More

    ಶೀಘ್ರದಲ್ಲೇ ಇಡೀ ನಗರವನ್ನು ಸ್ಫೋಟಿಸುತ್ತೇನೆ: ಮುಂಬೈ ಪೊಲೀಸರಿಗೆ ಟ್ವೀಟ್​ ಮೂಲಕ ಬೆದರಿಕೆ

    ಮುಂಬೈ: ವಾಣಿಜ್ಯ ನಗರಿ ಮುಂಬೈ ಅನ್ನು ಸ್ಫೋಟಿಸುವುದಾಗಿ ಪೊಲೀಸರಿಗೆ ಬೆದರಿಕೆಗೆ ಸಂದೇಶವೊಂದು ಬಂದಿದೆ. ಇದುವರೆಗೂ ಫೋನ್​ ಕಾಲ್​ ಮತ್ತು ಈಮೇಲ್​ ಮೂಲಕ ಬರುತ್ತಿದ್ದ ಬೆದರಿಕೆ ಕರೆಗಳು ಈ ಬಾರಿ ಟ್ವಿಟರ್​ ಮೂಲಕ ಬಂದಿದೆ.

    ಪೊಲೀಸ್​ ಮೂಲಗಳ ಪ್ರಕಾರ ಸೋಮವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಮುಂಬೈ ಟ್ವಿಟರ್​ ಖಾತೆಗೆ ಬೆದರಿಕೆ ಸಂದೇಶ ಬಂಧಿದೆ. ಶೀಘ್ರದಲ್ಲೇ ಇಡೀ ನಗರವನ್ನು ಸ್ಫೋಟಿಸುತ್ತೇನೆ ಎಂದು ಇಂಗ್ಲಿಷ್​ ಭಾಷೆಯಲ್ಲಿ ಕಿಡಿಗೇಡಿಯೊಬ್ಬ ಬೆದರಿಕೆ ಸಂದೇಶ ರವಾನಿಸಿದ್ದಾನೆ.

    ಈ ಸಂದೇಶವನ್ನು ಮುಂಬೈ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಮೆಸೇಜ್​ ಬಂದ ಖಾತೆಯನ್ನು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿದಿದೆ.

    ಬೆಂಗಳೂರಿನಲ್ಲೂ ಇದೇ ರೀತಿ ಬೆದರಿಕೆ

    ಈ ಹಿಂದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಇದೇ ರೀತಿಯ ಬೆದರಿಕೆ ಕರೆ ಬಂದಿತ್ತು. ವೈಭವ್​ ಗಣೇಶ್ ಎಂಬಾತ ಫ್ಯೂಚರ್​ ಎಫ್​ಟಿಸುಫ್ಜಾನ್​ (@futureftsufjan) ಹೆಸರಿನ ಟ್ವಿಟರ್​ ಖಾತೆಯಲ್ಲಿ ಕಳೆದ ವರ್ಷ ಡಿಸೆಂಬರ್​ 10ರಂದು ರಾತ್ರಿ 10.15ಕ್ಕೆ ಟ್ವೀಟ್​ ಮಾಡಿ, ನಾನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್​ ಇಡುತ್ತೇನೆ. ಹೀಗಾಗಿ ಅವರು ನಗರಕ್ಕೆ ಹತ್ತಿರದಲ್ಲಿ ಮತ್ತೊಂದು ನಿಲ್ದಾಣವನ್ನು ಮರು ನಿರ್ಮಿಸಬೇಕಾಗುತ್ತದೆ ಎಂದಿದ್ದ. ಬಳಿಕ ಆತನನ್ನು ಬಂಧಿಸಲಾಗಿತ್ತು.

    ವೈಭವ್​ ಗಣೇಶ್​. ಆತ ಇಂಜಿನಿಯರಿಂಗ್ ‌ವಿದ್ಯಾರ್ಥಿಯಾಗಿದ್ದ. ಬೆಂಗಳೂರು ಟ್ರಾಫಿಕ್ ಜಾಮ್​ನಿಂದ ಬೇಸತ್ತು ಈ ರೀತಿ ಮಾಡಿದೆ ಅಂತ ಆರೋಪಿ ಬಾಯಿಬಿಟ್ಟ. ಪರಪ್ಪನ ಅಗ್ರಹಾರದ ಕೂಡ್ಲು ಗೇಟ್​ನಿಂದ ಏರ್​ಪೊರ್ಟ್​ಗೆ ಆತ ಪ್ರಯಾಣ ಮಾಡಿದ್ದ. ಈ ವೇಳೆ ಟ್ರಾಫಿಕ್ ಜಾಮ್ ಜಾಸ್ತಿಯಾಗಿತ್ತು. ಇದರಿಂದ ಬೇಸತ್ತು ಕುಲ್ಲಕ್ಷ ಕಾರಣಕ್ಕಾಗಿ ವೈಭವ್ ಗಣೇಶ್ ಈ ರೀತಿ ‌ಮಾಡಿದ್ದಾನೆ. ಮೂಲತ ಪಂಜಾಬ್ ರಾಜ್ಯದವನಾಗಿದ್ದು, ಪಾಲಕರ ಜತೆ ಬೆಂಗಳೂರಿನ‌ ಕೊಡ್ಲು ಗೇಟ್ ಬಳಿ ಆರೋಪಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದರು. (ಏಜೆನ್ಸೀಸ್​)

    ಬೆಂಗಳೂರು ವಿಮಾನ ನಿಲ್ದಾಣ ಸ್ಫೋಟಿಸುವುದಾಗಿ ಟ್ವೀಟ್​ ಮೂಲಕ ಬೆದರಿಕೆ ಹಾಕಿದ್ದ ಆರೋಪಿ ಯುವಕ ಅರೆಸ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts