More

    ಸೀರೆಯುಟ್ಟು ಜಪಾನ್ ಬೀದಿ ಸುತ್ತಿದ ಯುವತಿಯನ್ನು ಕಂಡು ಜಪಾನಿಗರು ಕೊಟ್ಟ ಪ್ರತಿಕ್ರಿಯೆ​ ವೈರಲ್!

    ನವದೆಹಲಿ: ಸೀರೆ ಭಾರತದ ಸಾಂಪ್ರದಾಯಿಕ ಉಡುಗೆ ಎಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಸೀರೆ ಅನೇಕ ಮಹಿಳೆಯರು ಇಷ್ಟಪಡುವ ಉಡುಪಾಗಿದೆ. ಒಂದು ಕಾಲದಲ್ಲಿ ಭಾರತೀಯರು ಮಾತ್ರ ಇದನ್ನು ಇಷ್ಟಪಡುತ್ತಿದ್ದರು. ಆದರೆ, ಈಗ ಪ್ರಪಂಚದಾದ್ಯಂತ ಮಹಿಳೆಯರು ಸೀರೆಯನ್ನು ಧರಿಸಲು ಇಷ್ಟಪಡುತ್ತಾರೆ. ಇತ್ತೀಚಿಗೆ ಸೀರೆಯು ವಿಶ್ವ ಫ್ಯಾಶನ್ ಮೇಲೆ ದೊಡ್ಡ ಪ್ರಭಾವವನ್ನೇ ಬೀರುತ್ತಿದೆ.

    ಬಿಯಾನ್ಸ್, ಗಿಗಿ ಹಡಿದ್, ಝೆಂಡಯಾ ಅವರಂತಹ ಪ್ರಸಿದ್ಧ ಸೆಲೆಬ್ರಿಟಿಗಳು ಪ್ರಮುಖ ಸಮಾರಂಭಗಳಲ್ಲಿ ಸೀರೆಯನ್ನು ಧರಿಸುವ ಮೂಲಕ ಸೀರೆಯ ಮೇಲಿನ ತಮ್ಮ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಅಬು ಜಾನಿ ಸಂದೀಪ್ ಖೋಸ್ಲಾ, ರಾಹುಲ್ ಮಿಶ್ರಾ, ಗೌರವ್ ಗುಪ್ತಾ, ಸಬ್ಯಸಾಚಿ ಮುಖರ್ಜಿ ಅವರಂತಹ ಭಾರತೀಯ ವಿನ್ಯಾಸಕರು ಈ ವೃತ್ತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ತಮ್ಮ ವಿನ್ಯಾಸಗಳನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶಿಸುತ್ತಿದ್ದಾರೆ.

    ಉದಾಹರಣೆಗೆ ದೀಪಿಕಾ ಪಡುಕೋಣೆ ಕಾನ್​ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸೀರೆ ಧರಿಸುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದರು. ಆಲಿಯಾ ಭಟ್ 2024ರಲ್ಲಿ ಮೆಟ್ ಗಾಲಾದಲ್ಲಿ ಸೀರೆಯನ್ನು ಧರಿಸುವ ಮೂಲಕ ವಿಶ್ವ ವೇದಿಕೆಯಲ್ಲಿ ಸೀರೆಯ ಸೌಂದರ್ಯವನ್ನು ಎತ್ತಿ ತೋರಿಸಿದರು. ಸೆಲೆಬ್ರಿಟಿಗಳು ಮಾತ್ರವಲ್ಲದೆ ಕಂಟೆಂಟ್ ಕ್ರಿಯೆಟರ್‌ಗಳು ಸಹ ಇತರ ದೇಶಗಳಲ್ಲಿ ಸೀರೆಯ ಸೌಂದರ್ಯವನ್ನು ತೋರಿಸುತ್ತಿದ್ದಾರೆ ಮತ್ತು ಅದರ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತಿದ್ದಾರೆ.

    ಇದೀಗ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​ ಆಗಿದ್ದು, 70 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ಯುವತಿಯೊಬ್ಬಳು ತಿಳಿ ನೀಲಿ ಬಣ್ಣದ ಸೀರೆ ಉಟ್ಟಿದ್ದಾಳೆ. ಗೋಲ್ಡನ್ ಬಾರ್ಡರ್ ವಿನ್ಯಾಸದೊಂದಿಗೆ ಸೀರೆ ಚೆನ್ನಾಗಿ ಕಾಣುತ್ತಿದ್ದು, ಯುವತಿಯ ಸೌಂದರ್ಯವನ್ನು ಹೆಚ್ಚಿಸಿದೆ. ಜಪಾನ್​ ಬೀದಿಯಲ್ಲಿ ತಿರುಗಾಡಿದ್ದು, ಆಕೆಯನ್ನು ಸೀರೆಯಲ್ಲಿ ನೋಡಿ ಜಪಾನಿಗರು ಹುಬ್ಬೇರಿಸಿದ್ದಾರೆ. ಅಲ್ಲದೆ, ಕೆಲವರು ಯುವತಿಯ ಜತೆ ಫೋಟೋ ಸಹ ಕ್ಲಿಕ್ಕಿಸಿಕೊಂಡಿದ್ದಾರೆ.

    ಯುವತಿಯು ಕೂಡ ಸೀರೆಯಲ್ಲಿ ಜಪಾನ್​ ಬೀದಿಗಳನ್ನು ಸುತ್ತು ಆನಂದಿಸಿದ್ದಾರೆ. ಆದರೆ, ರವಿಕೆ ವಿಚಾರಕ್ಕೆ ಟೀಕೆಗೆ ಗುರಿಯಾಗಿದ್ದಾರೆ. ಏಕೆಂದರೆ, ಯುವತಿ ಧರಿಸಿದ್ದು, ಸಾಮಾನ್ಯ ರವಿಕೆಯಲ್ಲ ಅದು ಟ್ಯೂಬ್ ಬ್ಲೌಸ್. ಹೀಗಾಗಿ ಕೆಲವರು ಈ ವಿನ್ಯಾಸವನ್ನು ಇಷ್ಟಪಡದೆ ಟೀಕಿಸಿದ್ದಾರೆ. ಆದರೆ, ಈ ಟೀಕೆಗಳಿಗೆ ವ್ಯತಿರಿಕ್ತವಾಗಿ, ಕೆಲ ನೆಟ್ಟಿಗರು ಯುವತಿಯ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಬ್ರಿಟಿಷರು ಬರುವವರೆಗೂ ಸೀರೆಯನ್ನು ರವಿಕೆ ಅಥವಾ ಪೆಟಿಕೋಟ್ ಇಲ್ಲದೆಯೇ ಧರಿಸುತ್ತಿದ್ದರು ಎಂದು ಕೆಲವರು ನೆನಪಿಸಿದ್ದಾರೆ. (ಏಜೆನ್ಸೀಸ್​)

    RCB vs CSK: ಮಳೆ ಬಗ್ಗೆ ವಿಚಾರಿಸಲು ಹವಾಮಾನ ಸಂಸ್ಥೆಗಳಿಗೆ ಫೋನ್​ ಕರೆಗಳ ಸುರಿಮಳೆ! ಫ್ಯಾನ್ಸ್​ಗೆ ಸಿಕ್ತು ಸಿಹಿ ಸುದ್ದಿ

    ಚೆನ್ನೈ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್​ಸಿಬಿ ಡ್ರೆಸ್ಸಿಂಗ್​ ರೂಮ್​ನಲ್ಲಿ ಕಾಣಿಸಿಕೊಂಡ ಎಂಎಸ್​ಡಿ; ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts