More

    ಹೆಂಡಕ್ಕೆ ಸ್ಯಾನಿಟೈಸರ್​ ಹಾಕಿ ಕುಡಿದರು! 5 ಸಾವು, ಹಲವರ ಸ್ಥಿತಿ ಚಿಂತಾಜನಕ

    ತಿರುವನಂತಪುರ: ಕರೊನಾದ ಈ ದಿನಗಳಲ್ಲಿ ಎಲ್ಲೆಲ್ಲೂ ಸ್ಯಾನಿಟೈಸರ್​ ಮಾತು. ಆಲ್ಕೋಹಾಲ್​ಯುಕ್ತ ಸ್ಯಾನಿಟೈಸರ್​ ಎಂದೇ ಕರೆಯಲಾಗುವ ಕಾರಣ ಲಾಕ್​ಡೌನ್​ ಸಮಯದಲ್ಲಿ ಎಷ್ಟೋ ಮಂದಿ, ಮದ್ಯ ಸಿಗದೇ ಆಲ್ಕೋಹಾಲ್​ ಕುಡಿದು ಮೃತಪಟ್ಟಿರುವ ಘಟನೆಗಳು ನಡೆದಿವೆ.

    ಆದರೆ ಇದೀಗ ಹೆಂಡ ಸಿಗುತ್ತಿದ್ದರೂ ಕೇರಳದ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕಾಂಜಿಕೋಡ್‍ನಲ್ಲಿ ಕೆಲವರು ಹೆಂಡಕ್ಕೇ ಸ್ಯಾನಿಟೈಸರ್​ ಹಾಕಿ ಕುಡಿದುಬಿಟ್ಟಿದ್ದಾರೆ. ಇದರಿಂದಾಗಿ ಐದು ಮಂದಿ ಮೃತಪಟ್ಟಿದ್ದಾರೆ. ಮಹಿಳೆಯರೂ ಸೇರಿದಂತೆ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಮೃತರನ್ನು ರಾಮನ್ (61), ಅಯ್ಯಪ್ಪನ್ (55), ಅರುಣ್ (22), ಶಿವನ್ (45) ಮತ್ತು ಮೂರ್ತಿ (24) ಎಂದು ಗುರುತಿಸಲಾಗಿದೆ.

    ಇದನ್ನೂ ಓದಿ: ಮಸೀದಿಯಿಂದ ವಾಪಸಾಗುವ ವೇಳೆ ಉಗ್ರರ ದಾಳಿ: ಎಸ್​ಐ ಹತ್ಯೆ

    ಇವರು ಪಯಾತುಕಾಡು ಪ್ರದೇಶದ ಬುಡಕಟ್ಟು ವಾಸಿಗಳಾಗಿದ್ದಾರೆ. ಎಲ್ಲರೂ ಒಂದೇ ಬುಡಕಟ್ಟು ಕಾಲೊನಿಯಲ್ಲಿ ವಾಸಿಸುತ್ತಿದ್ದರು, ಭಾನುವಾರ ಸಂಜೆ ಒಟ್ಟಿಗೆ ಮದ್ಯ ಸೇವಿಸಿದ್ದಾರೆ. ಮದ್ಯ ಸೇವನೆ ಮಾಡಿದ ಕೆಲವೇ ಹೊತ್ತಿನಲ್ಲಿ ಎಲ್ಲರೂ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಇನ್ನು ಕೆಲವರು ನಡುರಾತ್ರಿಯಲ್ಲಿ ಹಾಗೂ ಕೆಲವರು ನಸುಕಿನಲ್ಲಿ ತೀವ್ರ ಹಿಂಸೆ ಅನುಭವಿಸಿದ್ದಾರೆ. ಅವರಲ್ಲಿ ಕೆಲವರ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದೆ ಎನ್ನಲಾಗಿದೆ. ಚಿಕಿತ್ಸೆ ಮುಂದುವರೆದಿದೆ.

    ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೃತರು ಮದ್ಯಕ್ಕೆ ಸ್ಯಾನಿಟೈಸರ್ ಮಿಕ್ಸ್ ಮಾಡಿ ಸೇವನೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಇಂದು ಸಂಜೆ ಮೃತರ ಮರಣೋತ್ತರ ಪರೀಕ್ಷೆಯ ವರದಿ ಬರಲಿದ್ದು, ಅದರಲ್ಲಿ ಸಾವಿಗೆ ನಿಖರ ಕಾರಣ ಯಾವುದು ಎಂಬುದು ತಿಳಿದುಬರಲಿದೆ ಎಂದಿದ್ದಾರೆ.

    ನನ್ನಮ್ಮನ ಜತೆ 3 ಬಾರಿ ಮದುವೆಯಾಗಿ ಸೆಕ್ಸ್​ ಮಾಡುವಾಗ ಅಪ್ಪ ತೀರಿಕೊಂಡರು – ಆತ್ಮಚರಿತ್ರೆಯಲ್ಲಿ ಆಸ್ಕರ್​ ವಿಜೇತ

    ಇವಳು ನನ್ನ ಮುದ್ದು ಮಗಳೇ… ಆದರೆ ಸತ್ತಿದ್ದಾಳೆ… ನನಗೆ ಬೇಡ… ಭಯಾನಕ ಕೊಲೆಯ​ ಸುತ್ತ…

    ಪಾರ್ಟಿ ಕೊಡಿಸುವ ದಿನಗಳು ಮುಗಿದಿವೆ… ತನ್ನ ನಿಧನದ ಸುದ್ದಿ ತಾನೇ ಬರೆದು ಮೃತಪಟ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts