ಶವದ ಪೆಟ್ಟಿಗೆಯಿಂದ ಎದ್ದುಬಂದು ಮದುವೆಯಾದ ಮದುಮಗಳು- ವೈರಲ್​ ವಿಡಿಯೋ ಇಲ್ಲಿದೆ ನೋಡಿ...

marraige
Published on

ಲಂಡನ್​: ಮದುವೆಯ ದಿನವು ದಂಪತಿಯ ಜೀವನದಲ್ಲಿ ಅತ್ಯಂತ ವಿಶೇಷವಾದ ದಿನಗಳಲ್ಲಿ ಒಂದು. ಇದೇ ಕಾರಣಕ್ಕೆ ಕೆಲವರು ಡಿಫರೆಂಟ್​ ಆಗಿ ಮದುವೆಯಾಗುವ ತೀರ್ಮಾನಕ್ಕೆ ಬರುತ್ತದೆ. ಈ ಹಿಂದೆ ಯಾರೂ ತಮ್ಮಂತೆ ವಿವಾಹವಾಗಿರಬಾರದು ಎಂದು ಕೆಲವರು ಅಂದುಕೊಳ್ಳುವುದುಂಟು.

ಇದೇ ಕಾರಣಕ್ಕೆ ಈ ದಿನವನ್ನು ಹೆಚ್ಚು ವಿಶೇಷವಾಗಿಸಲು ಹೆಚ್ಚಿನವರು ಸೃಜನಶೀಲ ಮತ್ತು ನವನವೀನ ಆಲೋಚನೆಗಳನ್ನು ಮಾಡುತ್ತಾರೆ.

ಇಂಥದ್ದೇ ಒಂದು ಅಪರೂಪದ ಮದುವೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ಕಳೆದ ವರ್ಷ ನಡೆದಿರುವ ಮದುವೆ ಇದಾಗಿದೆ. ಇದರಲ್ಲಿ ಲಂಡನ್​ನ ಜೋಡಿ ವಿಚಿತ್ರ ಎನಿಸುವ ರೀತಿಯಲ್ಲಿ ಮದುವೆಯಾಗಿರುವ ದೃಶ್ಯವಿದೆ.

ಅಷ್ಟಕ್ಕೂ ಈ ಮದುವೆಯಲ್ಲಿ ಅಂಥದ್ದೇನು ವಿಶೇಷ ಎಂದರೆ, ವಧು ಶವಪೆಟ್ಟಿಗೆಯಿಂದ ಹೊರಕ್ಕೆ ಬಂದು ಮದುವೆಯಾಗಿದ್ದಾಳೆ! ವಿಲಕ್ಷಣ ಎನಿಸುವ ಈ ಘಟನೆಗೆ ಇಂಥದ್ದೊಂದು ಮದುವೆ ಸಾಕ್ಷಿಯಾಗಿದೆ. ಡಿಫರೆಂಟ್​ ಆಗಿ ಮದುವೆಯಾಗಬೇಕು ಎನ್ನುವ ಉದ್ದೇಶದಿಂದ ಸಿಯಾರಾ ಎಂಬಾಕೆ ಮದುವೆಗಿಂತ ಮೊದಲು ಶವಪೆಟ್ಟಿಗೆಯೊಳಕ್ಕೆ ಕುಳಿತಿದ್ದಳು.

ಅತ್ತ ವರ ಬಾಬಿ ಕುಕ್​ ಉಳಿದ ಮದುವೆಯ ಸಂಪ್ರದಾಯಗಳನ್ನು ಮುಗಿಸಿದ್ದಾನೆ. ನಂತರ ವಧುವು ಮದುವೆಯ ಮುಹೂರ್ತಕ್ಕೆ ಬರುವ ಸಮಯದಲ್ಲಿ ಶವಪೆಟ್ಟಿಗೆಯಿಂದ ಮೇಲೆದ್ದು ಬಂದಿದ್ದಾಳೆ. ಕೆಲವು ಸಮಯ ಉಸಿರುಗಟ್ಟಿದ್ದರಿಂದ ಸುಧಾರಿಸಿಕೊಂಡು ನಗುತ್ತಾ ಮದುಮಗಳು ಹೊರಕ್ಕೆ ಬಂದಿದ್ದಾಳೆ. ಮೂರು ತುಂಡುಗಳ ಸೂಟ್​ನಲ್ಲಿರುವ ಈ ವಧು ಶವಪೆಟ್ಟಿಗೆಯಿಂದ ಹೊರಕ್ಕೆ ಬಂದಿರುವುದನ್ನು ನೋಡಿದಾಗ ಕೆಲವರಿಗೆ ಅಸಹ್ಯ ಎನಿಸಿದರೂ ಏನೋ ವಿಶೇಷ ಮದುವೆ ಇದು ಎಂದು ವಿಡಿಯೋ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net