More

    ಈ ದೀಪಾವಳಿ ಚೀನಾದಲ್ಲಿ ಕತ್ತಲೋ ಕತ್ತಲು… ₹40 ಸಾವಿರ ಕೋಟಿ ಕಾಣದೇ ಕಂಗಾಲು!

    ನವದೆಹಲಿ: ಭಾರತ ಸೇರಿದಂತೆ ಕೆಲ ದೇಶಗಳಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಭಾರಿ ತಯಾರಿ ಶುರುವಾಗಿದೆ. ಕರೊನಾ ಇರಲಿ, ಏನೇ ಬರಲಿ… ಹಬ್ಬದ ವಿಷಯ ಬಂದಾಗ ಸಂಪ್ರದಾಯಗಳು ಹಿಂದೆ ಬೀಳುವುದೇ ಇಲ್ಲ. ಎಲ್ಲೆಡೆ ದೀಪಗಳು, ಹೊಸಹೊಸ ವಸ್ತುಗಳು, ಅಡುಗೆ ಪರಿಕರಗಳು, ಉಡುಗೊರೆ ವಸ್ತುಗಳು…ಹೀಗೆ ಹೊಸತನ್ನು ಖರೀದಿಸಲು ಜನರು ತಯಾರಿ ನಡೆಸಿದ್ದಾರೆ.

    ಆದರೆ ಇತ್ತ ಭಾರತದಲ್ಲಿ ದೀಪಾವಳಿ ಆಚರಿಸಿದರೆ, ಅತ್ತ ಚೀನಾಕ್ಕೆ ಅಕ್ಷರಶಃ ಇದು ಹಬ್ಬವೇ ಆಗಿತ್ತು. ಅಲ್ಲಿ ಹಬ್ಬವನ್ನು ಆಚರಿಸದಿದ್ದರೂ ಭಾರತದಲ್ಲಿ ಹಬ್ಬದ ಸಮಯದಲ್ಲಿ ಮಾಡುವ ಖರೀದಿಯಿಂದಾಗಿ ಚೀನಾದಲ್ಲಿ ಹೊಸ ಹೊಸ ವಸ್ತುಗಳನ್ನು ಬಿಡುಗಡೆ ಮಾಡಲು ಜೋರು ತಯಾರಿ ನಡೆದಿತ್ತು.

    ಈ ಸಮಯದಲ್ಲಿ ಪ್ರತಿವರ್ಷವಾಗಿದ್ದರೆ ಇದಾಗಲೇ ಭಾರಿ ಪ್ರಮಾಣದ ರಫ್ತು ಚೀನಾದಿಂದ ಭಾರತಕ್ಕೆ ಬರುತ್ತಿತ್ತು. ವಿಶೇಷವಾಗಿ ಮೊಬೈಲ್, ಇಲೆಕ್ಟ್ರಾನಿಕ್ಸ್, ವಿದ್ಯುತ್ ವಸ್ತುಗಳು, ಆಟಿಕೆಗಳು, ಗೃಹೋಪಯೋಗಿ ವಸ್ತುಗಳು, ಅಡುಗೆ ಪರಿಕರಗಳು, ಉಡುಗೊರೆ ವಸ್ತುಗಳು, ಕೈಗಡಿಯಾರಗಳು, ರೆಡಿಮೇಡ್ ಉಡುಪುಗಳು, ಪಾದರಕ್ಷೆಗಳು, ಸೌಂದರ್ಯವರ್ಧಕಗಳು, ಪೀಠೋಪಕರಣಗಳು, ಆಲಂಕಾರಿಕ ಸಾಮಗ್ರಿಗಳು… ಒಂದೇ ಎರಡೇ… ಏನಿಲ್ಲವೆಂದರೂ ಕನಿಷ್ಠ 40 ಸಾವಿರ ಕೋಟಿಯ ವ್ಯವಹಾರ ಭಾರತ ಒಂದರಿಂದಲೇ ದೀಪಾವಳಿ ಸಮಯವೊಂದರಲ್ಲಿಯೇ ಚೀನಾ ಕುದುರಿಸಿಕೊಳ್ಳುತ್ತಿತ್ತು.

    ಇದನ್ನೂ ಓದಿ: ಎನ್​ಕೌಂಟರ್​: ಐವರು ನಕ್ಸಲರನ್ನು ಹೊಡೆದುರುಳಿಸಿದ ಕಮಾಂಡೋ

    ಆದರೆ ಕರೊನಾ, ಗಡಿ ವಿವಾದ ಎಲ್ಲವೂ ಚೀನಾದ ನಿದ್ದೆಗೆಡಿಸಿಬಿಟ್ಟಿದೆ. ಭಾರತದ ಜತೆ ಗಡಿ ಸಂಘರ್ಷಕ್ಕೆ ಇಳಿದಿರುವ ಹಿನ್ನೆಲೆಯಲ್ಲಿ, ಇದಾಗಲೇ ಆತ್ಮನಿರ್ಭರ ಭಾರತ ಯೋಜನೆಯಡಿ ಭಾರತದಲ್ಲಿಯೇ ಬಹುತೇಕ ಸಾಮಗ್ರಿಗಳು ತಯಾರಾಗುತ್ತಿವೆ. ಚೀನಾದ ಹಲವಾರು ಆಮದಿಗೆ ನಿಷೇಧ ಹೇರಲಾಗಿದೆ. ದೀಪಾವಳಿಗೆ ಬರಬೇಕಿದ್ದ ಬಹುತೇಕ ವಸ್ತುಗಳಿಗೆ ನಿರ್ಬಂಧ ವಿಧಿಸಲಾಗಿದೆ.

    ಈ ಹಿನ್ನೆಲೆಯಲ್ಲಿ, ಬೆಳಕಿನ ಹಬ್ಬ ದೀಪಾವಳಿಗೆ ಚೀನಾದಲ್ಲಿ ಸುಮಾರು 40 ಸಾವಿರ ಕೋಟಿ ರೂಪಾಯಿಗಳ ನಷ್ಟದಿಂದಾಗಿ ಕತ್ತಲು ಕವಿದಂತಾಗಿದೆ.

    ಈ ನಡುವೆಯೇ ಭಾರತದಲ್ಲಿ ದೇಸಿ ವಸ್ತುಗಳ ಖರೀದಿ ಜೋರಾಗಿ ನಡೆದಿದೆ. ಗ್ರಾಹಕರಿಗೆ ಅಗತ್ಯ ಇರುವ ವಸ್ತುಗಳನ್ನು ಪೂರೈಕೆ ಮಾಡಲು ಹಲವಾರು ಯೋಜನೆಗಳು ಕೂಡ ಇದೀಗ ರೂಪುಗೊಂಡಿವೆ. ಇಲ್ಲಿಯ ವಸ್ತುಗಳು ಇದ್ದರೂ ಚೀನಾದ ವಸ್ತುಗಳಿಗೆ ಮೊರೆ ಹೋಗುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ ಇದೀಗ ಅವುಗಳಿಗೆ ಬ್ರೆಕ್​ ಬಿದ್ದಿದೆ.

    ಇವಳು ನನ್ನ ಮುದ್ದು ಮಗಳೇ… ಆದರೆ ಸತ್ತಿದ್ದಾಳೆ… ನನಗೆ ಬೇಡ… ಭಯಾನಕ ಕೊಲೆಯ​ ಸುತ್ತ…

    ಚುನಾವಣೆಗೆ 10 ದಿನವಿರುವಾಗ ಅಮ್ಮನಾದ ಏಕೈಕ ಮಹಿಳಾ ಅಭ್ಯರ್ಥಿ

    ಶಾಸಕನ ಮೇಲೆ ಗ್ಯಾಂಗ್​ರೇಪ್​ ಆರೋಪ: ಗಾಯಕಿಯಿಂದ ದಾಖಲಾಯ್ತು ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts