‘ನಿನ್ನೆ ನನ್ನ ಕೈಯಾರೇ ಊಟ ಕೊಟ್ಟಿದ್ದೆ...ನಾಳೆ ಮಕ್ಕಳನ್ನು ಕರೆದುಕೊಂಡು ಬಾ ಎಂದಿದ್ದರು... ಆದರೀಗ...’

puneeth-hotel
Published on

ಬೆಂಗಳೂರು: ನಿನ್ನೆ ಮಧ್ಯಾಹ್ನ‌ 3 ಗಂಟೆಗೆ ವಜ್ರೇಶ್ವರಿ ಕಂಬೈನ್ಸ್‌ಗೆ ಬಂದಿದ್ದ ಪುನೀತ್ ರಾಜ್‍ಕುಮಾರ್‌ಗೆ ನಮ್ಮ ಹೋಟೆಲ್‌ನಿಂದ ಊಟ ತೆಗೆದುಕೊಂಡು ಹೋಗಿ ಕೊಟ್ಟಿದ್ದೆ.... ಆದರೆ, ಇಂದು ಮಧ್ಯಾಹ್ನ ಅವರು ಇಲ್ಲ ಎಂಬ ಸಂಗತಿ ತಿಳಿದು ಮಾತೇ ಹೊರಡುತ್ತಿಲ್ಲ.

ಇದು ಪುನೀತ್ ಅವರ ನೆಚ್ಚಿನ ಹೋಟೆಲ್‌ಗಳಲ್ಲಿ ಒಂದಾದ ನವಯುಗ ಹೋಟೆಲ್ ಮ್ಯಾನೇಜರ್ ಮಾರುತಿ ಅವರ ಮಾತು.

ಪುನೀತ್ ರಾಜ್‌ಕುಮಾರ್ ಆಗಾಗ ನಮ್ಮ ಹೋಟೆಲ್‌ಗೆ ಬಂದು ಊಟ ಮಾಡುತ್ತಿದ್ದರು. ನಿನ್ನೆ ಮಧ್ಯಾಹ್ನ ಊಟ ತರುವಂತೆ ಹೇಳಿದ್ದರು. ನಾನೇ ಕೈ‌ಯಾರೆ ಅವರಿಗೆ ಊಟ ತೆಗೆದುಕೊಂಡು ಹೋಗಿ ಕೊಟ್ಟಿದ್ದೆ. ಕಷ್ಟ ಸುಖ ಮಾತನಾಡಿ ಓಳ್ಳೆಯದಾಗಲಿ ಎಂದು ಹೇಳಿದ್ದರು. ನಮ್ಮ ಮಕ್ಕಳು ನಿಮ್ಮನ್ನು ನೋಡಬೇಕೆಂದು ಹೇಳುತ್ತಿದ್ದಾರೆ. ಕರೆದುಕೊಂಡು ಬರಬಹುದೇ? ಎಂದು ಹೇಳಿದ್ದಕ್ಕೆ ಧಾರಳವಾಗಿ ಕರೆದುಕೊಂಡು ಬಾ ಎಂದು ಹೇಳಿದ್ದರು. ಪ್ರತಿಯೊಬ್ಬರನ್ನೂ ಹುರಿದುಂಬಿಸುತ್ತಿದ್ದರು. ಯಾವಾಗಲೂ ಪಾಸಿಟಿವ್ ಆಗಿ ಯೋಚಿಸುತ್ತಿದ್ದ ಅವರ ಮಾತುಗಳೇ ನಮಗೆಲ್ಲಾ ಸ್ಫೂರ್ತಿ.

ನ‌ನ್ನ ಕೈಲಿ ಆಲಾಗುತ್ತಿಲ್ಲ....
ಬೆಳಗ್ಗೆ ೨ ಗಂಟೆ ಜಿಮ್ ಮಾಡಿದಾರೆ. ಆಗ ಎದೆನೋವು ಕಾಣಿಸಿಕೊಂಡಿತ್ತು. ಆಗ ಅವರ ಫ್ಯಾಮಿಲಿ ವೈದ್ಯ ರಮಣ ರೆಡ್ಡಿ ಅವ್ರ ಬಳಿ ತೋರಿಸಿದ್ದಾರೆ. ಅವರು ವಿಕ್ರಂ ಆಸ್ಪತ್ರೆಗೆ ಕೊಂಡೊಯ್ಯುವಂತೆ ಸೂಚಿಸಿದ್ದರು. ಅಲ್ಲಿಂದ ಕಾರು ಚಾಲಕ ಹಾಗೂ ಪತ್ನಿ ಜತೆಗೆ ವಿಕ್ರಂ ಆಸ್ಪತ್ರೆಗೆ ಬರುವ ವೇಳೆಗೆ ಮಾರ್ಗ ಮದ್ಯೆ ನನ್ನ ಕೈಲಿ ಆಗುತ್ತಿಲ್ಲ ಎಂದು ಹೇಳಿದ್ದರು. ಇದೇ ಅವರ ಕೊನೆಯ ಮಾತಾಗಿತ್ತು. ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವ ವೇಳೆ ಮಾರ್ಗ ಮದ್ಯೆ ಸಂಚಾರ ದಟ್ಟಣೆಯೂ ಅಧಿಕವಾಗಿತ್ತು ಎಂದು ಪುನೀತ್ ಆಪ್ತ‌ರು ನ‌ನಗೆ ತಿಳಿಸಿದ್ದಾರೆ‌ ಎಂದು ಮಾರುತಿ ವಿಜಯವಾಣಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net