ಎನ್​ಕೌಂಟರ್​: ಐವರು ನಕ್ಸಲರನ್ನು ಹೊಡೆದುರುಳಿಸಿದ ಕಮಾಂಡೋ

naxals
Published on

ಮುಂಬೈ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಗ್ಯಾರಪಟ್ಟಿಯಲ್ಲಿ ಐವರು ನಕ್ಸಲರನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ಇವರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ.

ಕೋಸ್ಮಿ-ಕಿಸ್ನೇಲಿ ಅರಣ್ಯಪ್ರದೇಶದಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ. ಇದು ಈ ವರ್ಷ ನಕ್ಸಲರ ವಿರುದ್ಧ ನಡೆದ ಅತಿದೊಡ್ಡ ಕಾರ್ಯಾಚರಣೆ ಎಂದು ಪೊಲೀಸರು ಹೇಳಿದ್ದಾರೆ.

ಗಡ್ಚಿರೋಲಿ ಪೊಲೀಸ್‌ ವಿಭಾಗದ ಸಿ-60 ಕಮಾಂಡೋಗಳು ಅರಣ್ಯದಲ್ಲಿ ಶೋಧ ನಡೆಸುತ್ತಿದ್ದಾಗ ನಕ್ಸಲರು ಏಕಾಏಕಿ ಗುಂಡಿನ ದಾಳಿ ನಡೆಸಿದರು. ಎರಡೂ ಕಡೆ ಗುಂಡಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಕಮಾಂಡೋಗಳು ಎನ್​ಕೌಂಟರ್​ ನಡೆಸಿದ್ದು ಐವರನ್ನು ಹೊಡೆದುರುಳಿಸಿದ್ದಾರೆ.

ಈ ಚಕಮಕಿಯಲ್ಲಿ ನಕ್ಸಲರು ತಪ್ಪಿಸಿಕೊಂಡರು. ಶೋಧ ನಡೆಸಿದಾಗ ಮೂವರು ಮಹಿಳಾ ನಕ್ಸಲರು ಸೇರಿದಂತೆ ಐವರ ಮೃತದೇಹ ಪತ್ತೆಯಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಇನ್ನೊಂದೆಡೆ ಪ್ರತ್ಯೇಕ ಘಟನೆಯೊಂದರಲ್ಲಿ ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಪೊಲೀಸರು ರವಿವಾರ ಇಬ್ಬರು ನಕ್ಸಲರನ್ನು ಹೊಡೆದುರುಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net