ನವದೆಹಲಿ: ಇಂದು ಕೇಂದ್ರದ ಬಜೆಟ್ ನಡೆಯುತ್ತಿದ್ದ ಸಮಯ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುತ್ತಿದ್ದ ವೇಳೆ ಸದನದಲ್ಲಿ ಎಲ್ಲರೂ ತದೇಕ ಚಿತ್ತದಿಂದ ಅದನ್ನು ಆಲಿಸುತ್ತಿದ್ದರು.
ಆದರೆ ಸಂಸದ ರಾಹುಲ್ ಗಾಂಧಿ ಮಾತ್ರ ನಿದ್ದೆಗೆ ಜಾರಿಬಿಟ್ಟರು. ಆಡಳಿತ ಪಕ್ಷದವರು ಬಜೆಟ್ ಅನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ವಿರೋಧ ಪಕ್ಷಗಳು ಬಜೆಟ್ ವಿರುದ್ಧವಾಗಿ ಮಾತುಕತೆ ನಡೆಸುತ್ತಿದ್ದರು. ಪ್ರತಿಬಾರಿಯೂ ಯಾವುದೇ ಪಕ್ಷ ಬಜೆಟ್ ಮಂಡನೆ ಮಾಡಿದಾಗ ಅದರ ಪರ-ವಿರೋಧಗಳ ಚರ್ಚೆ ನಡೆದೇ ಇರುತ್ತದೆ.
Before Valentine Day After valentine day pic.twitter.com/341I7XjFuk
— Say My Name (@Its_Heisen_berg) February 1, 2021
ಇಂದು ಸಹಜವಾಗಿ ಆಡಳಿತ ಪಕ್ಷದ ವಿರುದ್ಧ ಟೀಕೆ ಮಾಡಲಿಕ್ಕೋಸ್ಕರವಾಗಿಯಾದರೂ ರಾಹುಲ್ ಗಾಂಧಿ ಬಜೆಟ್ ಅನ್ನು ಆಲಿಸಬೇಕಿತ್ತು. ಅದನ್ನು ಬಿಟ್ಟು ನಿದ್ದೆಗೆ ಜಾರಿದ್ದರು. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್ ಆಗುತ್ತಿದೆ. ನೆಟ್ಟಿಗರ ಆಹಾರವಾಗಿದ್ದಾರೆ ರಾಹುಲ್ ಗಾಂಧಿ.
In Biology class In Maths class pic.twitter.com/1nCN7tSE6Y
— Pakchikpak Raja Babu (@HaramiParindey) February 1, 2021
ಮಾಸ್ಕ್ ಧರಿಸಿದ್ದ ಅವರು ನಿದ್ದೆಗೆ ಜಾರಿರುವ ಫೋಟೋ ಕ್ಲಿಕ್ಕಿಸಲಾಗಿದೆ. ಈ ಫೋಟೋ ಇಟ್ಟುಕೊಂಡು ಅವರು ಈ ಹಿಂದೆ ಕಣ್ಣು ಕ್ಲಿಕ್ಕಿಸಿದ ಫೋಟೋದ ಜತೆಗೆ ಸೇರಿಸಿ ಮೀಮ್ಸ್ ಕ್ರಿಯೆಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಕೆಲವರು ರಾಹುಲ್ಗಾಂಧಿ ಬಯೋಲಾಜಿ ಕ್ಲಾಸ್ ಮತ್ತು ಗಣಿತ ಕ್ಲಾಸ್ ಎಂದು ತಮಾಷೆ ಮಾಡಿದ್ದರೆ, ಬಜೆಟ್ ಅಂದರೆ ಏನು ಎಂದು ಅರ್ಥವಾಗದಿದ್ದರೆ ಹೀಗೇ ಆಗೋದು ಎಂದು ಕೆಲವರು ಕಾಲೆಳೆದಿದ್ದಾರೆ.
ಕಾಂಗ್ರೆಸ್ನ ಭಾವಿ, ಕಾಯಂ ಅಧ್ಯಕ್ಷ ಹೀಗೇ ಮಾಡೋದಾ ಎಂದು ಕೆಲವರು ಟೀಕಿಸಿದ್ದರೆ, ಇನ್ನೇನು ಪ್ರೇಮಿಗಳ ದಿನ ಬಂದುಬಿಡ್ತು. ಅದಕ್ಕೆ ರಾಹುಲ್ ಗಾಂಧಿ ಪ್ರೇಮಿಗಳ ದಿನಕ್ಕಿಂತ ಮೊದಲು ಚೆನ್ನಾಗಿದ್ದು, ಯಾರೂ ಪ್ರೇಮಿಗಳು ಇಲ್ಲ ಎಂದು ಈ ದಿನದ ನಂತರ ಹೀಗೆ ಸಪ್ಪೆ ಮೋರೆ ಹಾಕಿಕೊಳ್ಳಲಿದ್ದಾರೆ ಎಂದು ಟೀಕಿಸಿದ್ದಾರೆ.
ರಾಯ್ತ ತಯಾರಿಸಿ ಬಿರಿಯಾನಿ ಸವಿದ ರಾಹುಲ್- ‘ನಲ್ಲ ಇರಕು’, ಅಮೆರಿಕಕ್ಕೂ ಕಳಿಸ್ತೇನೆ ಎಂದರು!
ಹುಡುಗರ ಜತೆ ಮಾತನಾಡಿದರೆ ಕೆಂಡಕಾರುತ್ತಾರೆ, ಜೀವನವೇ ಸಾಕಾಗಿ ಹೋಗಿದೆ ಮೇಡಂ…
ಕೆಜಿಎಫ್-2 ಬಿಡುಗಡೆ ದಿನ ರಜಾ ಬೇಕು… ಅಭಿಮಾನಿಗಳಿಂದ ಪ್ರಧಾನಿ ಮೋದಿಗೆ ಹೀಗೊಂದು ಮನವಿ…