More

    ನೂಡಲ್ಸ್​ ಪಾಕೆಟ್​​ಗಳಲ್ಲಿ 6 ಕೋಟಿಗೂ ಅಧಿಕ ಮೌಲ್ಯದ ಚಿನ್ನ, ವಜ್ರಗಳು ಪತ್ತೆ! ದಂಗಾದ ಅಧಿಕಾರಿಗಳು

    ಮುಂಬೈ: ಬಹುತೇಕರು ನೂಡಲ್ಸ್ ತಿನ್ನಲು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ನೂಡಲ್ಸ್ ಪಾಕೆಟ್​ ಒಳಗೆ ನೂಡಲ್ಸ್​ ಜತೆಗೆ ಅದಕ್ಕೆ ಸೂಕ್ತವಾದ ಪುಟ್ಟ ಮಸಾಲೆ ಪ್ಯಾಕೆಟ್‌ಗಳನ್ನು ಇಡಲಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದರಲ್ಲಿ ಅಚ್ಚರಿಯೇನು ಇಲ್ಲ. ಆದರೆ ಇಲ್ಲೊಂದು ಕಡೆ ನೂಡಲ್ಸ್ ಪ್ಯಾಕೆಟ್​ ಒಳಗೆ ನೂಡಲ್ಸ್​ ಜತೆಗೆ ಚಿನ್ನ ಮತ್ತು ವಜ್ರಗಳು ಕಾಣಿಸಿಕೊಂಡಿವೆ. ಅಷ್ಟಕ್ಕೂ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಸ್ತುಗಳು ನೂಡಲ್ಸ್​ ಪಾಕೆಟ್​ ಒಳಗೆ ಹೇಗೆ ಬಂತು ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರ ಮುಂದೆ ಓದಿ.

    ವಿಮಾನ ನಿಲ್ದಾಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರನ್ನು ತಪಾಸಣೆ ಮಾಡುವುದು ಸಹಜ. ಆ ಸಮಯದಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದರೆ ವಶಪಡಿಸಿಕೊಳ್ಳುತ್ತಾರೆ ಮತ್ತು ಆ ವಸ್ತುವನ್ನು ಅವಲಂಬಿಸಿ ಕ್ರಮ ಜರುಗಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಅದೇ ರೀತಿ ಪ್ರಯಾಣಿಕರೊಬ್ಬರ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ನೂಡಲ್ಸ್ ಪ್ಯಾಕೆಟ್​ಗಳು ಪತ್ತೆಯಾಗಿವೆ. ಆದರೆ ಅವು ಮಾಮೂಲಿ ನೂಡಲ್ಸ್ ಪಾಕೆಟ್​ಗಳಾಗಿರಲಿಲ್ಲ. ನೂಡಲ್ಸ್​ ಪಾಕೆಟ್​ ತಾನೇ ಅಂತಾ ನಿರ್ಲಕ್ಷ್ಯ ವಹಿಸದೆ, ಅವುಗಳನ್ನು ತೆರೆದು ನೋಡಿದಾಗ ಅಸಲಿ ಸಂಗತಿ ಹೊರಬಿದ್ದಿದೆ. ಆ ಪಾಕೆಟ್​ನಲ್ಲಿ ಕೋಟಿಗಟ್ಟಲೆ ಮೌಲ್ಯದ ಚಿನ್ನ, ವಜ್ರ ಪತ್ತೆಯಾಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ನಿನ್ನೆ (ಏಪ್ರಿಲ್​ 23) ಘಟನೆ ನಡೆದಿದೆ. 4.44 ಕೋಟಿ ಮೌಲ್ಯದ 6.8 ಕೆಜಿ ಚಿನ್ನ ಮತ್ತು 2.02 ಕೋಟಿ ರೂ. ಮೌಲ್ಯದ ವಜ್ರಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಮುಂಬೈನಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ ಭಾರತೀಯ ಪ್ರಯಾಣಿಕರೊಬ್ಬರ ಟ್ರಾಲಿ ಬ್ಯಾಗ್‌ನಲ್ಲಿ ನೂಡಲ್ಸ್ ಪಾಕೆಟ್‌ಗಳ ರೂಪದಲ್ಲಿ ಈ ಬೆಲೆಬಾಳುವ ನಗದು ಪತ್ತೆಯಾಗಿದೆ. ಇದರೊಂದಿಗೆ ಪೊಲೀಸರು ಪ್ರಯಾಣಿಕನನ್ನು ಬಂಧಿಸಿದ್ದಾರೆ.

    ಇನ್ನೂ ಶ್ರೀಲಂಕಾದ ಕೊಲಂಬೊದಿಂದ ಮುಂಬೈಗೆ ಬಂದಿದ್ದ ಮತ್ತೊಬ್ಬ ಮಹಿಳೆ ಚಿನ್ನವನ್ನು ತುಂಡು ಮಾಡಿ ಬಟ್ಟೆಯಲ್ಲಿ ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದದ್ದು ಪತ್ತೆಯಾಗಿದೆ. ಆಕೆಯನ್ನೂ ಬಂಧಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿದ್ದು, ಕಸ್ಟಮ್ಸ್​ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. (ಏಜೆನ್ಸೀಸ್​)

    ರೋಹಿತ್​ ನಂತ್ರ ಈತನೇ ಟೀಮ್​ ಇಂಡಿಯಾ ಕ್ಯಾಪ್ಟನ್​! ಯಾರೂ ಊಹಿಸದ ಹೆಸರು ಹೇಳಿದ ಭಜ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts