ಎರಡನೇ ಮಗುವಾದ ಮೇಲೂ ಕರೀನಾ ಹೀಗಿದ್ದಾರೆ ನೋಡಿ- ಫೋಟೋ ಹಂಚಿಕೊಂಡ ಬಾಲಿವುಡ್‌ ತಾರೆ...

kareena1
Published on

ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಈಗ ಎರಡನೆಯ ಮಗುವಿನ ತಾಯಿ. 40 ವರ್ಷದ ಈ ಬೆಡಗಿ ಎರಡನೆಯ ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಸದ್ಯ ಸಾಮಾಜಿಕ ಜಾಲತಾಣದಿಂದ ದೂರವೇ ಉಳಿದಿದ್ದರು. ಮನೆಯಲ್ಲಿಯೇ ಇದ್ದು, ವರ್ಕ್‌ಔಟ್‌ ಎಲ್ಲಾ ಕಷ್ಟವಾಗಿದ್ದರಿಂದ ಸಹಜ ಎಂಬಂತೆ ಡೆಲಿವರಿ ನಂತರ ಈಕೆ ಕೂಡ ತೂಕ ಹೆಚ್ಚಿಸಿಕೊಂಡಿದ್ದರು.

ಆದರೆ ನಟ-ನಟಿಯರ ಜೀವನ ಇಷ್ಟಕ್ಕೇ ಮುಗಿಯುವದಿಲ್ಲವಲ್ಲ! ಪುನಃ ಕರೀನಾ ಸಿನಿರಂಗದತ್ತ ಮುಖ ಮಾಡಿದ್ದಾರೆ. ಅದಕ್ಕಾಗಿ ಮೊದಲಿನಂತೆಯೇ ಸ್ಲಿಮ್‌ ಆಗುವ ಪಣತೊಟ್ಟು ಅದರಲ್ಲಿ ಸಕ್ಸಸ್‌ ಕೂಡ ಆಗಿದ್ದಾರೆ. ಅದರ ಫೋಟೋ ಅನ್ನು ತಮ್ಮ ಇನ್ಟಾಗ್ರಾಂ ಖಾತೆಯಲ್ಲಿ ಕರೀನಾ ಹಂಚಿಕೊಂಡಿದ್ದಾರೆ.

ಕರೀನಾ ಪ್ರಿಂಟೆಡ್ ಬ್ಯಾಂಡೊ ಮೇಲುಡುಪಿನ ಜತೆ, ಗ್ಲಾಸ್‍ವೊಂದರ ಮುಂದೆ ಫೋಟೋಗೆ ಪೋಸ್ ಕೊಟ್ಟಿದ್ದನ್ನು ಫೋಟೋದಲ್ಲಿ ನೋಡಬಹುದು. ಫೋಟೋದ ಹಿಂಬದಿಯಲ್ಲಿ ಸ್ವಿಮಿಂಗ್ ಪೂಲ್ ಕಾಣಿಸುತ್ತದೆ. ಜತೆಗೆ ವರ್ಕ್‌ಔಟ್‌ ಮಾಡುತ್ತಿರುವುದಕ್ಕೆ ಸಾಕ್ಷಿಯಾಗಿ ಯೋಗದ ಮ್ಯಾಟ್ ಕೂಡ ಹಿಂದುಗಡೆ ಕಾಣಿಸುತ್ತಿದ್ದಾರೆ.

ಫೋಟೊ ಜೊತೆಗೆ ಗ್ಲಾಸ್‍ನಲ್ಲಿ ಕಾಣಿಸುತ್ತಿರುವ ವಸ್ತುಗಳು ಬಹಳಷ್ಟು ಹತ್ತಿರದಲ್ಲಿದೆ. ಆದ್ದರಿಂದ ಅಂತರವನ್ನು ಕಾಯ್ದುಕೊಳ್ಳಿ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್‌ಗೆ 2012ರಲ್ಲಿ ಮದುವೆಯಾಗಿದ್ದು, ಮೊದಲ ಮಗು ತೈಮೂರ್‌ 2016ರಲ್ಲಿ ಹುಟ್ಟಿದ್ದ. ನಂತರ ಇದೀಗ ಎರಡನೆಯ ಮಗು ಜನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net