More

    ರಿಲಯನ್ಸ್‌ನಿಂದ ಸಿಬ್ಬಂದಿಗೆ ನೆರವಿನ ಮಹಾಪೂರ: ಐದು ವರ್ಷದ ವೇತನ, ಶಿಕ್ಷಣ ಸೌಲಭ್ಯ, ಆಸ್ಪತ್ರೆ ಖರ್ಚು…

    ಮುಂಬೈ: ಕೋವಿಡ್‌ನ ಬಿಕ್ಕಟ್ಟಿನ ಈ ಸಮಯದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ತನ್ನ ಉದ್ಯೋಗಿಗಳಿಗೆ ನೆರವಿನ ಮಹಾಪೂರವನ್ನೇ ಹರಿಸಿದೆ. ಕರೊನಾ ಸೋಂಕಿನಿಂದ ಪ್ರಾಣ ಕಳೆದುಕೊಂಡ ತನ್ನ ನೌಕರರ ಕುಟುಂಬಕ್ಕೆ ಮುಂದಿನ ಐದು ವರ್ಷಗಳವರೆಗೆ ಮಾಸಿಕ ವೇತನವನ್ನು ನೀಡುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಘೋಷಿಸಿದೆ.

    ಸೋಂಕಿನಿಂದ ಮೃತಪಡುವ ನೌಕರರ ಮಕ್ಕಳಿಗೆ ತನ್ನ ಸಂಸ್ಥೆಯ ಭಾರತದ ಯಾವುದೇ ಕಾಲೇಜಿನಲ್ಲಿ ಪದವಿಯವರೆಗೆ ಬೋಧನಾ ಶುಲ್ಕ, ವಸತಿ ಶುಲ್ಕ ಮತ್ತು ಪುಸ್ತಕ ಶುಲ್ಕವನ್ನು ಸಂಪೂರ್ಣವಾಗಿ ಪಾವತಿಸುವುದಾಗಿ ಹೇಳಿದೆ. ಮಾತ್ರವಲ್ಲದೇ ಮಕ್ಕಳು ಪದವಿ ಮುಗಿಸುವವರೆಗೂ ಸೋಂಕಿನಿಂದ ಕಳೆದುಕೊಂಡ ಪತಿ/ಪತ್ನಿ, ಅವರ ಪೋಷಕರು ಮತ್ತು ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಿದರೆ ಅವರ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಹೇಳಿದೆ.

    ತನ್ನ ಉದ್ಯೋಗಿ ಅಥವಾ ಅವರ ಕುಟುಂಬಸ್ಥರು ಯಾರೇ ಆಗಲಿ ಕೋವಿಡ್‌ ಸೋಂಕಿಗೆ ಒಳಗಾದರೆ ಅವರು ದೈಹಿಕ ಮತ್ತು ಮಾನಸಿಕವಾಗಿ ಚೇತರಿಸಿಕೊಳ್ಳುವವರೆಗೆ ರಜೆ ತೆಗೆದುಕೊಳರ್ಳಲು ಅವಕಾಶ ಕಲ್ಪಿಸಲಾಗಿದೆ. ಇದರ ಜತೆಗೆ, ಕೋವಿಡ್‌ಗೆ ಬಲಿಯಾದ ಎಲ್ಲಾ ನೌಕರರ ಕುಟುಂಬ ಸದಸ್ಯರಿಗೆ ಕಂಪನಿಯು 10 ಲಕ್ಷ ರೂಪಾಯಿಗಳ ಧನಸಹಾಯ ಮಾಡಲಿದೆ.

    ನಿಮ್ಮೊಂದಿಗೆ ನಾವಿದ್ದೇವೆ- ಕೋವಿಡ್‌ ಅನಾಥ ಮಕ್ಕಳ ಜತೆ ಸಂವಾದದಲ್ಲಿ ಸಚಿವೆ ಶಶಿಕಲಾ ಭರವಸೆ

    ಆಯುರ್ವೇದ ಕರೊನಾ ಔಷಧಕ್ಕೆ ಮುಗಿಬಿದ್ದ ವಿದೇಶಿಗರು- ಆನಂದಯ್ಯನವರಿಗೆ ಬಿಗಿ ಭದ್ರತೆ: ಹಳ್ಳಿಯಿಂದ ಶಿಫ್ಟ್‌!

    ಪ್ರಧಾನಿಜೀ… ಪರೀಕ್ಷೆ ಕ್ಯಾನ್ಸಲ್‌ ಆದ್ರೂ ಅಡ್ಡಿಲ್ಲ, ನೇಹಾಳನ್ನು ಸೀರೆಯಲ್ಲಿ ನೋಡೋ ಆಸೆ ಈಡೇರಿಸಿ ಪ್ಲೀಸ್‌. ಪ್ಲೀಸ್‌…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts