ರೈಲಿನಿಂದ ಆಯತಪ್ಪಿ ಬಿದ್ದು ಸಾವಿನ ಬಾಯಲ್ಲಿದ್ದ ವೃದ್ಧನ ಜೀವ ಕಾಪಾಡಿದ ಪೊಲೀಸರು- ಸಿಸಿಟಿವಿಯಲ್ಲಿ ಸೆರೆ

railway-protection
Published on

ಕಲ್ಯಾಣ್​ (ಮಹಾರಾಷ್ಟ್ರ): ಆಯಸ್ಸು ಗಟ್ಟಿಯಿದ್ದರೆ ಸಾವಿನ ಬಾಯಿಯಿಂದಲೂ ಯಾರಾದರೂ ಬಂದು ಕಾಪಾಡುತ್ತಾರೆ ಎಂಬ ಮಾತಿದೆ. ಈ ಮಾತನ್ನು ಇಲ್ಲೊಂದು ಘಟನೆ ಅಕ್ಷರಶಃ ಸಾಬೀತು ಮಾಡಿದೆ.

ಮಹಾರಾಷ್ಟ್ರದ ಕಲ್ಯಾಣ್​ ರೈಲು ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. ಮನ್ಸೂರ್​ ಅಹಮದ್​ ಎಂಬ ಸುಮಾರು 75 ವರ್ಷದ ವೃದ್ಧರೊಬ್ಬರು ರಾತ್ರಿ 8 ಗಂಟೆ ಸುಮಾರಿಗೆ ಚಲಿಸುತ್ತಿರುವ ರೈಲನ್ನು ಹತ್ತಲು ಮುಂದಾಗಿದ್ದಾರೆ. ಈ ವೇಳೆ ರೈಲು ಚಲಿಸಿಬಿಟ್ಟಿದೆ. ಇದನ್ನು ತಿಳಿಯದ ಅವರು ಹತ್ತಲು ಮುಂದಾದಾಗ ಆಯತಪ್ಪಿ ಬಿದ್ದುಬಿಟ್ಟಿದ್ದಾರೆ. ಜತೆಗೆ ಅವರ ಬಳಿ ಇದ್ದ ಸಾಮಾನು ಕೂಡ ಬಿದ್ದುಹೋಗಿದೆ.

ಅರೆ ಕ್ಷಣವಾಗಿದ್ದರೂ ರೈಲಿನ ಅಡಿಯಲ್ಲಿ ವೃದ್ಧ ಸಿಲುಕಿರುತ್ತಿದ್ದರು. ರೈಲು ಹೊರಟಿತ್ತು. ಇದೇ ವೇಳೆ ಅಲ್ಲಿದ್ದ ರಕ್ಷಣಾ ಪಡೆಯ ಸಿಬ್ಬಂದಿ ದೌಡಾಯಿಸಿ ವೃದ್ಧನನ್ನು ಎಳೆದು ಈಚೆಗೆ ತಂದಿದ್ದಾರೆ, ಜತೆಗೆ ಅವರ ಬಳಿ ಇದ್ದ ಚೀಲವನ್ನೂ ಈಚೆಗೆ ಎಳೆದಿದ್ದಾರೆ.

ಇಬ್ಬರು ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ ಚಲಿಸುತ್ತಿರುವ ರೈಲಿನಲ್ಲಿ ಹತ್ತಲು ಹೋಗಿ ಫ್ಲಾಟ್​ಫಾರ್ಮ್​ನಲ್ಲೇ ಬಿದ್ದ 76 ವರ್ಷದ ವೃದ್ಧನ ಜೀವವನ್ನ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಥಾಣೆಯ ಕಲ್ಯಾಣ್​ ರೈಲ್ವೆ ನಿಲ್ದಾಣದಲ್ಲಿ 76 ವರ್ಷದ ವೃದ್ಧ ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವೃದ್ಧ ಚಲಿಸುತ್ತಿರುವ ರೈಲಿಗೆ ತುಂಬಾ ಹತ್ತಿರದಲ್ಲೇ ಬಿದ್ದಿದ್ದರು. ಸ್ವಲ್ಪ ಹೆಚ್ಚೂ ಕಡಿಮೆಯಾದರೂ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದರು. ಆದರೆ ಆದರೆ ರೈಲ್ವೆ ರಕ್ಷಣಾ ಪಡೆಯ ಜೀತೇಂದ್ರ ಗುಜಾರ್​ ಹಾಗೂ ಎಸ್​ಸಿ ಯಾದವ್​ ಅವರ ಪ್ರಾಣ ಕಾಪಾಡಿದ್ದಾರೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net