More

  ಮುಕ್ಕಲ ಗ್ರಾಪಂ 2ನೇ ವಾರ್ಡ್​ಗೆ ಉಪಚುನಾವಣೆ ಬಿಜೆಪಿ ಬೆಂಬಲಿತೆ ಜ್ಯೋತಿಗೆ ಗೆಲುವು

  ಕಲಘಟಗಿ: ತಾಲೂಕಿನ ಮುಕ್ಕಲ ಗ್ರಾಮ ಪಂಚಾಯಿತಿ 2ನೇ ವಾರ್ಡ್​ನ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜ್ಯೋತಿ ಗಾಡಗೋಳಿ 472 ಮತಗಳಿಂದ ಗೆಲುವು ಸಾಧಿಸಿದ್ದಾರೆ.

  ಮುಕ್ಕಲ್ ಗ್ರಾಮದ 2ನೇ ವಾರ್ಡ್ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ರತ್ನವ್ವ ಗಾಡಗೋಳಿ ಅಕಾಲಿಕ ನಿಧನ ಹೊಂದಿದ್ದರಿಂದ. ಜುಲೈ 23ರಂದು ಉಪಚುನಾವಣೆ ನಡೆದಿತ್ತು.

  ಬುಧವಾರ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕವಿತಾ ಬಡಿಗೇರ 151 ಮತ ಹಾಗೂ ಲಕ್ಷ್ಮೀ ಫಕೀರಪ್ಪ ಮುಳಕೇರಿ 175 ಮತ ಪಡೆದು ಪರಾಭವಗೊಂಡಿದ್ದಾರೆ. ಒಟ್ಟು 798 ಮತಗಳ ಪೈಕಿ 23 ಮತಗಳು ತಿರಸ್ಕೃತವಾಗಿವೆ.

  ಗೆಲುವು ಸಾಧಿಸಿದ ಜ್ಯೋತಿ ಗಾಡಗೋಳಿ ಅವರಿಗೆ ತಹಸೀಲ್ದಾರ್ ಯಲ್ಲಪ್ಪ ಗೋಣೆನ್ನವರ್ ಹಾಗೂ ಚುನಾವಣೆ ಅಧಿಕಾರಿಗಳು ಪ್ರಮಾಣ ಪತ್ರ ನೀಡಿದರು.

  ಪರಶುರಾಮ ದುಂಡಿ, ಗ್ರಾಪಂ ಅಧ್ಯಕ್ಷ ಸಹದೇವಪ್ಪ ಹೊರಕೇರಿ, ಗ್ರಾಪಂ ಸದಸ್ಯ ಶ್ರೀಕಾಂತ ಪಾಟೀಲ, ಶ್ರೀಕಾಂತ ಸೋ. ಪಾಟೀಲ, ಕಲ್ಲಪ್ಪ ಗಾಡಗೋಳಿ, ಪ್ರವೀಣ ಗದುಗಿನ, ಗುರಶಿದ್ದಪ್ಪ ಕಾರಿ, ಹನಮಂತಪ್ಪ ಮುಗಳಿ, ಮಾದೇವಪ್ಪ ಹೊರಕೇರಿ, ನಾಗಪ್ಪ ಕನಕಪ್ಪನವರ, ಗುರುಸಿದ್ಧ ಕಾರಿ, ಈಶ್ವರ ಜಾಯನಗೌಡ್ರು ಇದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 23

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts