More

    ಚುನಾವಣೆಗೆ 10 ದಿನವಿರುವಾಗ ಅಮ್ಮನಾದ ಏಕೈಕ ಮಹಿಳಾ ಅಭ್ಯರ್ಥಿ

    ಪಟ್ನಾ: ಬಿಹಾರ ವಿಧಾನಸಭೆಗೆ ಇನ್ನೇನು ಚುನಾವಣೆ ಸಮೀಪಿಸಿದೆ. ಇದೇ 28ರಿಂದ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಜಗದೀಶ್‌ಪುರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯಾಗಿ ಜೆಡಿಯು ಪಕ್ಷದಿಂದ ಸುಷುಮ್ಲತಾ ಕುಶ್ವಾಹ ಕಣಕ್ಕೆ ಇಳಿದಿದ್ದಾರೆ. ಇವರು ಇಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

    ಜೆಡಿಯು ಪಕ್ಷದಿಂದ ಏಕೈಕ ಮಹಿಳಾ ಅಭ್ಯರ್ಥಿಯಾಗಿರುವ ಸುಷುಮ್ಲತಾ, ಚುನಾವಣೆಯ ಹೊಸ್ತಿಲಿನಲ್ಲಿಯೇ ಬಾಣಂತಿಯಾಗಿದ್ದು ಪ್ರಚಾರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ತಮ್ಮ ಅಭ್ಯರ್ಥಿ ಹೆಣ್ಣುಮಗುವಿಗೆ ಜನ್ಮ ನೀಡಿರುವ ಕುರಿತು ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.

    ಇದನ್ನೂ ಓದಿ: ಶಾಸಕನ ಮೇಲೆ ಗ್ಯಾಂಗ್​ರೇಪ್​ ಆರೋಪ: ಗಾಯಕಿಯಿಂದ ದಾಖಲಾಯ್ತು ದೂರು

    ಜಗದೀಶ್‌ಪುರದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಟ್ನಾದ ಆಸ್ಪತ್ರೆಯಲ್ಲಿರುವ ಸುಷುಮ್ಲತಾ ಕುಶ್ವಾಹ ಅವರನ್ನು ಅಭಿನಂದಿಸಿದರು. ಅಭ್ಯರ್ಥಿಯಾಗಿರುವ ಸುಷುಮ್ಲತಾ ಅವರಿಗೆ ತಮ್ಮದೇ ಕ್ಷೇತ್ರದ ಪ್ರಚಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

    15 ಮಂದಿ ಇಲ್ಲಿ ಕಣಕ್ಕಿಳಿದಿದ್ದು, ಹಾಲಿ ಶಾಸಕ ಆರ್‌ಜೆಡಿಯ ರಂಬಿಶುನ್ ಸಿಂಗ್ ಲೋಹಿಯಾ ಮತ್ತು ಎಲ್‌ಜೆಪಿಯ ಭಗವಾನ್ ಸಿಂಗ್ ಕುಶ್ವಾಹ ಪ್ರಮುಖ ಸ್ಪರ್ಧಿಗಳಾಗಿದ್ದಾರೆ.

    ಸುಷುಮ್ಲತಾ ಅವರಿಗೆ ಇದಾಗಲೇ ಏಳು ವರ್ಷದ ಮಗಳು ಇದ್ದಾಳೆ. ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಅವರು ಗ್ರಾಮಸಭೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಗ್ರಾಮಸಭೆಗಳಲ್ಲಿನ ಅವರ ಸಾಧನೆ ನೋಡಿ ಜೆಡಿಯು ಅವರಿಗೆ ಟಿಕೆಟ್ ನೀಡಿದೆ.

    ಪಾರ್ಟಿ ಕೊಡಿಸುವ ದಿನಗಳು ಮುಗಿದಿವೆ… ತನ್ನ ನಿಧನದ ಸುದ್ದಿ ತಾನೇ ಬರೆದು ಮೃತಪಟ್ಟ!

    ಹುಟ್ಟುತ್ತಲೇ ಮಗುವಿಗೆ ಸಿಕ್ತು 18 ವರ್ಷ ಉಚಿತ ವೈಫೈ: ಇದಕ್ಕೆ ಕಾರಣವೇ ಕುತೂಹಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts