More

    ಚುನಾವಣಾ ಆಯೋಗದ ನಿಯಮ ಪಾಲಿಸಿ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಚುನಾವಣಾ ಆಯೋಗವು ಮತದಾನ ರ್ಪೂಣಗೊಳ್ಳುವ 48, 78 ಗಂಟೆಗಳ ಪೂರ್ವದಲ್ಲಿ ಚುನಾವಣಾ ಅಭ್ಯಥಿರ್ ಪಾಲಿಸಬೇಕಾದ ನಿಯಮ ಹಾಗೂ ನಿಷೇಧಿಸಿರುವ ವಿಷಯಗಳ ಕುರಿತು ಹೊರಡಿಸಿದ ಮಾರ್ಗಸೂಚಿಗಳನ್ನು ಅಭ್ಯಥಿರ್ಗಳು ಮತ್ತು ರಾಜಕೀಯ ಪಗಳು ಪಾಲಿಸಬೇಕು ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಧಾರವಾಡ ಲೋಕಸಭಾ ಮತೇತ್ರಕ್ಕೆ ಸಂಬಂಧಿಸಿದ ಚುನಾವಣಾ ಸಾಮಾನ್ಯ ವೀಕರು, ಲೆಕ್ಕ ವೀಕರು, ಪೊಲೀಸ್​ ವೀಕರ ಉಪಸ್ಥಿತಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಚುನಾವಣಾ ಅಭ್ಯಥಿರ್ಗಳ, ರಾಜಕೀಯ ಪಗಳ ಹಾಗೂ ಸಹಾಯಕ ಚುನಾವಣಾಧಿಕಾರಿಗಳು, ನೋಡಲ್​ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
    ಕೇಂದ್ರ ಚುನಾವಣಾ ಆಯೋಗವು ಮತದಾನವನ್ನು ಶಾಂತಿಯುತ, ನಿರ್ಭಯ, ಮುಕ್ತ ಮತ್ತು ಪಾರದರ್ಶಕವಾಗಿ ನಡೆಸಲು ವಿವಿಧ ಕ್ರಮ ಕೈಗೊಂಡಿದೆ. ಮತದಾನ ಮುಕ್ತಾಯವಾಗುವ ಪೂರ್ವದ 72 ಮತ್ತು 48 ಗಂಟೆಗಳಲ್ಲಿ ಅಭ್ಯಥಿರ್ ಮತ್ತು ರಾಜಕೀಯ ಪಗಳು ಪಾಲಿಸಬೇಕಾದ ನಿಯಮಗಳು ಮುಖ್ಯ. ಈ ಅವಧಿಯಲ್ಲಿ ಜರುಗುವ ರಾಜಕೀಯ ಕಾರ್ಯ ಚಟುವಟಿಕೆಗಳ ನಿಗಾವಹಿಸಲು ಹೆಚ್ಚುವರಿ ತಪಾಸಣಾ ತಂಡಗಳನ್ನು ರಚಿಸಿದ್ದು, ಉಲ್ಲಂನೆ ಕಂಡುಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
    ರಾಜ್ಯ ಅಥವಾ ಜಿಲ್ಲಾ ಎಂಸಿಎಂಸಿಯ ಪೂರ್ವ&ಪ್ರಮಾಣೀಕರಣವಿಲ್ಲದೆ ರಾಜಕೀಯ ಜಾಹೀರಾತುಗಳನ್ನು ಮತದಾನದ ದಿನ ಮತ್ತು ಪೂರ್ವ ದಿನದಂದು ಮುದ್ರಣ ಮಾಧ್ಯಮದಲ್ಲಿ ಪ್ರಕಟಿಸಲು ಅವಕಾಶವಿಲ್ಲ. ಅಭ್ಯಥಿರ್ಯು ಅಪರಾಧಿಕ ಪ್ರಕರಣಗಳನ್ನು ಹೊಂದಿದ್ದಲ್ಲಿ ಸಿ&1 ಸ್ವರೂಪದಲ್ಲಿ ಮತ್ತು ರಾಜಕೀಯ ಪಗಳು ಸಿ&2 ನಲ್ಲಿ ಕ್ರಿಮಿನಲ್​ ಪೂರ್ವವರ್ತನೆಯ ಪ್ರಕಟಣೆಯನ್ನು ಮತದಾನದ ಎರಡು ದಿನಗಳ ಮೊದಲು ಕಡ್ಡಾಯವಾಗಿ ಪ್ರಕಟಿಸಬೇಕು ಎಂದರು.
    ಚುನಾವಣಾ ಸಾಮಾನ್ಯ ವೀಕ ಅಜಯ ಗುಪ್ತಾ, ಪೊಲೀಸ್​ ವೀಕ ಬನ್ವರಲಾಲ ಮೀನಾ, ಭೂಷಣ ಪಾಟೀಲ, ಪೊಲೀಸ್​ ಆಯುಕ್ತೆ ಡಾ. ರೇಣುಕಾ ಸುಕುಮಾರ, ಜಿಪಂ ಸಿಇಒ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್​ ಅಧೀಕ ಡಾ.ಗೋಪಾಲ ಬ್ಯಾಕೋಡ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ನೋಡಲ್​ ಅಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts