More

    ಬಿಎಸ್​ವೈ ಅಧಿಕಾರ ಮುಗೀತು- ಉ.ಕದವರೇ ಮುಂದಿನ ಸಿಎಂ: ಯತ್ನಾಳ್​ ಸಿಡಿಸಿದರು ಬಾಂಬ್​

    ವಿಜಯಪುರ: ಉಪಚುನಾವಣೆಯ ನಂತರ ಯಾವುದೇ ಸಂದರ್ಭದಲ್ಲಾದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಾಯಕತ್ವ ಬದಲಾವಣೆಯಾಗಲಿದೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಾಂಬ್​ ಸಿಡಿಸಿದ್ದಾರೆ.

    ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಬಹಳ ದಿನ ಇರುವುದಿಲ್ಲ. ಕೇಂದ್ರ ಸರ್ಕಾರದವರಿಗೂ, ಪಕ್ಷದ ಹೈಕಮಾಂಡ್ ನಾಯಕರಿಗೂ ಇವರ ಬಗ್ಗೆ ಸಾಕಾಗಿದೆ ಎಂದು ಯತ್ನಾಳ್​, ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿಯಾಗಲಿದ್ದಾರೆ. ಉತ್ತರ ಕರ್ನಾಟಕದಿಂದ 100 ಶಾಸಕರನ್ನು ಗೆಲ್ಲಿಸಿ ಕಳಿಸುತ್ತೇವೆ. ಉಳಿದ ಭಾಗದಲ್ಲಿ ಬಿಜೆಪಿಯ 15 ರಿಂದ 20 ಶಾಸಕರು ಗೆಲ್ಲುತ್ತಾರೆ. ಅವರಲ್ಲಿ ಒಬ್ಬರು ಸಿಎಂ ಆಗುತ್ತಾರೆ ಎಂದು ತಿಳಿಸಿದರು.

    ವಿಜಯಪುರದಲ್ಲಿ ನಡೆದ ಹನುಮಂತ ದೇವಸ್ಥಾನದ ಕಾಂಪೌಂಡ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯತ್ನಾಳ್​, ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಈ ಮಾತನ್ನು ಹೇಳಿದರು.

    ಇದನ್ನೂ ಓದಿ: ಹೆಂಡಕ್ಕೆ ಸ್ಯಾನಿಟೈಸರ್​ ಹಾಕಿ ಕುಡಿದರು! 5 ಸಾವು, ಹಲವರ ಸ್ಥಿತಿ ಚಿಂತಾಜನಕ

    ನಾಯಕತ್ವ ಬದಲಾವಣೆ ಕುರಿತಂತೆ ಇದಾಗಲೇ ಹಲವಾರು ಊಹಾಪೋಹಗಳು ಹರಿದಾಡುತ್ತಿರುವ ನಡುವೆಯೇ, ಯತ್ನಾಳ್​ ಅವರು ಈ ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಯಡಿಯೂರಪ್ಪನವರು ಶಿವಮೊಗ್ಗದ ಸಿಎಂ ಅಲ್ಲ, ಕರ್ನಾಟಕದ ಮುಖ್ಯಮಂತ್ರಿ. ನನ್ನ ಕ್ಷೇತ್ರದ ಅನುದಾನ ಕಡಿತ ಮಾಡಿದ ಹಿನ್ನೆಲೆಯಲ್ಲಿ ಅವರ ಮತ್ತು ನನ್ನ ನಡುವೆ ಜಗಳ ಶುರುವಾಗಿದೆ. ಅವರು ಈ ಸ್ಥಾನದಲ್ಲಿ ಹೆಚ್ಚು ದಿನ ಇರಲ್ಲ ಎಂದರು.

    ಮಂಡ್ಯ, ಚಾಮರಾಜನಗರ ಮತ್ತು ಕೋಲಾರದಲ್ಲಿ ಯಾರಾದರೂ ಬಿಜೆಪಿಗೆ ಓಟ್ ಹಾಕ್ತಾರಾ ಎಂದು ಪ್ರಶ್ನಿಸಿದ ಯತ್ನಾಳ್​, ವಿಜಯಪುರಕ್ಕೆ ನೀಡಿದ್ದ ಅನುದಾನವನ್ನು ಮುಖ್ಯಮಂತ್ರಿಗಳು ವಾಪಸ್ ಪಡೆದಿದ್ದರೂ ನಾನು ಬಿಡಲ್ಲ. ಹೇಗೆ ತರಬೇಕೋ ತರ್ತಿನಿ. ಈ ಕುರಿತು ಇದಾಗಲೇ ಇಬ್ಬರ ನಡುವೆ ಜಗಳವಾಗಿದೆ. ಆದರೆ ನಾನು ಸುಮ್ಮನೇ ಬಿಡುವುವವನಲ್ಲ. ಬೆಂಗಳೂರಿನವರು ಬಂದು ವಿಜಯಪುರದ ನಮ್ಮ ಮನೆಯ ಮುಂದೆ ನಿಲ್ಲಬೇಕು. ಈಗ ನಾವು ಅವರ ಮನೆಯ ಮುಂದೆ ಹೋಗಿ ನಿಲ್ಲುತ್ತಿದ್ದೇವೆ ಎಂದರು.

    ಬ್ರಿಟನ್​ ಪ್ರಧಾನಿಗೆ ಸಂಬಳ ಸಾಕಾಗುತ್ತಿಲ್ಲವಂತೆ! ಇನ್ಫಿ ಅಳಿಯನಿಗೆ ಒಲಿಯಲಿದೆಯೇ ಈ ಪಟ್ಟ?

    ರೈಲಲ್ಲಿ ಹೋದ ಕಳ್ಳನನ್ನು ಹಿಡಿಯಲು ವಿಮಾನವೇರಿ ಹೊರಟ ಬೆಂಗಳೂರು ಪೊಲೀಸರು

    ನಟಿಯರನ್ನು ಬಿಡುಗಡೆ ಮಾಡದಿದ್ರೆ ಬಾಂಬ್​ ಬ್ಲಾಸ್ಟ್​: ಉಗ್ರ ಸಂಘಟನೆ ಹೆಸರಲ್ಲಿ ಪತ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts