

ವಾಷಿಂಗ್ಟನ್: ಮತದಾರರನ್ನು ತಮ್ಮತ್ತ ಸೆಳೆಯುವಂತೆ ಮಾಡಲು ರಾಜಕಾರಣಿಗಳು ಅದೆಂತೆಂಥ ವೇಷಗಳನ್ನು, ಮುಖವಾಡಗಳನ್ನು ತೊಡುತ್ತಾರೆ, ಯಾವ್ಯಾವ ರೀತಿಯ ಭರವಸೆಯ ಮಾತುಗಳನ್ನು ಜನರಲ್ಲಿ ತುಂಬುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದದ್ದೇ.
ಅದೇ ರೀತಿ ಇದೀಗ ಅಮೆರಿಕದಲ್ಲಿಯೂ ನಡೆಯುತ್ತಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಪೈಪೋಟಿ ಜೋರಾಗಿರುವ ಈ ಹೊತ್ತಿನಲ್ಲಿ , ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿದಿರೋ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಮತದಾರರ ಓಲೈಕೆಗೆ ರೇನ್ ಡಾನ್ಸ್ ಮಾಡಿದ್ದಾರೆ!
ನಂತರ ಈ ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿರುವ ಅವರು, 'ಮಳೆಯೇ, ಇರಲಿ ಬಿಸಿಲಿರಲಿ, ಡೆಮಾಕ್ರಸಿ ಯಾರಿಗೂ ಕಾಯಲ್ಲ' ಎಂದು ಬರೆದುಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ್ಯಾಲಿ ವೇಳೆ ವಿಚಿತ್ರವಾಗಿ ಡ್ಯಾನ್ಸ್ ಮಾಡಿ, ಸುದ್ದಿಯಾದ ಬೆನ್ನಲ್ಲೇ ಇದೀಗ ಫ್ಲೋರಿಡಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡ್ತಿರೋ ವೇಳೆ ಕಮಲಾ ಮಳೆಯಲ್ಲಿ ಡಾನ್ಸ್ ಮಾಡಿದ್ದು, ಅದರ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ.
ಡೆಮಾಕ್ರಟಿಕ್ ಪಕ್ಷದಿಂದ ಜೋ ಬಿಡೆನ್ ಅವರು ಅಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿದ್ರೆ ಮೂಲದ ಕಮಲಾ ಹ್ಯಾರೀಸ್ ಉಪಾಧ್ಯಕ್ಷ ಸ್ಥಾನದ ರೇಸ್ನಲ್ಲಿದ್ದಾರೆ. ಒಂದು ಈ ವೇಳೆ ಈ ಬಾರಿಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಗೆದ್ದರೆ ಕಮಲಾ ಅಮೆರಿಕದ ಉಪಾಧ್ಯಕ್ಷೆ ಸ್ಥಾನ ಏರುವ ಮೊದಲ ಏಷಿಯನ್ ಮಹಿಳೆ ಎಂದು ಎನಿಸಿಕೊಳ್ಳಲಿದ್ದಾರೆ.