

ನವದೆಹಲಿ: ನಾಯಿಗಳು ನಿಯತ್ತಿಗೆ ಹೆಸರಾದಂತೆಯೇ ಪೊಲೀಸ್ ಇಲಾಖೆ, ಸೇನೆ ಸೇರಿದಂತೆ ಹಲವು ಇಲಾಖೆಗಳಿಗೆ ಅತ್ಯಾಪ್ತವಾಗಿರುವ ಪ್ರಾಣಿಯೂ ಹೌದು. ಮನುಷ್ಯರು ಭೇದಿಸಲಾಗದ ಎಷ್ಟೋ ಪ್ರಕರಣಗಳನ್ನು ಈ ನಾಯಿ ಭೇದಿಸುವ ಕಾರಣ, ತನಿಖಾ ಇಲಾಖೆಗಳಲ್ಲಿ ಇದರದ್ದೇ ಕಾರುಬಾರು.
ಆದರೆ ಅಷ್ಟು ಅದು ಪಳಗಬೇಕಾದರೆ ಅದಕ್ಕೆ ಅಷ್ಟೇ ತರಬೇತಿಯೂ ಬೇಕಲ್ವಾ? ಇದು ಪೊಲೀಸ್ ಇಲಾಖೆ ಮಾತಾದರೆ ಇನ್ನು ಕೆಲವರು ತಮ್ಮ ಮನೆಯ ನಾಯಿಗಳಿಗೂ ಸಾಕಷ್ಟು ತರಬೇತಿಗಳನ್ನು ನೀಡುತ್ತಾರೆ. ಹಾಗೆಂದು ಪಾಪ ಹಗಲೂ ರಾತ್ರಿ ತರಬೇತಿ ಕೊಟ್ರೆ ಏನಾಗಬೇಡ?
ಸಾಮಾಜಿಕ ಜಾಲತಾಣಗಳಲ್ಲಿ ಇಂಥದ್ದೇ ಒಂದು ನಾಯಿಯ ಫೋಟೋ ವೈರಲ್ ಆಗಿದೆ. ಅಮೆರಿಕದ ವೃತ್ತಿಪರ ಬಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್ಮನ್ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನಾಯಿಗೆ ರೆಕ್ಸ್ ತರಬೇತಿ ನೀಡುತ್ತಿದ್ದಾರೆ. ಆದರೆ ಪಾಪ ಅದಕ್ಕೆ ಸುಸ್ತಾಗಿ ಹೋಗಿದೆ. ಆದ್ದರಿಂದ ಸ್ವಲ್ಪ ದೂರದವರೆಗೆ ತನ್ನ ಮಾಲೀಕನನ್ನು ಹಿಂಬಾಲಿಸುವ ಈ ನಾಯಿ, ಇದ್ದಕ್ಕಿದ್ದಂತೆಯೇ ಎಡವಿ ಬಿದ್ದಂತೆ ಮಾಡಿದೆ. ಅಸಲಿಗೆ ಇದು ನಾಟಕ, ತನಗೆ ಏಳಲು ಸಾಧ್ಯವೇ ಇಲ್ಲ ಎಂದು ಮಾಲೀಕನತ್ತ ನೋಡುವಂತೆ ನಾಟಕ ಮಾಡಿದ ನಾಯಿ ಆತನ ಸಹಾಯ ನಿರೀಕ್ಷಿಸುತ್ತಿದೆ. ಆದರೆ, ಚಾಪ್ಮನ್ ಸ್ವತಃ ನಾಯಿಯೇ ಮೇಲೇಳಲಿ ಎಂದು ಸುಮ್ಮನಾಗುತ್ತಾರೆ.
ಸಕತ್ ವೈರಲ್ ಆಗಿರುವ ಈ ವಿಡಿಯೋ ನಗು ತರಿಸುತ್ತಿದ್ದು, ನೀವೂ ನೋಡಿ ಎಂಜಾಯ್ ಮಾಡಿ.