್ತಿತ್ವದಲ್ಲಿರುವ ಶಿಕ್ಷಣ ವ್ಯವಸ್ಥೆಯೊಂದಿಗೆ ವಿಲೀನಗೊಳಿಸಬೇಕು ಎಂದು ಉಷಾ ಹೇಳಿಕೆ ನೀಡಿದ್ದಾರೆ.

ನೀವು ಈ ದೇಶದ ಪ್ರಜೆಯಾಗಿದ್ದರೆ, ಉಗ್ರರು, ಭಯೋತ್ಪಾದಕರು ಮದರಸಾಗಳಲ್ಲಿ ಕಲಿತಿರುವುದನ್ನು ಗಮನಿಸಬಹುದು. ಈ ಮದರಸಾಗಳು ವಿದ್ಯಾರ್ಥಿಗಳಿಗೆ ರಾಷ್ಟ್ರೀಯತೆಯನ್ನು ಕಲಿಸುವುದಿಲ್ಲ ಎಂದಿರುವ ಉಷಾ, ಮದರಸಾಗಳನ್ನು ಸದ್ಯ ಅಸ್ತಿತ್ವದಲ್ಲಿರುವ ಶಿಕ್ಷಣ ವ್ಯವಸ್ಥೆಯೊಂದಿಗೆ ವಿಲೀನಗೊಳಿಸದರೆ ಮಾತ್ರ ಸಮಾಜದ ಸಂಪೂರ್ಣ ಪ್ರಗತಿ ಸಾಧಿಸಲು ಸಾಧ್ಯವಿದೆ.

ಸರ್ಕಾರವು ಸಾರ್ವಜನಿಕ ಹಣದಿಂದ ಧಾರ್ಮಿಕ ಶಿಕ್ಷಣವನ್ನು ಕಲಿಸಲು ಅವಕಾಶ ನೀಡುವುದಿಲ್ಲ. ಹೀಗಾಗಿ ಸರ್ಕಾರಿ ಮದರಸಾ ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚಿಸಲಾಗುವುದು. ಈ ನಿಟ್ಟಿನಲ್ಲಿ ನವೆಂಬರ್‌ನಲ್ಲಿ ಸರ್ಕಾರ ಔಪಚಾರಿಕ ಅಧಿಸೂಚನೆ ಹೊರಡಿಸುವುದಾಗಿ ಇದೇ 9ರಂದು ಅಸ್ಸಾಂ ಶಿಕ್ಷಣ ಮತ್ತು ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net