More

    ದುರ್ಗೆಯಾಗಿ ಕಮಲಾ ಹ್ಯಾರಿಸ್​, ಜೋ ಬಿಡನ್​ ಸಿಂಹ, ಟ್ರಂಪ್​ ರಾಕ್ಷಸ… ಸಿಡಿಮಿಡಿಗೊಂಡ ಮತದಾರ

    ವಾಷಿಂಗ್ಟನ್​: ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಮುಖವನ್ನು ದುರ್ಗೆಯ ಫೋಟೋಗೆ ಹಾಕಿ, ಅವರನ್ನು ‘ಮಾ ದುರ್ಗಾ’ ಎಂದು ಬಿಂಬಿಸಿರುವ ಫೋಟೋ ಒಂದು ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

    ಕಮಲಾ ಅವರ ಸೋದರ ಸೊಸೆ ಮೀನಾ ಹ್ಯಾರಿಸ್ ಈ ರೀತಿ ದುರ್ಗೆಯ ಚಿತ್ರದಂತೆ ಚಿತ್ರಿಸಿ ಅದನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದರು. ಈ ಫೋಟೋದಲ್ಲಿ ಕಮಲಾ ಹ್ಯಾರಿಸ್ ದುರ್ಗೆಯ ರೂಪದಲ್ಲಿ ಇದ್ದರೆ, ಅಮೆರಿಕ ಅಧ್ಯಕ್ಷೀಯ ಚುನಾಣೆಯಲ್ಲಿ ಡೆಮಾಕ್ರಟಿಕ್‌ ಅಭ್ಯರ್ಥಿ ಜೋ ಬಿಡನ್‌ ಅವರ ಮುಖವನ್ನು ಸಿಂಹದ ಮುಖಕ್ಕೆ ಅಂಟಿಸಲಾಗಿತ್ತು. ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅನ್ನು ರಾಕ್ಷಸನ ಜಾಗದಲ್ಲಿ ಇಟ್ಟಿದ್ದು, ಕಮಲಾ ಹ್ಯಾರಿಸ್​ ಅವರನ್ನು ಸಂಹರಿಸುವಂತೆ ಚಿತ್ರಿಸಲಾಗಿತ್ತು.

    ಫೋಟೋಶಾಪ್​ ಮೂಲಕ ತಯಾರಿಸಲಾಗಿರುವ ಈ ಪೋಸ್ಟ್​ ಇದೀಗ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ನಿಜಕ್ಕೂ ಈ ಚಿತ್ರ ನೋಡಿ ನನಗೆ ಮಾತೇ ಹೊರಳುತ್ತಿಲ್ಲ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಈ ಚಿತ್ರದ ವಿರುದ್ಧ ಕಿಡಿಕಾರಿದ್ದಾರೆ.

    ಈ ಫೋಟೋ ಹಿಂದೂಗಳ ಧಾರ್ಮಿಕ ಭಾವಕ್ಕೆ ನೋವು ಉಂಟುಮಾಡುತ್ತಿದೆ. ದುರ್ಗೆಯನ್ನು ಪೂಜಿಸುವ ಅಸಂಖ್ಯ ಜನರಿಗೆ ಇದರಿಂದ ನೋವಾಗಿದೆ ಎನ್ನುವ ಮೂಲಕ ಕಮಲಾ ಹ್ಯಾರಿಸ್ ಮತ್ತು ಮೀನಾ ಅವರನ್ನು ನೆಟ್ಟಿಗರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಭಾರಿ ಆಕ್ರೋಶ ವ್ಯಕ್ತವಾಗುತ್ತಲೇ ಮೀನಾ ಹ್ಯಾರಿಸ್ ತನ್ನ ಟ್ವೀಟ್ ಡಿಲೀಟ್​ ಮಾಡಿದ್ದೂ ಅಲ್ಲದೇ, ಇದಕ್ಕೆ ವಿರುದ್ಧವಾಗಿ ಕಮೆಂಟ್​ ಹಾಕಿದ ನೆಟ್ಟಿಗರನ್ನು ತಮ್ಮ ಖಾತೆಯಿಂದ ಬ್ಲಾಕ್​ ಮಾಡಿದ್ದಾರೆ!

    ಇದನ್ನೂ ಓದಿ: ಡಿಜೆಹಳ್ಳಿ ಗಲಭೆ: ಕಾಲ್​ ರೆಕಾರ್ಡ್ಸ್​ ಲೀಕ್​ ಆದ್ರೇನು? ಹೆದರಬೇಡಿ ಎಂದು ಕೈ ನಾಯಕರಿಗೆ ಡಿಕೆಶಿ ಅಭಯ

    ಬ್ಲಾಕ್​ ಮಾಡಿರುವುದಕ್ಕೆ ಕೂಡ ಇದೀಗ ಭಾರಿ ವಿರೋಧ ವ್ಯಕ್ತವಾಗಿದ್ದು, ಅನೇಕ ಮಂದಿ ಕಿಡಿಕಾರಿದ್ದಾರೆ. ಇಂಥ ಉನ್ನತ ಸ್ಥಾನದಲ್ಲಿ ಇರುವವರ ಸಹೋದರಿಯೊಬ್ಬರು ಈ ರೀತಿ ಕೆಟ್ಟದ್ದಾಗಿ ಚಿತ್ರಿಸಿರುವುದು ಅವರ ಮನಸ್ಥಿತಿಯನ್ನು ತೋರುತ್ತದೆ. ಅದಕ್ಕೆ ಕಮೆಂಟ್​ ಮಾಡಿದವರನ್ನು ಬ್ಲಾಕ್​ ಮಾಡುವ ಮೂಲಕ ತಮ್ಮ ನಿಜವಾದ ಬಣ್ಣವನ್ನು ಅವರು ಬಯಲು ಮಾಡಿದ್ದಾರೆ ಎಂದು ಅನೇಕ ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಮೈಕಾದ ತಂದೆ ಮತ್ತು ಭಾರತೀಯ ತಾಯಿಗೆ ಜನಿಸಿದ ಕ್ಯಾಲಿಫೋರ್ನಿಯಾ ಸೆನೆಟರ್ ಕಮಲಾ ಹ್ಯಾರಿಸ್ ಚುನಾಯಿತರಾದರೆ, ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷರಾಗಲಿದ್ದಾರೆ. ಕಮಲಾ ಅವರ ತಾಯಿ ಶ್ಯಾಮಲಾ ಗೋಪಾಲನ್ ಚೆನ್ನೈ ಮೂಲದವರಾಗಿದ್ದು, ಹೆಚ್ಚಿನ ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳಿ ಅಲ್ಲಿಯ ಪ್ರಜೆಯಾಗಿದ್ದಾರೆ.

    ಅಂದಾಜು ನಾಲ್ಕು ದಶಲಕ್ಷ ಭಾರತೀಯರು ಅಮೆರಿಕನ್​ ಪ್ರಜೆಗಳಾಗಿದ್ದು, ಅದರಲ್ಲಿ ಸುಮಾರು 2.5 ದಶಲಕ್ಷ ಮಂದಿ ಬರುವ ನವೆಂಬರ್​ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸಂಭಾವ್ಯ ಮತದಾರರಾಗಿದ್ದಾರೆ. ಇಷ್ಟು ಪ್ರಮಾಣದ ಭಾರತೀಯರನ್ನು ಹೊಂದಿರುವ ಅಮೆರಿಕದಲ್ಲಿ ಈ ರೀತಿ ಚಿತ್ರವನ್ನು ಹಾಕುವ ಮೂಲಕ ಕಮಲಾ ಹ್ಯಾರಿಸ್​ ಅನೇಕ ಮತದಾರರ ತಿರಸ್ಕಾರಕ್ಕೆ ಒಳಗಾಗಿದ್ದಾರೆ.

    ಬಿಎಸ್​ವೈ ಅಧಿಕಾರ ಮುಗೀತು- ಉ.ಕದವರೇ ಮುಂದಿನ ಸಿಎಂ: ಯತ್ನಾಳ್​ ಸಿಡಿಸಿದರು ಬಾಂಬ್​

    ಬ್ರಿಟನ್​ ಪ್ರಧಾನಿಗೆ ಸಂಬಳ ಸಾಕಾಗುತ್ತಿಲ್ಲವಂತೆ! ಇನ್ಫಿ ಅಳಿಯನಿಗೆ ಒಲಿಯಲಿದೆಯೇ ಈ ಪಟ್ಟ?

    ರೈಲಲ್ಲಿ ಹೋದ ಕಳ್ಳನನ್ನು ಹಿಡಿಯಲು ವಿಮಾನವೇರಿ ಹೊರಟ ಬೆಂಗಳೂರು ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts