More

    ಒಂದು ಕ್ಷಣವಾಗಿದ್ರೂ ಈತನ ದೇಹ ಬೈಕ್​ನಂತೆ ಪೀಸ್​ ಪೀಸ್​ ಆಗಿರ್ತಿತ್ತು: ಭಯಾನಕ ವಿಡಿಯೋ ವೈರಲ್​

    ನವದೆಹಲಿ: ರೈಲು ಹಳಿಯನ್ನು ದಾಟುವ ಭರದಲ್ಲಿ ಆಗುತ್ತಿರುವ ಅಚಾತುರ್ಯಗಳಿಗೆ ಲೆಕ್ಕವೇ ಇಲ್ಲವಾಗಿದೆ. ಎಷ್ಟೋ ಸಮಯದಲ್ಲಿ ಕಿವಿಗೆ ಇಯರ್​ಫೋನ್​ ಹಾಕಿಕೊಂಡೋ ಇಲ್ಲವೇ ಮೊಬೈಲ್​ಫೋನ್​ನಲ್ಲಿ ಮಾತನಾಡುತ್ತ ಈ ಲೋಕದ ಅರಿವೇ ಇಲ್ಲದೇ ಗೇಟ್​ ದಾಟುತ್ತಿರುವ ಸಮಯದಲ್ಲಿ ಇಹಲೋಕ ತ್ಯಜಿಸಿದವರು ಅದೆಷ್ಟೋ ಮಂದಿ.

    ಇದು ಒಂದೆಡೆಯಾದರೆ, ರೈಲು ಇನ್ನೂ ದೂರವಿದೆಯಲ್ಲ, ಅಲ್ಲಿಯವರೆಗೆ ದಾಟಿಕೊಂಡು ಬಿಡುವ ಎನ್ನುವ ಅವಸರದಲ್ಲಿ ದಾಟಲು ಹೋಗಿ ರೈಲಿಗೆ ಸಿಲುಕಿ ಸತ್ತವರೂ ಲೆಕ್ಕಕ್ಕಿಲ್ಲ. ಅಂಥದ್ದೇ ಒಂದು ಘಟನೆಯ ವಿಡಿಯೊ ಇದೀಗ ವೈರಲ್​ ಆಗಿದೆ.

    ಆದರೆ ಅದೃಷ್ಟವಶಾತ್​ ಬೈಕ್​ ಸವಾರ ಆ ಒಂದು ಸೆಕೆಂಡ್​ನಲ್ಲಿ ತೆಗೆದುಕೊಂಡ ನಿರ್ಧಾರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ, ಆದರೆ ಆತನ ಬೈಕ್​ ಮಾತ್ರ ಪೀಸ್​ಪೀಸ್​ ಆಗಿ ಚೆಲ್ಲಾಪಿಲ್ಲಿಯಾಗಿಹೋಗಿದೆ.

    ಅಷ್ಟಕ್ಕೂ ಆಗಿದ್ದೇನೆಂದರೆ, ರೈಲು ಬರುವ ಸಮಯದಲ್ಲಿ ಗೇಟ್​ ಹಾಕಲಾಗಿತ್ತು. ರೈಲ್ವೆ ಹಳಿಯ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಆದರೆ ರೈಲು ಬರುವುದು ಇನ್ನೂ ಲೇಟ್​ ಇದೆ ಎಂದುಕೊಂಡ ಬೈಕ್​ ಸವಾರನೊಬ್ಬ ಆದಷ್ಟು ಬೇಗ ದಾಟಿ ಬಿಡುವ ಎಂದು ಬೈಕ್​ ಮೇಲೆ ಹೋಗಲು ನೋಡಿದ್ದಾನೆ. ಆದರೆ ರೈಲು ಹತ್ತಿರ ಬಂದಿದೆ. ಅವನ ಜೀವ ಗಟ್ಟಿ ಇತ್ತು ಎಂದು ಕಾಣಿಸುತ್ತದೆ. ಆ ಒಂದು ಕ್ಷಣ ಏನೋ ತೋಚಿ ಬೈಕ್ ಹಿಂದಕ್ಕೆ ತೆಗೆದುಕೊಳ್ಳಲು ನೋಡಿದ್ದಾನೆ.

    ಆದರೆ ರೈಲು ಇನ್ನೂ ಹತ್ತಿರ ಬಂದಿದ್ದರಿಂದ ಬೈಕ್​ ಅಲ್ಲೇ ಬಿಟ್ಟು ದೂರ ಸರಿದಿದ್ದಾನೆ. ರಭಸದಿಂದ ಬಂದ ರೈಲಿನ ಅಡಿ ಬೈಕ್​ ಸಿಕ್ಕಿ ಪೀಸ್​ ಪೀಸ್​ ಆಗಿ ಚೆಲ್ಲಾಪಿಲ್ಲಿಯಾಗಿದೆ. ಈತ ಬದುಕುಳಿದಿದ್ದಾನೆ. ಇದರ ವಿಡಿಯೋ ವೈರಲ್​ ಆಗಿದೆ.
    ಬೈಕ್​ ಸವಾರನ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅವನೇನೋ ಪ್ರಾಣಾಪಾಯದಿಂದ ಪಾರಾದ. ಆದರೆ ​ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಸಿಡಿದಿದ್ದರೆ ಭಾರಿ ಅನಾಹುತವಾಗುವ ಸಾಧ್ಯತೆ ಇತ್ತು ಎಂದು ಕಮೆಂಟ್​ ಮಾಡಲಾಗಿದೆ.

    ಭಾರತೀಯ ರೈಲು ಎಂದು ರೈಲಿನ ಮೇಲೆ ಬರೆಯಲಾಗಿದ್ದು, ಈ ಘಟನೆ ನಡೆದ ಸ್ಥಳ ಮಾತ್ರ ಯಾವುದು ಎನ್ನುವುದು ಸ್ಪಷ್ಟವಾಗಿಲ್ಲ.

    ರಾಯ್ತ ತಯಾರಿಸಿ ಬಿರಿಯಾನಿ ಸವಿದ ರಾಹುಲ್​- ‘ನಲ್ಲ ಇರಕು’, ಅಮೆರಿಕಕ್ಕೂ ಕಳಿಸ್ತೇನೆ ಎಂದರು!

    ಅಲ್ಲಿ ಸಿಕ್ಕಾಪಟ್ಟೆ ಕಿತ್ತಾಡಿಕೊಂಡ್ರು… ಇಲ್ಲಿ ಬಂದು ಅಪ್ಪಿಕೊಂಡು ಮುದ್ದಾಡಿದ್ರು…

    ವೃದ್ಧರನ್ನು ಟ್ರಕ್​ನಿಂದ ತಳ್ಳುತ್ತಿರುವ ಅಧಿಕಾರಿ! ಭಯಾನಕ ವಿಡಿಯೋ ವೈರಲ್- ಉಪ ಆಯುಕ್ತ ಸಸ್ಪೆಂಡ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts