38ನೇ ವಯಸ್ಸಿನಲ್ಲಿ ಕಳೆದುಕೊಂಡ ಪರ್ಸ್​ 91ನೇ ವಯಸ್ಸಿಗೆ ಮರಳಿ ಸಿಕ್ಕಿತು!

purse
Published on

ಕ್ಯಾಲಿಫೋರ್ನಿಯಾ: ಪರ್ಸ್​ ಒಮ್ಮೆ ಕಳೆದುಹೋಯಿತು ಎಂದರೆ ಅದನ್ನು ವಾಪಸ್​ ಪಡೆಯಲು ಹರಸಾಹಸವೇ ಮಾಡಬೇಕು. ಎಷ್ಟೋ ಬಾರಿ ಜಪ್ಪಯ್ಯ ಎಂದರು ಅದು ಸಿಗುವುದೇ ಇಲ್ಲ. ಕೊನೆಯ ಪಕ್ಷ ಹಣವನ್ನಾದರೂ ಇಟ್ಟುಕೊಂಡು ಅದರಲ್ಲಿಯೂ ಕಾರ್ಡ್ಸ್​ಗಳನ್ನಾದರೂ ಕೊಡಲಪ್ಪ ಎಂದುಕೊಂಡರೂ ಅದೂ ಸಿಗುವುದೇ ಇಲ್ಲ.

ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ 53 ವರ್ಷಗಳ ಹಿಂದೆ ಕಳೆದುಕೊಂಡಿರುವ ಪರ್ಸ್​ವೊಂದು ಸಿಕ್ಕಿದೆ. 38ನೇ ವಯಸ್ಸಿನವರಿರುವಾಗ ಕಳೆದುಕೊಂಡ ಪರ್ಸ್​ 91ನೇ ವಯಸ್ಸಿನಲ್ಲಿ ಸಿಕ್ಕ ಅಪರೂಪದ ಪ್ರಕರಣವಿದು. ಕ್ಯಾಲಿಫೋರ್ನಿಯಾದ ಪಾಲ್ ಗ್ರಿಶ್ಮ್​ ಎಂಬ ವ್ಯಕ್ತಿ ಅಂಟಾರ್ಟಿಕಾದಲ್ಲಿ ಈ ಪರ್ಸ್​ ಕಳೆದುಕೊಂಡಿದ್ದರು.

ಇವರು ಆಗ ಅಂದರೆ 1967ರಲ್ಲಿ ಅಮೆರಿಕದಲ್ಲಿ ನೌಕಾಪಡೆಯ ಹವಾಮಾನ ಶಾಸ್ತ್ರಜ್ಞನಾಗಿ ಕಾರ್ಯನಿರ್ವಸುತ್ತಿದ್ದರು. ದಕ್ಷಿಣ ಪಟ್ಟಣದ ಮೆಕ್‍ಮುರ್ಡೋ ನಿಲ್ದಾಣದಲ್ಲಿರುವ ಕಟ್ಟಡ ನೆಲಸಮಗೊಳಿಸುವ ಸಂದರ್ಭದಲ್ಲಿ ಅವರು ಪರ್ಸ್​ ಕಳೆದುಕೊಂಡಿದ್ದರು. ಇವರ ಜತೆ ಅದೇ ವೇಳೆ ಇವರ ಸಹೊದ್ಯೋಗಿ ಸ್ಟಿಫನ್ ಡೆಕಾಟೋ ಎನ್ನುವವರೂ ಪರ್ಸ್​ ಕಳೆದುಕೊಂಡಿದ್ದರು. ಎಲ್ಲಿ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ.

ವರ್ಷ ಕಳೆದಂತೆ ಪರ್ಸ್​ ಬಗ್ಗೆ ಅವರು ಮರೆತೇ ಹೋಗಿದ್ದರು. ಆದರೆ ಅಚ್ಚರಿ ಎಂದರೆ ಇದೀಗ ಪಾಲ್​ ಅವರ ಮನೆಗೆ ಪರ್ಸ್​ ಬಂದು ತಲುಪಿದೆ. ಅದನ್ನು ನೋಡಿ ತನ್ನ ಕಣ್ಣುಗಳನ್ನೇ ತಾನು ನಂಬದಾದೆ. ನನಗೆ ಪರ್ಸ್​ ಕಳೆದದ್ದು ನೆನಪೇ ಇಲ್ಲ ಎಂದಿದ್ದಾರೆ ಪಾಲ್​.

ಅಷ್ಟಕ್ಕೂ ಆಗಿದ್ದೇನೆಂದರೆ ಇವರು ಪರ್ಸ್​ ಕಳೆದುಕೊಂಡಿರುವ ಕಟ್ಟಡವನ್ನು ಈಗ ನೆಲಸಮಗೊಳಿಸಲಾಗುತ್ತಿದೆ. ಆಗ ಅಲ್ಲಿ ಪಾಲ್​ ಹಾಗೂ ಸ್ಟಿಫನ್​ ಅವರ ಪರ್ಸ್​ ಸಿಕ್ಕಿದೆ. ಅದರಲ್ಲಿ ಇರುವ ಡ್ರೈವಿಂಗ್​ ಲೈಸೆನ್ಸ್​ ಸೇರಿದಂತೆ ಕಾರ್ಡ್​ಗಳ ಆಧಾರದ ಮೇಲೆ ಇಬ್ಬರ ಮನೆಗೂ ಪರ್ಸ್​ ತಲುಪಿಸಲಾಗಿದೆ.

ಪಾಲ್​ ಅವರಿಗೆ ಈಗ 91 ವರ್ಷ ವಯಸ್ಸು. ಪರ್ಸ್​ನಲ್ಲಿ ಹಣ ಇರದಿದ್ದರೂ ಕಾರ್ಡ್​ಗಳನ್ನು ಡುಪ್ಲಿಕೇಟ್​ ಮಾಡಿಸಿದ್ದರೂ, ಕಳೆದುಹೋದ ವಸ್ತು ವಾಪಸ್​ ಸಿಕ್ಕ ಖುಷಿ. ಆದರೆ ಸ್ಟಿಫನ್​ ಅವರು ಇದಾಗಲೇ ಮೃತಪಟ್ಟಿರುವ ಕಾರಣ, ಅವರ ಕುಟುಂಬದವರು ಪರ್ಸ್​ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net