More

    ನಟಿಯರನ್ನು ಬಿಡುಗಡೆ ಮಾಡದಿದ್ರೆ ಬಾಂಬ್​ ಬ್ಲಾಸ್ಟ್​: ಉಗ್ರ ಸಂಘಟನೆ ಹೆಸರಲ್ಲಿ ಪತ್ರ!

    ಬೆಂಗಳೂರು: ಡ್ರಗ್ಸ್​ ಕೇಸಿನಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾರನ್ನು ಬಿಡುಗಡೆ ಮಾಡದಿದ್ದರೆ ಬಾಂಬ್ ಬ್ಲಾಸ್ಟ್​ ಮಾಡುವುದಾಗಿ ಬೆದರಿಕೆ ಪತ್ರ ಬಂದಿದೆ.

    ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರಿಗೆ ಈ ಪತ್ರ ಬಂದಿದೆ. ಮೊಹಮ್ಮದ್‌ ಜೈಷ್‌ ಉಗ್ರ ಸಂಘಟನೆ ಹೆಸರಿನಲ್ಲಿ ಈ ಪತ್ರವಿದೆ. ಆದರೆ ಇದು ನಿಜವಾಗಿಯೂ ಉಗ್ರರ ಪತ್ರವೇ ಅಥವಾ ಯಾರೋ ಅವರ ಹೆಸರಿನಲ್ಲಿ ಬರೆದಿರುವ ಪತ್ರವೇ ಅಥವಾ ಇಬ್ಬರೂ ನಟಿಯರನ್ನು ಬಿಡಲೇಬಾರದು ಎನ್ನುವ ಕಾರಣಕ್ಕೆ ಸುಖಾಸುಮ್ಮನೇ ಪತ್ರ ಬರೆಯಲಾಗಿದೆಯೇ ಎನ್ನುವುದಕ್ಕೆ ಉತ್ತರ ಸಿಕ್ಕಿಲ್ಲ.

    ನಿನ್ನೆ ಸಂಜೆ ಈ ಪತ್ರ ಬಂದಿದೆ. ತುಮಕೂರಿನ ಗುಬ್ಬಿ ತಾಲೂಕಿನಿಂದ ಪತ್ರ ಪೋಸ್ಟ್​ ಆಗಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದಿದೆ. ಡ್ರಗ್ಸ್​ ನಟಿಯರ ಕೇಸು ಮಾತ್ರವಲ್ಲದೇ, ರಾಜಕೀಯ ತಿರುವು ಪಡೆದುಕೊಂಡು, ಹಲವಾರು ಕಾಂಗ್ರೆಸ್​ ನಾಯಕರಿಗೆ ಮುಳುವಾಗಿರುವ ಕೆ.ಜಿ ಹಳ್ಳಿ ಡಿ.ಜೆ ಹಳ್ಳಿ ಪ್ರಕರಣದಿಂದ ಹಿಂದೆ ಸರಿಯುವಂತೆಯೂ ಪತ್ರದಲ್ಲಿ ಉಲ್ಲೇಖವಿದೆ ಎನ್ನಲಾಗಿದೆ.

    ಇದನ್ನೂ ಓದಿ: ಮನೆಗೆ ನುಗ್ಗಿ ವಿದ್ಯಾರ್ಥಿನಿ ಕೊಲೆ ಪ್ರಕರಣ: ಯುವತಿ ಫೋನ್​ನಲ್ಲಿತ್ತು ಪ್ರಿಯಕರನ ಕುರಿತು ಸ್ಫೋಟಕ ಮಾಹಿತಿ!

    ಪತ್ರದಲ್ಲಿ ಕವರ್​ ಒಳಗೆ ಬಾಂಬ್ ಇಟ್ಟಿದ್ದೇವೆ ಎಂದೂ ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಶ್ವಾನದಳ ಮತ್ತು ಬಾಂಬ್ ಡಿಟೆಕ್ಟಿವ್ ತಂಡ ಪರಿಶೀಲನೆ ನಡೆಸಿದಾಗ ಕವರ್​ನಲ್ಲಿ ಡಿಟೋನೇಟರ್ ಪತ್ತೆಯಾಗಿದೆ. ಪ್ರಕರಣ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅದೇ ರೀತಿ, ಡಿಸಿಪಿ ರವಿಕುಮಾರ್ ಅವರ ಹೆಸರಿಗೆ ಇನ್ನೊಂದು ಪತ್ರ ಬಂದಿದೆ. ಅದರಲ್ಲಿ ಕೂಡ ರಾಗಿಣಿ ಸಂಜನಾಗೆ ಜಾಮೀನು ಸಿಗದೇ ಹೋದರೆ ಕಮಿಷನರ್ ಕಚೇರಿ ಸ್ಫೋಟಿಸುತ್ತೇವೆ ಎಂದು ಪತ್ರ ಬರೆಯಲಾಗಿದೆ ಎನ್ನಲಾಗಿದೆ. ಸಿಸಿಬಿ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಸುಮ್ಮನಿರಬೇಕು. ಇಲ್ಲದಿದ್ದರೆ ಕಮಿಷನರ್‌ ಕಚೇರಿ ಸ್ಫೋಟ ಮಾಡುತ್ತೇವೆ ಎಂದು ಬೆದರಿಕೆ ಹಾಕಲಾಗಿದೆಯಂತೆ.

    ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್​ ಲಿಂಕ್ ಆರೋಪ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿಗೆ ಜಾಮೀನು ನೀಡುವಂತೆ ಮತ್ತು ಡಿಜಿ ಹಳ್ಳಿ-ಕೆಜಿ ಹಳ್ಳಿ ಗಲಭೆ ತನಿಖೆಯಿಂದ ಹಿಂದೆ ಸರಿಯುವಂತೆ ಬೆದರಿಕೆ ಹಾಕಿ ಪತ್ರ ಬರೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
    ಈ ಸಂಬಂಧ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಈ ದೀಪಾವಳಿ ಚೀನಾದಲ್ಲಿ ಕತ್ತಲೋ ಕತ್ತಲು… ₹40 ಸಾವಿರ ಕೋಟಿ ಕಾಣದೇ ಕಂಗಾಲು!

    ಲಡಾಖ್​ ಗಡಿಯೊಳಗೆ ನುಸುಳಿದ ಚೀನಿ ಸೈನಿಕ- ಬೆಚ್ಚಗಿನ ಆಹಾರ, ಬಟ್ಟೆ ನೀಡಿದ ಯೋಧರು!

    ಸಚಿವೆಯನ್ನು ‘ಐಟಂ’ ಎಂದು ಕರೆದು ವಿವಾದ ಎಳೆದುಕೊಂಡ ಮಾಜಿ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts