More

    ಆರ್​ಆರ್​ನಗರ- ಮುನಿರತ್ನ ಸೇರಿ ನಾಲ್ವರ ನಾಮಪತ್ರ ವಾಪಸ್- ಎರಡೂ ಕ್ಷೇತ್ರಗಳಲ್ಲಿ ಉಳಿದವರೆಷ್ಟು?

    ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರ (ಆರ್​ಆರ್​ನಗರ) ಮತ್ತು ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರಗಳನ್ನು ವಾಪಸ್ ಪಡೆಯಲು ನಿನ್ನೆ ಕೊನೆಯ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲವು ಅಭ್ಯರ್ಥಿಗಳು ನಾಮಪತ್ರಗಳನ್ನು ವಾಪಸ್​ ಪಡೆದುಕೊಂಡಿದ್ದಾರೆ.

    ಆರ್​ಆರ್​ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮುನಿರತ್ನ, ಮುನಿರತ್ನಮ್ಮ ಸೇರಿ ನಾಲ್ಕು ಮಂದಿ ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದಾರೆ. ಒಂದೇ ಹೆಸರಿನ ಇಬ್ಬರು ಮುನಿರತ್ನ ಇದ್ದು, ಇದರಲ್ಲಿ ಪಕ್ಷೇತರ ಅಭ್ಯರ್ಥಿ ನಾಮಪತ್ರ ವಾಪಸ್​ ಪಡೆದಿದ್ದಾರೆ. ಬಿಜೆಪಿಯ ಮುನಿರತ್ನ ಅವರು ಸೇರಿದಂತೆ 16 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

    ಈ ಮೂಲಕ ಬಿಜೆಪಿಯಿಂದ ಮುನಿರತ್ನ, ಕಾಂಗ್ರೆಸ್‌ನಿಂದ ಎಚ್. ಕುಸುಮಾ ಮತ್ತು ಜೆಡಿಎಸ್‌ನಿಂದ ವಿ. ಕೃಷ್ಣಮೂರ್ತಿ ಸ್ಪರ್ಧಾ ಕಣದಲ್ಲಿದ್ದಾರೆ.

    ಇದನ್ನೂ ಓದಿ: ಎಮ್ಮೆ ಮೇಲೆ ಕುಳಿತು ಮತಯಾಚಿಸಿದ ಎಂಎಲ್​ಎ ಆಕಾಂಕ್ಷಿ ಅರೆಸ್ಟ್​

    ಇನ್ನು ಶಿರಾ ಕ್ಷೇತ್ರಕ್ಕೆ ಬರುವುದಾದರೆ, ಇಲ್ಲಿ 15 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ. ಕಾಂಗ್ರೆಸ್‌ನಿಂದ ಟಿ. ಬಿ. ಜಯಚಂದ್ರ, ಬಿಜೆಪಿಯಿಂದ ಡಾ. ರಾಜೇಶ್ ಗೌಡ ಮತ್ತು ಜೆಡಿಎಸ್‌ನಿಂದ ಅಮ್ಮಾಜಮ್ಮ ಪ್ರಮುಖ ಅಭ್ಯರ್ಥಿಗಳು.

    2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದ ಮುನಿರತ್ನ ಗೆಲುವು ಸಾಧಿಸಿದ್ದರು. ಶಾಸಕ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರಿಂದ ಉಪ ಚುನಾವಣೆ ಎದುರಾಗಿದ್ದರೆ, ಶಿರಾದಲ್ಲಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಬಿ. ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದಾಗಿ ಚುನಾವಣೆ ನಡೆಯುತ್ತಿದೆ.

    ಮುನಿರತ್ನ ಅವರು ಆಗ ಕಾಂಗ್ರೆಸ್​ನಿಂದ ಗೆಲುವು ಸಾಧಿಸಿದ್ದರೆ, ಇದೀಗ ಬಿಜೆಪಿ ಮೂಲಕ ಕಣಕ್ಕೆ ಇಳಿದಿದ್ದಾರೆ. ಶಿರಾ ಕ್ಷೇತ್ರದಲ್ಲಿ 2018ರಲ್ಲಿ ಜೆಡಿಎಸ್​ನ ಬಿ. ಸತ್ಯನಾರಾಯಣ ಅವರು ಗೆಲುವು ಸಾಧಿಸಿದ್ದರು. ಇದೀಗ ಅವರ ಪತ್ನಿ ಅಮ್ಮಾಜಮ್ಮಗೆ ಟಿಕೆಟ್ ಕೊಟ್ಟಿರುವ ಪಕ್ಷ ಅನುಕಂಪದ ಮತಗಳ ನಿರೀಕ್ಷೆಯಲ್ಲಿದೆ.
    ನವೆಂಬರ್ 3ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಆರ್. ಆರ್. ನಗರದಲ್ಲಿ ಮತದಾನ ನಡೆಯಲಿದೆ.

    ಉಪ ಚುನಾವಣೆಯ ಫಲಿತಾಂಶ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬಿ. ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತವನ್ನು ಹೊಂದಿದೆ.

    ಆರ್​ಆರ್​ನಗರ: ಮತ್ತೆ ಶುರುವಾಯ್ತಾ ಅಕ್ರಮ? ಮತದಾರರಿಗೆ ಫೋನ್​ಕಾಲ್​!

    ದುರ್ಗೆಯಾಗಿ ಕಮಲಾ ಹ್ಯಾರಿಸ್​, ಜೋ ಬಿಡನ್​ ಸಿಂಹ, ಟ್ರಂಪ್​ ರಾಕ್ಷಸ… ಸಿಡಿಮಿಡಿಗೊಂಡ ಮತದಾರ

    ನಾನು ಚುನಾವಣೆಯಲ್ಲಿ ಸೋತರೆ ದೇಶಬಿಟ್ಟು ಹೋಗಬೇಕಾಗತ್ತೆ- ಟ್ರಂಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts