More

    ಬೆಂಗಳೂರು ವಿಮಾನ ನಿಲ್ದಾಣ ಸ್ಫೋಟಿಸುವುದಾಗಿ ಟ್ವೀಟ್​ ಮೂಲಕ ಬೆದರಿಕೆ ಹಾಕಿದ್ದ ಆರೋಪಿ ಯುವಕ ಅರೆಸ್ಟ್​!

    ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಸ್ಫೋಟಿಸುವ ಕುರಿತು ಟ್ವಿಟರ್​ನಲ್ಲಿ ಬೆದರಿಕೆ ಹಾಕಿದ ಅಪರಿಚಿತ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ವ್ಯಕ್ತಿಯನ್ನು ವೈಭವ್​ ಗಣೇಶ್​ (20) ಎಂದು ಗುರುತಿಸಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ನೀಡಿದ ದೂರಿನ‌ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.

    ಫ್ಯೂಚರ್​ ಎಫ್​ಟಿಸುಫ್ಜಾನ್​ (@futureftsufjan) ಹೆಸರಿನ ಟ್ವಿಟರ್​ ಖಾತೆಯಲ್ಲಿ ಡಿಸೆಂಬರ್​ 10ರಂದು ರಾತ್ರಿ 10.15ಕ್ಕೆ ಟ್ವೀಟ್​ ಮಾಡಲಾಗಿತ್ತು. ನಾನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್​ ಇಡುತ್ತೇನೆ. ಹೀಗಾಗಿ ಅವರು ನಗರಕ್ಕೆ ಹತ್ತಿರದಲ್ಲಿ ಮತ್ತೊಂದು ನಿಲ್ದಾಣವನ್ನು ಮರು ನಿರ್ಮಿಸಬೇಕಾಗುತ್ತದೆ ಎಂದು ಆರೋಪಿ ಟ್ವೀಟ್​ ಮಾಡಿದ್ದ.

    ಬೆಂಗಳೂರು ವಿಮಾನ ನಿಲ್ದಾಣ ಸ್ಫೋಟಿಸುವುದಾಗಿ ಟ್ವೀಟ್​ ಮೂಲಕ ಬೆದರಿಕೆ ಹಾಕಿದ್ದ ಆರೋಪಿ ಯುವಕ ಅರೆಸ್ಟ್​!

    ಆರೋಪಿಗೆ ಟ್ವಿಟರ್​ನಲ್ಲಿ ಹೆಚ್ಚು ಫಾಲೋವರ್ಸ್​ ಇಲ್ಲದ ಕಾರಣ ಟ್ವೀಟ್​ ಬಹುಬೇಗನೆ ಗಮನಕ್ಕೆ ಬಂದಿರಲಿಲ್ಲ. ಕೆಲವು ದಿನಗಳ ಬಳಿಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ರೂಪಾ ಮ್ಯಾಥ್ಯೂ ಅವರು ವಿಮಾನ ನಿಲ್ದಾಣದ ಪೊಲೀಸ್​ ಠಾಣೆಯಲ್ಲಿ ಟ್ವೀಟ್​ ವಿರುದ್ಧ ದೂರು ನೀಡಿದ್ದರು. ಎಫ್​ಐಆರ್​ ಸಹ ದಾಖಲಾಗಿತ್ತು.

    ಎಫ್​ಐಆರ್​ ದಾಖಲಿಸುವುದಕ್ಕೂ ಮುನ್ನ ಎನ್​ಸಿಆರ್​ ದಾಖಲಿಸಿದ್ದರು. ಆದರೆ, ದೇವನಹಳ್ಳಿ ಸಿವಿಲ್​ ನ್ಯಾಯಾಧೀಶರು ಆದೇಶಿಸಿದ ಬಳಿಕ ಎಫ್​ಐಆರ್​ ದಾಖಲಾಗಿ, ತನಿಖೆ ಆರಂಭವಾಗಿತ್ತು. ಇದೀಗ ಆರೋಪಿ ವೈಭವ್ ಗಣೇಶನನ್ನು ಬಂಧಿಸಲಾಗಿದೆ. ಬಂಧಿತನ ವಿರುದ್ಧ ಸಾರ್ವಜನಿಕ ಕಿಡಿಗೇಡಿತನ ಮತ್ತು ಕ್ರಿಮಿನಲ್ ಬೆದರಿಕೆಯೊಡ್ಡಿದ ಹೇಳಿಕೆಯನ್ನು ನೀಡುವುದಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

    ಈ ಬಗ್ಗೆ ಈಶಾನ್ಯ ವಿಭಾಗ ಡಿಸಿಪಿ ಅನೂಪ್ ಶೆಟ್ಟಿ‌ ಮಾತನಾಡಿದ್ದು, ಕೆಲದಿನಗಳ ಹಿಂದೆ ಟ್ವಿಟರ್​ನಲ್ಲಿ ಓರ್ವ ವ್ಯಕ್ತಿ ಏರ್​ಪೊರ್ಟ್​ಗೆ ಬೆದರಿಕೆ ಹಾಕಿದ್ದ. ಆತನ ಹೆಸರು ವೈಭವ್​ ಗಣೇಶ್​. ಆತ ಇಂಜಿನಿಯರಿಂಗ್ ‌ವಿದ್ಯಾರ್ಥಿಯಾಗಿದ್ದ. ಬೆಂಗಳೂರು ಟ್ರಾಫಿಕ್ ಜಾಮ್​ನಿಂದ ಬೇಸತ್ತು ಈ ರೀತಿ ಮಾಡಿದೆ ಅಂತ ಆರೋಪಿ ಬಾಯಿಬಿಟ್ಟ. ಪರಪ್ಪನ ಅಗ್ರಹಾರದ ಕೂಡ್ಲು ಗೇಟ್​ನಿಂದ ಏರ್​ಪೊರ್ಟ್​ಗೆ ಆತ ಪ್ರಯಾಣ ಮಾಡಿದ್ದ. ಈ ವೇಳೆ ಟ್ರಾಫಿಕ್ ಜಾಮ್ ಜಾಸ್ತಿಯಾಗಿತ್ತು. ಇದರಿಂದ ಬೇಸತ್ತು ಕುಲ್ಲಕ್ಷ ಕಾರಣಕ್ಕಾಗಿ ವೈಭವ್ ಗಣೇಶ್ ಈ ರೀತಿ ‌ಮಾಡಿದ್ದಾನೆ. ಮೂಲತ ಪಂಜಾಬ್ ರಾಜ್ಯದವನಾಗಿದ್ದು, ಪಾಲಕರ ಜತೆ ಬೆಂಗಳೂರಿನ‌ ಕೊಡ್ಲು ಗೇಟ್ ಬಳಿ ಆರೋಪಿ ವಾಸವಾಗಿದ್ದ ಎಂದು ತಿಳಿಸಿದ್ದಾರೆ.

    ಬೆಂಗಳೂರು ವಿಮಾನ ನಿಲ್ದಾಣ ಸ್ಫೋಟಿಸುವುದಾಗಿ ಟ್ವೀಟ್​ ಮೂಲಕ ಬೆದರಿಕೆ: ಎಫ್​ಐಆರ್​ ದಾಖಲು

    ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿಯಾಗ್ತಿದ್ದ ಖದೀಮನಿಗೆ ಸಾರ್ವಜನಿಕರಿಂದ ಬಿತ್ತು ಧರ್ಮದೇಟು!

    ಅಮೆರಿಕದಲ್ಲಿ ಉದ್ಯೋಗ, ಕೋಟಿ ರೂ. ಸಂಬಳ: ಲಕ್ಷುರಿ ಲೈಫ್ ಬಿಟ್ಟು ಸನ್ಯಾಸತ್ವ ಬಯಸಿದ ಭಾರತದ ಯುವ ವಿಜ್ಞಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts