More

    ಬಾಂಬ್ ಕಟ್ಟಿಕೊಂಡು ಬ್ಯಾಂಕ್​ಗೆ ನುಗ್ಗಿದ ಖದೀಮ: ಬಂಧನದ ಬಳಿಕ ಬಯಲಾಯ್ತು ಅಸಲಿಯತ್ತು!

    ಹೈದರಾಬಾದ್​: ಮುಖವಾಡ ಧರಿಸಿದ ನಾಲ್ಕೈದು ಮಂದಿ ಶಸ್ತ್ರಾಸ್ತ್ರಗಳನ್ನು ಹಿಡಿದು ಬ್ಯಾಂಕ್​ಗೆ ನುಗ್ಗಿ, ಕ್ಯಾಶಿಯರ್ ಹಣೆಗೆ ಗನ್​ ಇಟ್ಟು, ಬ್ಯಾಗ್​ಗೆ ಹಣ ತುಂಬುವಂತೆ ಬೆದರಿಕೆ ಹಾಕುವ ದೃಶ್ಯವನ್ನು ನಾವು, ನೀವೆಲ್ಲ ಸಿನಿಮಾಗಳಲ್ಲಿ ನೋಡಿರುತ್ತೇವೆ. ಈ ರೀತಿಯ ಘಟನೆ ನಿಜ ಜೀವನದಲ್ಲಿ ನಡೆಯುವುದು ತುಂಬಾ ವಿರಳ. ಏಕೆಂದರೆ ಇಂದಿನ ಬಲವಾದ ಟೆಕ್ನಾಲಜಿ ಅಥವಾ ಕಣ್ಗಾವಲು ವ್ಯವಸ್ಥೆ ಇಂತಹ ಕೃತ್ಯಗಳಿಗೆ ದುಸ್ವಪ್ನವಾಗಿವೆ.

    ಆದಾಗ್ಯೂ ಕೆಲವು ಖದೀಮರು ಎಟಿಎಂ ಹಾಗೂ ಹಣ ತುಂಬುವ ವ್ಯಾನ್​ಗಳ ಮೇಲೆ ದಾಳಿ ಮಾಡಿರುವುದನ್ನು ನೀವು ಕೇಳಿರುತ್ತೀರಿ. ಅಲ್ಲದೆ, ಬ್ಯಾಂಕ್​ನಿಂದ ಹಣ ಡ್ರಾ ಮಾಡುವ ಜನರಿಂದ ಹಣ ಸುಲಿಗೆ ಮಾಡುವುದನ್ನು ನೋಡಿರುತ್ತೀರಿ. ಆದರೆ, ಇಲ್ಲೊಬ್ಬ ಸಿನಿಮಾ ಶೈಲಿಯಲ್ಲಿ ಸುಲಿಗೆ ಮಾಡಲು ಬ್ಯಾಂಕ್ ಒಳಗೆ ನುಸುಳಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಇದನ್ನೂ ಓದಿ: ಮಾನವರ ನಡುವೆ ಮೊದಲ ಚುಂಬನ ನಡೆದಿದ್ದು ಯಾವಾಗ? ಬಹಿರಂಗವಾಯ್ತು ಅಚ್ಚರಿಯ ಉತ್ತರ!

    ಎರಡು ಲಕ್ಷ ರೂ.ಗೆ ಬೇಡಿಕೆ

    ಬಂಧಿತ ಖದೀಮನ ಹೆಸರನ್ನು ಶಿವಾಜಿ (32) ಎಂದು ಗುರುತಿಸಲಾಗಿದೆ. ಈತ ಹೈದರಾಬಾದ್​ ಮೂಲದ ನಿವಾಸಿ. ಈತ ತನ್ನ ಹೊಟ್ಟೆಗೆ ಬಾಂಬ್​ ಕಟ್ಟಿಕೊಂಡು ಸ್ಥಳೀಯ ಆದರ್ಶ್​ ಬ್ಯಾಂಕ್​ಗೆ ನುಗ್ಗಿದ್ದ. ಬಳಿಕ ಎರಡು ಲಕ್ಷ ರೂ. ಹಣ ನೀಡುವಂತೆ ಬ್ಯಾಂಕ್​ ಸಿಬ್ಬಂದಿಗೆ ಬೆದರಿಕೆ ಹಾಕಿದ್ದ. ಒಂದು ವೇಳೆ ಹಣ ಕೊಡದೇ ಇದ್ದರೆ ಬಾಂಬ್​ ಸ್ಫೋಟಿಸುವುದಾಗಿ ಹೆದರಿಕೆ ಹಾಕಿದ. ಅದನ್ನು ನೋಡಿ ಬ್ಯಾಂಕ್​ನಲ್ಲಿದ್ದ ಗ್ರಾಹಕರು ಒಂದು ಕ್ಷಣ ಭಯಭೀತಗೊಂಡರು. ಬಳಿಕ ಬ್ಯಾಂಕ್​ನಲ್ಲಿದ್ದ ಭದ್ರತಾ ಸಿಬ್ಬಂದಿ ಹೇಗೋ ಶಿವಾಜಿಯನ್ನು ಸೆರೆಹಿಡಿದು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು.

    ನಕಲಿ ಬಾಂಬ್​

    ಮಾಹಿತಿ ತಿಳಿದು ಬ್ಯಾಂಕ್​ಗೆ ಆಗಮಿಸಿದ ಜೀಟಿಮೆಟ್ಲ ಠಾಣಾ ಪೊಲೀಸರು ಆತ್ಮಾಹುತಿ ಬಾಂಬರ್​ನನ್ನು ಬಂಧಿಸಿದರು. ಆರೋಪಿಯ ಬಂಧನವಾದ ಬಳಿಕ ಆತನ ಅಸಲಿ ಮುಖವಾಡ ಕಳಚಿಬಿದ್ದಿದೆ. ಶಿವಾಜಿಯ ಹೊಟ್ಟೆಯಲ್ಲಿ ಸುತ್ತಿಕೊಂಡಿದ್ದ ಬಾಂಬ್​ ನಕಲಿ ಎಂಬುದು ಬಯಲಾಗಿದೆ. ಸದ್ಯ ಪೊಲೀಸರು ಶಿವಾಜಿ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಆರೋಪಿಯ ವಿಚಾರಣೆಯನ್ನು ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಪ್ರದೀಪ್​ ಈಶ್ವರ್​ಗೆ ಮಾತೃವಿಯೋಗ: ಸಾಕುತಾಯಿ ನಿಧನ

    ಮಿದುಳು ಕ್ಯಾನ್ಸರ್​ಗೆ ಮಹತ್ವದ ಚಿಕಿತ್ಸೆ: ಅಮೆರಿಕದಲ್ಲಿ ಭಾರತೀಯ ಮೂಲದ ತಜ್ಞೆ ಸರಿತಾ ಕೃಷ್ಣ ನೇತೃತ್ವದಲ್ಲಿ ಸಂಶೋಧನೆ

    ಸಾರ್ವಜನಿಕವಾಗಿ 23ರ ಯುವಕನ ಶಿರಚ್ಛೇದನ ಮಾಡಿದ 50ರ ವ್ಯಕ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts