More

    ಮಿದುಳು ಕ್ಯಾನ್ಸರ್​ಗೆ ಮಹತ್ವದ ಚಿಕಿತ್ಸೆ: ಅಮೆರಿಕದಲ್ಲಿ ಭಾರತೀಯ ಮೂಲದ ತಜ್ಞೆ ಸರಿತಾ ಕೃಷ್ಣ ನೇತೃತ್ವದಲ್ಲಿ ಸಂಶೋಧನೆ

    ತಿರುವನಂತಪುರ: ಮಿದುಳಿನ ಕ್ಯಾನ್ಸರ್ ಗಡ್ಡೆಗಳಿಗೆ ಚಿಕಿತ್ಸೆ ನೀಡುವಲ್ಲಿ ಮೂಲಭೂತ ಬದಲಾವಣೆ ತರಬಹುದಾದ ಮಹತ್ವದ ಸಂಶೋಧನೆಯನ್ನು ಅಮೆರಿಕದಲ್ಲಿ ವಿಜ್ಞಾನಿಗಳು ನಡೆಸಿದ್ದಾರೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಯಾನ್ ಫ್ರಾನ್ಸಿಸ್ಕೊ ಮೆಡಿಕಲ್ ಸೆಂಟರ್​ನ ವಿಜ್ಞಾನಿಗಳ ಈ ತಂಡಕ್ಕೆ ಭಾರತೀಯ ಮೂಲದ ಸರಿತಾ ಕೃಷ್ಣ ಮುಖ್ಯಸ್ಥರಾಗಿದ್ದಾರೆ.

    ಕ್ಯಾನ್ಸರ್​ಕಾರಕ ಕೋಶಗಳು ಮಿದುಳಿನ ಆರೋಗ್ಯಪೂರ್ಣ ಕೋಶಗಳನ್ನು ಸಂರ್ಪಸಿ, ಅವು ಅಧಿಕ ಕ್ರಿಯಾಶೀಲಗೊಳ್ಳುವಂತೆ (ಹೈಪರ್​ಆಕ್ಟಿವಿಟಿ) ಮಾಡುವ ಮೂಲಕ ಅರಿವಿನ ಶಕ್ತಿಯನ್ನು ತ್ವರಿತವಾಗಿ ನಷ್ಟ ಮಾಡುತ್ತವೆ. ಇದರಿಂದ ರೋಗಿಯ ಮರಣಿಸುವ ಸಂಭವವೂ ಇದೆ ಎಂಬುದನ್ನು ಈ ತಂಡ ಸಂಶೋಧಿಸಿದೆ. ಮಿದುಳು ಕ್ಯಾನ್ಸರ್ ಗುಣಪಡಿಸಲು ಸಾಮಾನ್ಯವಾಗಿ ಬಳಸಲಾಗುವ ಆಂಟಿ-ಸೀಜರ್ ಔಷಧ ಮಿದುಳಿನ ಗಡ್ಡೆಯ ಕೋಶಗಳ ಹೈಪರ್​ಆಕ್ಟಿವಿಟಿ ಕಡಿಮೆ ಮಾಡುವಲ್ಲಿ ಹಾಗೂ ಬೆಳವಣಿಗೆಯನ್ನು ತಡೆಯುವಲ್ಲಿ ಪರಿಣಾಮಕಾರಿಯಾಗುತ್ತದೆ ಎಂಬುದನ್ನು ಸರಿತಾ ಕೃಷ್ಣ ನೇತೃತ್ವದ ತಂಡ ಕಂಡುಕೊಂಡಿದೆ. ಮಿದುಳಿನ ಆರೋಗ್ಯಕರ ಕೋಶಗಳು ಮತ್ತು ಕ್ಯಾನ್ಸರ್​ಯುಕ್ತ ಕೋಶಗಳ ನಡುವಿನ ಸಂಪರ್ಕವನ್ನು ಕಡಿತಗೊಳಿಸುವ ಮೂಲಕ ಗಡ್ಡೆಯ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ, ಇಲ್ಲವೇ ಸ್ಥಗಿತಗೊಳಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೊ ಮೆಡಿಕಲ್ ಸೆಂಟರ್​ನ ಈ ಸಂಶೋಧನಾ ವರದಿ ‘ನೇಚರ್’ ಪತ್ರಿಕೆಯ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿದೆ.

    ಇದನ್ನೂ ಓದಿ: ಪದಗ್ರಹಣ ಸಮಾರಂಭಕ್ಕೆ ರೈಲಿನಲ್ಲಿ ಆಗಮಿಸಿದ ಶಾಸಕ: ಸರಳತೆ ಮೆರೆದ ದರ್ಶನ್ ಪುಟ್ಟಣ್ಣಯ್ಯ

    ಯಾರಿಗೆ ಹೆಚ್ಚು ಪ್ರಯೋಜನ?

    ಈ ಸಂಶೋಧನೆಯು ಗ್ಲಿಯೋಬ್ಲಾಸ್ಟೋಮಾ ಹೊಂದಿರುವ ರೋಗಿಗಳಿಗೆ ಪ್ರಯೋಜ ನಕಾರಿಯಾಗಲಿದೆ. ಇದು ಮಿದುಳು ಕಾನ್ಸರ್ ಚಿಕಿತ್ಸೆಯಲ್ಲಿ ಪಥದರ್ಶಕ ಆಗಲಿದ್ದು, ಮಾರಣಾಂತಿಕ ಕಾಯಿಲೆ ಯಿಂದ ಬಳಲುತ್ತಿರುವವರಿಗೆ ಆಶಾಕಿರಣವಾಗಲಿದೆ ಎಂದು ಸಂಶೋಧಕರ ತಂಡ ಅಭಿಪ್ರಾಯ ಪಟ್ಟಿದೆ. ಕೇರಳದ ತಿರುವನಂತಪುರ ಮೂಲದವರಾದ ಸರಿತಾ ಕೃಷ್ಣಾ ಅವರೊಂದಿಗೆ ವಿಜ್ಞಾನಿ ಶಾನ್​ಹೆರ್ವೆ- ಜಂಪರ್ ಮತ್ತು ಇನ್ನಿತರರು ಕೈಜೋಡಿಸಿದ್ದರು.

    ಭಾಷಾ ಟಾಸ್ಕ್

    ಎಚ್ಚರವಿರುವಾಗಿನ ಮಿದುಳಿನ ಶಸ್ತ್ರಚಿಕಿತ್ಸೆ ವೇಳೆ ಭಾಷಾ ಟಾಸ್ಕ್​ಗಳನ್ನು ನೀಡಿದಾಗ ಗಡ್ಡೆಯುಕ್ತ ಮಿದುಳಿನ ಭಾಗಗಳಲ್ಲಿ ಕ್ರಿಯಾಶೀಲತೆಯನ್ನು ಗಮನಿಸಲಾಗಿದೆ. ಈ ಭಾಗವು ಭಾಷಾ ಮಿದುಳು ವಲಯಗಳಿಂದ ಬಹಳ ದೂರವಿರುತ್ತವೆ ಎಂದು ಸರಿತಾ ಕೃಷ್ಣ ವಿವರಿಸಿದ್ದಾರೆ.

    ಹೊಸ ಸರ್ಕಾರ, ಜನರ ನಿರೀಕ್ಷೆಗಳು ಅಪಾರ; ಗ್ಯಾರಂಟಿಗಳ ಕ್ಷಿಪ್ರ ಅನುಷ್ಠಾನಕ್ಕೆ ಜನರ ಕಾತರ

    ಸಿದ್ದು, ಡಿಕೆಶಿ ಜತೆ 8 ಸಚಿವರಿಂದ ಪ್ರಮಾಣ ವಚನ: ಮೊದಲ ಸಚಿವ ಸಂಪುಟದಲ್ಲಿ 6 ಸಮುದಾಯಕ್ಕೆ ಅವಕಾಶ

    ನಿಸರ್ಗದೊಂದಿಗೆ ಮಧುರ ಸಾಂಗತ್ಯ: ಇಂದು ವಿಶ್ವ ಜೇನುನೊಣ ದಿನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts