More

    ನಿಸರ್ಗದೊಂದಿಗೆ ಮಧುರ ಸಾಂಗತ್ಯ: ಇಂದು ವಿಶ್ವ ಜೇನುನೊಣ ದಿನ

    | ಮಂಜುನಾಥ ಎಸ್. ನಾಯಕ

    ಜೇನುಗಳ ಸಂತತಿ ಎಂದು ನಾಶವಾಗುವುದೋ ಅಂದಿಗೆ ಮನುಕುಲವೂ ನಾಶವಾಗುವುದು. ಹೀಗೆಂದು ಜಗತ್​ಪ್ರಸಿದ್ಧ ವಿಜ್ಞಾನಿ ಅಲ್ಬರ್ಟ್ ಐನ್​ಸ್ಟೀನ್ ಹೇಳಿರುವ ಮಾತು ಶತ ಸತ್ಯ. ತಾಯಿಯ ಹಾಲಿನಷ್ಟೇ ಶುದ್ಧವಾದ ಆಹಾರವೆಂದರೆ ಜೇನು. ಎಷ್ಟು ವರ್ಷಗಳವರೆಗೂ ಸಂಗ್ರಹಿಸಿಟ್ಟರೂ ಹಾಳಾಗದಿರುವ ಏಕೈಕ ಆಹಾರವೆಂದರೆ ಅದು ಜೇನು ಮಾತ್ರ.

    ಪ್ರಪಂಚದಲ್ಲಿ ಅಂದಾಜು 20,000 ಜಾತಿಯ ಜೇನು ನೊಣಗಳಿವೆ. ಹಣ್ಣು, ತರಕಾರಿ, ಅಡಕೆ, ತೆಂಗು, ಹೂಗಳ ಪರಾಗಸ್ವರ್ಶ ಕ್ರಿಯೆಯಲ್ಲಿ ಜೇನು ನೊಣಗಳು ಪ್ರಮುಖ ಪಾತ್ರ ವಹಿಸುತ್ತವೆ. ತಮ್ಮ ಆಹಾರಕ್ಕಾಗಿ ಹೂವುಗಳ ಮಕರಂದವನ್ನು ಹೀರುವ ಜೇನು ಹುಳುವಿನ ಪ್ರಕ್ರಿಯೆಯು ಪರಾಗಸ್ಪರ್ಶಕ್ಕೆ ಕಾರಣವಾಗುತ್ತದೆ. ಜೇನುಗಳ ಪರಾಗ ಸ್ಪರ್ಶದಿಂದಾಗಿ ಬೆಳೆಯ ಇಳುವರಿಯು ಮಾಮೂಲಿಗಿಂತ ಶೇಕಡಾ 20ರಷ್ಟು ಹೆಚ್ಚಾಗುತ್ತದೆ. ಜೇನಿನ ಉತ್ಪತ್ತಿಗಾಗಿ 20 ಲಕ್ಷ ಹೂವುಗಳನ್ನು ರ್ಸ³ಸಿಬರುವ ಏಕಮೇವ ಕೀಟ ಜೇನುನೊಣ.

    ಜೇನಿನಲ್ಲಿ ಹಲವು ಬಗೆಗಳಿವೆ. ಹೆಜ್ಜೇನು, ಕೋಲು ಜೇನು, ತೊಡವೆ ಜೇನು, ಯುರೋಪಿಯನ್ ಜೇನು… ಹೀಗೆ ಆಯಾಪ್ರದೇಶಕ್ಕೆ ಸೀಮಿತವಾಗುವ ಸಂತತಿ ಇರುತ್ತದೆ. ಜೇನುತುಪ್ಪವನ್ನು ಆದಿಕಾಲದಿಂದಲೂ ದಿವ್ಯ ನೈಸರ್ಗಿಕ ಔಷಧಿಯಾಗಿ ಬಳಸಲಾಗುತ್ತದೆ. ಸುಟ್ಟ ಗಾಯ, ಹುಣ್ಣು ವಾಸಿಮಾಡಲು ಜೇನನ್ನು ಲೇಪಿಸಬಹುದು. ಕೆಂಪುರಕ್ತಕಣಗಳ ವೃಧಿ್ಧೆ ಮತ್ತು ರಕ್ತದಲ್ಲಿನ ಹಿಮೊಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿ ರಕ್ತಹೀನತೆಯನ್ನು ನಿವಾರಿಸುತ್ತದೆ. ಬಿಸಿನೀರಿನ ಜತೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿದರೆ ದೇಹದ ತೂಕ ಕಡಿಮೆಯಾಗುತ್ತದೆ. ಉಸಿರಾಟದ ಸೋಂಕು, ಕಫ ಮತ್ತು ಅಸ್ತಮಾದಂತಹ ಸಮಸ್ಯೆಗಳಿಗೆ ಜೇನು ತುಪ್ಪ ದಿವ್ಯ ಔಷಧಿ.

    ವಿಶ್ವ ಜೇನುನೊಣ ದಿನ ಇಂದು

    2018ರ ಮೇ ತಿಂಗಳಲ್ಲಿ ಮೊದಲ ಬಾರಿಗೆ ವಿಶ್ವಸಂಸ್ಥೆಯು ಜೇನು ನೊಣದ ದಿನಾಚರಣೆಗೆ ಚಾಲನೆ ನೀಡಿತು. ಗಣನೀಯವಾಗಿ ಕುಸಿಯುತ್ತಿರುವ ಜೇನು ನೊಣುಗಳ ಸಂತತಿಯ ಉಳಿವಿನ ಅಗತ್ಯ ಮನಗಾಣಿಸುವ ಪ್ರಯತ್ನವಾಗಿ ಈ ಆಚರಣೆಯು ಮಹತ್ವದ್ದಾಗಿದೆ. ಸ್ಲೋವೆನಿಯಾದ ಮಹಾನ್ ಜೇನು ಕೃಷಿಕ ಆಂಟೆನ್ ಜಾನಿಯಾ ಜನ್ಮದಿನ 20, ಮೇ 1734. ಇವರ ಸ್ಮರಣಾರ್ಥ ಇವರ ಜನ್ಮ ದಿನವನ್ನು ವಿಶ್ವ ಜೇನುನೊಣದ ದಿನವಾಗಿ ಆಚರಿಸಲಾಗುತ್ತದೆ.

    ಪ್ರಪಂಚದಾದ್ಯಂತ 90ಕ್ಕೂ ಅಧಿಕ ಪ್ರಮುಖ ಆಹಾರ ಬೆಳೆಗಳು ಜೇನು ಪರಾಗಸ್ಪರ್ಶ ಅವಲಂಬಿತವಾಗಿವೆ. ಪ್ರಕೃತಿಯ ಆಹಾರ ಸರಪಳಿಯಲ್ಲಿ ಮೇಲುಸ್ಥರದ ಜೀವಿಗಳಿಗೆ ಆಹಾರದ ಮೂಲವಾಗಿರುವ ಜೇನಿನ ಸಂತತಿಯನ್ನು ಸಂರಕ್ಷಿಸುವುದು ಅನಿವಾರ್ಯ. ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಮತ್ತು ವನ್ಯಜೀವಿ ಮಂಡಳಿಯು ಜೇನುಹುಳುವನ್ನು ರಾಜ್ಯ ಕೀಟವಾಗಿ 2019ರಲ್ಲಿ ಘೊಷಿಸಿದೆ. ರಾಜ್ಯ ಕೀಟವನ್ನು ಹೊಂದಿರುವ ದೇಶದ ಮೊದಲ ರಾಜ್ಯ ಕರ್ನಾಟಕ ಎಂಬುದು ಹೆಮ್ಮೆಯ ಸಂಗತಿಯಷ್ಟೆ ಅಲ್ಲದೆ, ಮಾನವನ ಉಳಿವು ಮತ್ತು ಪರಿಸರದ ಸಮತೋಲನ ಕಾಪಾಡಲು ಜೇನುಹುಳುವಿನ ಮಹತ್ವವವನ್ನು ಇದು ಸಾರುತ್ತದೆ.

    (ಲೇಖಕರು ಜೀವವೈವಿಧ್ಯ ಸಂಶೋಧಕರು)

    ಬಂಕ್​ನಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುವಾಗ ಧಗ್ಗನೆ ಹೊತ್ತಿಕೊಂಡ ಬೆಂಕಿ: ಪುತ್ರಿ ಸಾವು, ತಾಯಿ ಪರಿಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts