

ಒಡಿಶ: ನಿನ್ನೆ ಅಂದರೆ ಜೂನ್ 3 ವಿಶ್ವ ಬೈಸಿಕಲ್ ದಿನ. ಸೈಕಲ್ ಬಳಕೆಯಿಂದ ಆಗುವ ಪ್ರಯೋಜನಗಳ ಕುರಿತು ಎಲ್ಲೆಡೆ ಹಲವು ವಿಧಧ ಸುದ್ದಿಗಳು ಆಗುತ್ತಿರುವ ನಡುವೆಯೇ ಒಡಿಶಾದ ಪುರಿಯ 18 ವರ್ಷದ ಯುವಕನೊಬ್ಬ ಒಂದು ಸಾಧನೆಯನ್ನೇ ಮಾಡಿದ್ದಾನೆ.
ಅದೇನೆಂದರೆ ಜಗತ್ತಿನ ಮೊದಲ ಬೈಸಿಕಲ್‌ನ ಮಾದರಿಯನ್ನು ಬೆಂಕಿಕಡ್ಡಿಗಳನ್ನು ಬಳಸಿಕೊಂಡು ಮರುಸೃಷ್ಟಿ ಮಾಡಿದ್ದಾನೆ ಈತ. ಇವನ ಹೆಸರು ಸಾಸ್ವತ್ ರಂಜನ್. 1870ರಲ್ಲಿ ಅನ್ವೇಷಣೆ ಮಾಡಲಾದ ಪೆನ್ನಿ-ಫಾರ್ತಿಂಗ್ ಎಂಬ ಹೆಸರಿನ ಬೈಸಿಕಲ್ ಅನ್ನು ಮರುಸೃಷ್ಟಿ ಮಾಡಿದ್ದಾನೆ.
3,653 ಬೆಂಕಿಕಡ್ಡಿಗಳನ್ನು ಇದಕ್ಕಾಗಿ ಬಳಸಿಕೊಂಡಿದ್ದಾನೆ. ಒಂದು ವಾರದವರೆಗಿನ ಸತತ ಪ್ರಯತ್ನದಿಂದ ಇದನ್ನು ಸಿದ್ಧಪಡಿಸಿರುವುದಾಗಿ ಹೇಳಿದ್ದಾರೆ. ಇದು 50 ಇಂಚು ಉದ್ದ, 25 ಇಂಚು ಅಗಲವಿದೆ. ಇದರ ಫೋಟೋ ಸಕತ್ ವೈರಲ್ ಆಗಿದೆ.