ಸೌತ್​ ಬೇಡ ನಾರ್ತ್​ ಬೇಕು... ಅಯ್ಯೋ ನಂಗೆ ಅಮ್ಮನ ನೋಡ್ಬೇಕು...

sanjana-ragini
Published on

ಬೆಂಗಳೂರು: ಡ್ರಗ್ಸ್​ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ನಟಿಯರಾದ ಸಂಜನಾ ಮತ್ತು ರಾಗಿಣಿಗೆ ಸದ್ಯ ಅಂತೂ ಬೇಲ್​ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಅವರು ಜೈಲಿನಿಂದ ಹೊರಕ್ಕೆ ಬರುವುದು ಸದ್ಯದ ಸ್ಥಿತಿಯಲ್ಲಂತೂ ಕಷ್ಟವೇ ಸರಿ.

ಇಷ್ಟು ವರ್ಷಗಳವರೆಗೆ ಐಷಾರಾಮಿ ಜೀವನ ನಡೆಸುತ್ತಿದ್ದ ಈ ನಟಿಯರು ಜೈಲಿನಲ್ಲಿ ಬಂಧಿಯಾಗಿರುವ ಮೊದಲ ದಿನದಿಂದಲೇ ಒಂದೊಂದು ರೀತಿಯ ಕಿರಿಕ್​ ಮಾಡುತ್ತಲೇ ಇದ್ದಾರೆ.

ಇದೀಗ ರಾಗಿಣಿಗೆ ತನ್ನ ತೂಕದ ಬಗ್ಗೆ ಚಿಂತೆಯಾಗಿದೆಯಂತೆ. ಡಯಟ್​ ಫುಡ್​ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ತನ್ನ ತೂಕವೆಲ್ಲಿ ಜಾಸ್ತಿಯಾಗಿಬಿಡುತ್ತೋ ಎನ್ನುವ ಕಾರಣದಿಂದ ಜೈಲಿನಲ್ಲಿ ರಂಪಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಜೈಲೂಟ ಅಡ್ಜೆಸ್ಟ್ ಆಗುತ್ತಿಲ್ಲ ಎಂದು ಈ ಇಬ್ಬರು ನಟಿಯರೂ ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದಾರೆ.

ಇದೀಗ ರಾಗಿಣಿ ತಮಗೆ, ಸೌತ್​ ಇಂಡಿಯನ್​ ಊಟ ಬೇಡ, ಅದರಿಂದ ವೇಟ್​ ಹೆಚ್ಚಾಗುತ್ತದೆ, ಆದ್ದರಿಂದ ನಾರ್ತ್​ ಇಂಡಿಯನ್​ ಊಟ ಕೊಡಿ ಎಂದು ಕೇಳುತ್ತಿದ್ದಾರಂತೆ. ಪ್ರತಿದಿನ ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗುತ್ತಿದೆ. ಆದ್ದರಿಂದ ಚಪಾತಿ ಬೇಕಿದೆ, ಈ ಕಾರಣದಿಂದ ನಾರ್ತ್​ ಇಂಡಿಯನ್​ ಊಟ ಕೊಡಿ ಎಂದು ಹೇಳುತ್ತಿದ್ದಾರಂತೆ.

ಇದು ರಾಗಿಣಿಯ ವಿಷಯವಾದರೆ, ಸಂಜನಾಗೆ ಇದೀಗ ಅಮ್ಮನ ನೆನಪು ಜೋರಾಗಿ ಕಾಡಲು ಶುರುವಾಗಿದೆಯಂತೆ. ನನಗೆ ಅಮ್ಮನನ್ನು ನೋಡಬೇಕು ಎನ್ನಿಸುತ್ತಿದೆ, ಅವರ ಜತೆ ಮಾತನಾಡಬೇಕಿದೆ. ಆದ್ದರಿಂದ ಫೋನ್​ ಮಾಡಲು ಅವಕಾಶ ಕೊಡಿ ಎಂದು ಕೇಳಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಜೈಲಿನಲ್ಲಿ ಫೋನ್​ ಮಾಡಲು ಅವಕಾಶವಿದೆ. ಆದರೆ ಕೈದಿಗಳು ಸರತಿಯಲ್ಲಿ ನಿಂತು ತಮ್ಮ ಪಾಳಿ ಬರುವವರೆಗೆ ಕಾದು ನಂತರ ಕಾಲ್​ ಮಾಡಬೇಕು. ಇದು ಸಂಜನಾರಿಗೆ ತಲೆನೋವಾಗಿದೆ. ನನಗೆ ಇದೆಂಥ ಸ್ಥಿತಿ ಬಂತು, ಅಮ್ಮನಿಗೆ ಕಾಲ್​ ಮಾಡಲಿಕ್ಕೂ ಕ್ಯೂನಲ್ಲಿ ನಿಲ್ಲಬೇಕಾಗಿದೆ, ಇದೆಲ್ಲಾ ನನಗೆ ಆಗಲ್ಲ, ನಾನು ಬೇಕಾದಾಗಲೆಲ್ಲಾ ಕರೆ ಮಾಡಲಿಕ್ಕೆ ಅವಕಾಶ ಕೊಡಿ, ಅಮ್ಮನನ್ನು ನೋಡಬೇಕು ಎನ್ನಿಸುತ್ತಿದೆ ಎಂದು ಹೇಳುತ್ತಿರುವುದಾಗಿ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net