More

  ಮೇಲಿನಕುರುವಳ್ಳಿ ನವೀಕೃತ ಶಾಲೆ ಅನಾವರಣ

  ತೀರ್ಥಹಳ್ಳಿ: ದಾನಿಗಳ ನೆರವು ಹಾಗೂ ಅಂಟಿಕೆ ಪಂಟಿಕೆ ಮೂಲಕ ಸಂಗ್ರಹಿಸಿದ ಹಣದಲ್ಲಿ ನಿರ್ಮಿಸಲಾದ ಸರ್ಕಾರಿ ಉನ್ನತೀಕರಿಸಿದ ಮೇಲಿನಕುರುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದ ಮುಖ ಮಂಟಪ ಸೇರಿದಂತೆ ವಿವೇಕ ಯೋಜನೆಯ ಶಾಲಾ ಕೊಠಡಿ ಉದ್ಘಾಟನೆಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಫೆ.24ರಂದು ಸಂಜೆ 4.30ಕ್ಕೆ ನೆರವೇರಿಸಲಾಗಿದೆ.
  ವಿವೇಕ ಯೋಜನೆಯಡಿ 13.90ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಿಸಲಾಗಿದೆ. ದಾನಿಗಳ ನೆರವು ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ನೇತೃತ್ವದಲ್ಲಿ ಅಂಟಿಕೆ ಪಂಟಿಕೆ ಮೂಲಕ ಸಂಗ್ರಹಿಸಿದ ಅಂದಾಜು ಐದು ಲಕ್ಷ ರೂ. ಹಣದಲ್ಲಿ ಶಾಲೆಯ ಮುಂಭಾಗದಲ್ಲಿ ಆಕರ್ಷಕವಾದ ಮುಖ ಮಂಟಪವನ್ನು ನಿರ್ಮಿಸಲಾಗಿದ್ದು ಈ ಸರ್ಕಾರಿ ಶಾಲೆ ಕಾರ್ಪೋರೇಟ್ ಶಾಲೆಯಂತೆ ಕಂಗೊಳಿಸುತ್ತಿದೆ.
  ಇಲ್ಲಿನ ವಿದ್ಯಾರ್ಥಿಗಳಿಗೆ ಆಧುನಿಕವಾದ ಪೀಠೋಪಕರಣ ಮತ್ತು ಆಟಿಕೆಗಳನ್ನು ಒದಗಿಸಲಾಗಿದೆ. ೫೦ ಸಾವಿರ ರೂ.ವೆಚ್ಚದಲ್ಲಿ ಶಾಲೆಯ ಕಾಂಪೌAಡ್ ಮೇಲೆ ತಾಲೂಕಿನ ಐತಿಹಾಸಿಕ ಘಟನೆಗಳ ಹಿನ್ನೆಲೆಯ ಗೋಡೆ ಬರಹವನ್ನು ಬರೆಸಲಾಗಿದೆ.
  ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ತಮ್ಮ ಪಾಲಕರ ಹೆಸರಿನಲ್ಲಿ ೬ ಲಕ್ಷ ರೂ.ಗಳನ್ನು ವಿನಿಯೋಗಿಸಿ ಶಾಲಾ ಆವರಣದಲ್ಲಿ ಇಂಟರ್ ಲಾಕ್, ರಂಗಮAದಿರದ ಮುಂಭಾಗದ ಕಾಮಗಾರಿ, ಶಾಲೆಗೆ ಸುಣ್ಣಬಣ್ಣ ಮಾಡಿಸಿದ್ದಾರೆ. ಪಾಲಕರು ಖಾಸಗಿ ಶಾಲೆಗಳ ಮೇಲಿನ ಆಸಕ್ತಿಯ ನಡುವೆಯೂ ಸರ್ಕಾರಿ ಶಾಲೆ ಪಟ್ಟಣಕ್ಕೆ ಹೊಂದಿಕೊAಡಿದ್ದು ಆಂಗ್ಲ ಮಾಧ್ಯಮದ ಒಂದರಿAದ ಎಂಟನೇ ತರಗತಿವರೆಗಿನ ಈ ಸರ್ಕಾರಿ ಶಾಲೆ ಎಲ್ಲ ಆಧುನಿಕ ಸೌಲಭ್ಯ, ಶಿಕ್ಷಕರ ಕಾರ್ಯ ವೈಖರಿಯಿಂದಾಗಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts