More

    ಬ್ರಿಟನ್​ ಪ್ರಧಾನಿಗೆ ಸಂಬಳ ಸಾಕಾಗುತ್ತಿಲ್ಲವಂತೆ! ಇನ್ಫಿ ಅಳಿಯನಿಗೆ ಒಲಿಯಲಿದೆಯೇ ಈ ಪಟ್ಟ?

    ಲಂಡನ್ : ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ವಿರುದ್ಧ ಕೋವಿಡ್​ ನಿಭಾಯಿಸುವಲ್ಲಿ ವಿಫಲವಾಗಿರುವ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಈ ಬೆನ್ನಲ್ಲೇ ಅವರೀಗ ರಾಜೀನಾಮೆಯತ್ತ ಒಲವು ತೋರಿದ್ದಾರೆ.

    ತಮಗೆ ಈಗ ಸಿಗುತ್ತಿರುವ ಸಂಬಳ ಸಾಕಾಗುತ್ತಿಲ್ಲ, ಈ ಸಂಬಳದಿಂದ ಜೀವನ ನಡೆಸಲು ಕಷ್ಟವಾಗುತ್ತಿದೆ ಎಂಬ ಕಾರಣವನ್ನು ನೀಡಿರುವ ಬೋರಿಸ್​, ತಾವು ಪ್ರಧಾನಿ ಹುದ್ದೆಯನ್ನು ತ್ಯಜಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಹೀಗೆ ಆದರೆ ಇನ್​ಫೋಸಿಸ್​ ಅಧ್ಯಕ್ಷ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಾಕ್ ಅವರು ಪ್ರಧಾನಿಯಾಗುವ ಸಾಧ್ಯತೆ ಹೆಚ್ಚಿದೆ ಎಂದೇ ಹೇಳಲಾಗುತ್ತಿದೆ.

    ಇದನ್ನೂ ಓದಿ: ರೈಲಲ್ಲಿ ಹೋದ ಕಳ್ಳನನ್ನು ಹಿಡಿಯಲು ವಿಮಾನವೇರಿ ಹೊರಟ ಬೆಂಗಳೂರು ಪೊಲೀಸರು

    ಇನ್ನು, ಪ್ರಧಾನಿಯ ಸಂಬಳದ ವಿಷಯಕ್ಕೆ ಬರುವುದಾದರೆ, ಸದ್ಯ ಬೋರಿಸ್​ ಜಾನ್ಸನ್​ ಅವರು, 1.50 ಲಕ್ಷ ಡಾಲರ್ ವೇತನ ವಾರ್ಷಿಕವಾಗಿ ಪಡೆಯುತ್ತಿದ್ದಾರೆ. ಅಂದರೆ ಸುಮಾರು 1.10 ಕೋಟಿ ರೂಪಾಯಿಗಳು. ಆದರೆ ತಮಗೆ ಈ ಸಂಬಳ ಸಾಕಾಗುತ್ತಿಲ್ಲ ಎನ್ನುವುದು ಅವರ ವಾದ.

    ಇದಕ್ಕೆ ಕಾರಣವೂ ಇದೆ. ಈ ಹಿಂದೆ ಬೋರಿಸ್​ ಅವರು ದಿ ಟೆಲಿಗ್ರಾಫ್ ಪತ್ರಿಕೆಗೆ ಅಂಕಣಕಾರರಾಗಿದ್ದರು. ಆದರೆ ಅವರಿಗೆ ಸಿಗುತ್ತಿದ್ದುದು ವರ್ಷಕ್ಕೆ 2.75 ಲಕ್ಷ ಡಾಲರ್, ಅಂದರೆ ಸುಮಾರು 1.84 ಕೋಟಿ ರೂಪಾಯಿಗಳು, ಇದರ ಜತೆಗೆ ತಿಂಗಳಲ್ಲಿ ಎರಡು ಭಾಷಣ ಮಾಡಿ ಅವರು 1.60 ಲಕ್ಷ ಡಾಲರ್ ಸಂಪಾದಿಸುತ್ತಿದ್ದರು. ಇದಕ್ಕೆ ಹೋಲಿಸಿದರೆ ತಮ್ಮ ವೇತನ ಅತ್ಯಲ್ಪ ಎಂದಿದ್ದಾರೆ ಬೋರಿಸ್​.

    ಬೋರಿಸ್ ಅವರಿಗೆ ಆರು ಮಕ್ಕಳು. ಮಾತ್ರವಲ್ಲದೇ, ಮಾಜಿ ಪತ್ನಿಗೆ ಇವರು ಬೃಹತ್​ ಮೊತ್ತದ ಪರಿಹಾರ ನೀಡಬೇಕಿದೆ. ಆದ್ದರಿಂದ ಸಂಬಳ ಸಾಕಾಗುವುದಿಲ್ಲ ಎಂದಿದ್ದಾರೆ. ಈ ಕುರಿತು ಅವರು, ತಮ್ಮ ಆತ್ಮೀಯರ ಬಳಿ ಮಾತನಾಡಿದ್ದಾರೆ ಎಂದು ಬ್ರಿಟಿಷ್ ಪತ್ರಿಕೆ ದಿ ಡೈಲಿ ಮಿರರ್ ವರದಿಯಲ್ಲಿ ಹೇಳಿದೆ.
    ಸದ್ಯ ಎಲ್ಲರ ದೃಷ್ಟಿ ರಿಷಿ ಸುನಾಕ್ ಅವರ ಮೇಲೆ ನೆಟ್ಟಿದೆ.

    ನಟಿಯರನ್ನು ಬಿಡುಗಡೆ ಮಾಡದಿದ್ರೆ ಬಾಂಬ್​ ಬ್ಲಾಸ್ಟ್​: ಉಗ್ರ ಸಂಘಟನೆ ಹೆಸರಲ್ಲಿ ಪತ್ರ!

    ಲಡಾಖ್​ ಗಡಿಯೊಳಗೆ ನುಸುಳಿದ ಚೀನಿ ಸೈನಿಕ- ಬೆಚ್ಚಗಿನ ಆಹಾರ, ಬಟ್ಟೆ ನೀಡಿದ ಯೋಧರು!

    ವಿಚ್ಛೇದನಕ್ಕೆ ಪರಸ್ಪರ ಒಪ್ಪಿ ನಂತರ ಒಬ್ಬರು ಮನಸ್ಸು ಬದಲಿಸಿದರೆ ಪರಿಹಾರವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts