More

  ಬೆಂಗಳೂರು ರೇವ್‌ ಪಾರ್ಟಿ: ತೆಲುಗು ನಟಿ ಹೇಮಾಗೆ ಷರತ್ತುಬದ್ಧ ಜಾಮೀನು!

  ಬೆಂಗಳೂರು: ಆನೇಕಲ್​ ತಾಲ್ಲೂಕಿನ ಜಿ.ಆರ್​.ಫಾರ್ಮ್​ ಹೌಸ್​ನಲ್ಲಿ ರೇವ್ ಪಾರ್ಟಿ ಪ್ರಕರಣದಲ್ಲಿ ಮಾದಕ ವಸ್ತು ಸೇವನೆ ಹಾಗೂ ತನಿಖೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ವಿಡಿಯೋ ಮಾಡಿ ಹರಿಬಿಟ್ಟ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ತೆಲುಗು ನಟಿ ಹೇಮಾ ಅವರಿಗೆ ಇಂದು (ಜೂನ್​ 12) ಜಾಮೀನು ಮಂಜೂರು ಮಾಡಲಾಗಿದೆ.

  ಇದನ್ನೂ ಓದಿ: 3ನೇ ಅವಧಿಗೆ ಪ್ರಧಾನಿಯಾದ ಬಳಿಕ ಮೋದಿ ಮೊದಲ ವಿದೇಶ ಪ್ರವಾಸ!

  ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆಗಾಗಿ ಈ ಪ್ರಕರಣದಲ್ಲಿ ಅವರನ್ನು ಜೂನ್​ 14ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಜಾಮೀನಿಗಾಗಿ ಅವರು ಅರ್ಜಿ ಸಲ್ಲಿಸಿದ್ದರು. ಇಂದು (ಜೂನ್​ 12) ಹೇಮಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎನ್‌ಡಿಪಿಎಸ್ ವಿಶೇಷ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

  ಬೆಂಗಳೂರು ಗ್ರಾಮಾಂತರ ಎನ್​ಡಿಪಿಎಸ್​ ವಿಶೇಷ ಕೋರ್ಟ್‌ನಿಂದ ನಟಿ ಹೇಮಾಗೆ ಜಾಮೀನು ನೀಡಲಾಗಿದೆ. ಹೇಮಾಳಿಂದ ಯಾವುದೇ ಮಾದಕವಸ್ತು ವಶಕ್ಕೆ ಪಡೆಯಲಾಗಿಲ್ಲ. ಹಲವು ದಿನಗಳ ನಂತರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಹೇಮಾ ಪರ ವಕೀಲ ಮಹೇಶ್ ಕಿರಣ್ ಶೆಟ್ಟಿ ವಾದ ಮಾಡಿದ್ದಾರೆ. ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಕೋರ್ಟ್‌ ಆದೇಶಿಸಿದೆ.

  ಜಿ.ಆರ್‌.ಫಾಮ್‌ರ್‍ನಲ್ಲಿ ಮಾ.19ರಂದು ರಾತ್ರಿ ವಾಸು ಬರ್ತ್‌ ಡೇ ಪಾರ್ಟಿ ನೆಪದಲ್ಲಿ’ಸನ್‌ ಸೆಟ್‌ ಟು ಸನ್‌ ರೈಸ್‌’ ಹೆಸರಿನ ರೇವ್‌ ಪಾರ್ಟಿ ನಡೆದಿತ್ತು. ದಾಳಿ ವೇಳೆ ಆಧಿರೋಧಿಪಿಧಿಗಧಿಳಿಂದ ಒಂದೂಧಿವರೆ ಕೋಟಿ ರೂ. ಮೌಲ್ಯದ 15.56 ಗ್ರಾಂ ಎಂಡಿಎಂಎ, 6.2 ಗ್ರಾಂ ಕೊಕೇನ್‌, 6 ಗ್ರಾಂ ಹೈಡ್ರೊ ಗಾಂಜಾ, ಐದು ಮೊಬೈಲ್‌, 2 ಕಾರುಗಳನ್ನು ಜಪ್ತಿ ಮಾಡಲಾಗಿತ್ತು. ಅಧಿಲ್ಲದೆ, ವಾಸು, ಕೋರಮಂಗಲದ ವೈ.ಎಂ. ಅರುಣ್‌ ಕುಮಾರ್‌, ವಿಜಯವಾಡ ಮೂಲದ ನಾಗಬಾಬು, ರಣಧೀರ್‌ ಬಾಬು, ಮೊಹಮದ್‌ ಅಬೂಬಕರ್‌ ಸಿದ್ಧಿಕಿಯನ್ನು ಬಂಧಿಸಲಾಗಿತ್ತು.

  See also  ಕಾರ್ಮಿಕರ ಕಣ್ಣೀರಿನ ಕಥೆ; ಬೆಂಗಳೂರಿಂದ ಒಡಿಶಾಗೆ ನಡೆದುಕೊಂಡೇ ಹೋದರು!

  ನಟಿ ಹೇಮಾ ಸುಮಾರು 250 ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲಿ ಖಾಯಂ ಪೋಷಕ ನಟಿಯಾಗಿ ಹೇಮಾ ಕೆಲಸ ಮಾಡಿದ್ದಾರೆ. ಕನ್ನಡದಲ್ಲೂ ನಟಿಸಿದ್ದ ಹೇಮಾ 2014ರಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ ಪವರ್ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ವಿನಯ ವಿಧೇಯ ರಾಮ, ಸನ್ ಆಫ್ ಸತ್ಯಮೂರ್ತಿ, ಡಿಕ್ಟೆಟರ್, ಅತ್ತಾರಿಂಟಿಕಿ ದಾರೇದಿ, ಮಿರ್ಚಿ, ರಭಸ, ಬೃಂದಾವನಂ, ರೆಬೆಲ್, ಜುಲಾಯ್, ಮಗಧೀರ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಜಮ್ಮು ಕಾಶ್ಮೀರದ ಕಥುವಾದಲ್ಲಿ ಎನ್‌ಕೌಂಟರ್: ಇಬ್ಬರು ಉಗ್ರರ ಹತೈಗೈದ ಸೇನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts